ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕತ್ತು ಸೀಳಿದ ಗಾಳಿಪಟ ದಾರ, ಬಾಲಕಿ ಸಾವು

By Srinath
|
Google Oneindia Kannada News

kite death manja
ಚೆನ್ನೈ, ಮಾ. 14: ಗಾಳಿಪಟದ ದಾರ ಮಾಂಜಾಕ್ಕೆ ಮತ್ತೊಂದು ಮಗು ಬಲಿಯಾಗಿದೆ. ಭಾನುವಾರದ ರಜೆ ಕಳೆಯಲು ಅಪ್ಪ ಅಮ್ಮನೊಂದಿಗೆ ಬೈಕಿನಲ್ಲಿ ಮರಿನಾ ಬೀಚ್-ಗೆ ತೆರಳುತ್ತಿದ್ದ ನಾಲ್ಕು ವರ್ಷದ ಬಾಲಕಿಯ ಕುತ್ತಿಗೆಯನ್ನು ಈ ದಾರ ಸೀಳಿದೆ. ತಕ್ಷಣ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಮಗು ಬದುಕುಳಿಯಲಿಲ್ಲ.

ಗಾಳಿಪಟ ಹಾರಿಬಿಡಲು ಮಾಂಜಾ ಎಂಬ ಹೆಸರಿನ ದಾರವನ್ನು ಬಳಸುತ್ತಾರೆ. ಗಾಜಿನ ಚೂರುಗಳಿಂದ ಸಿದ್ಧಪಡಿಸಲಾದ ಈ ದಾರ ತುಂಬಾ ಹರಿತವಾಗಿ ಮತ್ತು ಗಟ್ಟಿಯಾಗಿರುತ್ತದೆ. ಗಾಳಿಪಟ ಸ್ಪರ್ಧೆಗಳಲ್ಲಿ ಇದನ್ನು ಹೆಚ್ಚಾಗಿ ಬಳಸುತ್ತಾರೆ. ಪ್ರತಿಸ್ಪರ್ಧಿಗಳ ಗಾಳಿಪಟದ ದಾರವನ್ನು ತುಂಡರಿಸುವ ಉದ್ದೇಶದಿಂದ ಈ ದಾರವನ್ನು ಬಳಸುತ್ತಾರೆ. ಉತ್ತರ ಭಾರತದಲ್ಲಿ ಮಾಂಜಾ ಕಾಟ ಹೆಚ್ಚಾಗಿದೆ.

ಘಟನೆಯಿಂದ ತೀವ್ರ ಆಕ್ರೋಶಗೊಂಡ ಬಾಲಕಿಯ ಮನೆಯವರು ಆಸ್ಪತ್ರೆ ಬಳಿ ಧರಣಿ ನಡೆಸಿದರು. ಪೊಲೀಸರು ಸ್ಥಳಕ್ಕೆ ಧಾವಿಸಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುವ ಭರವಸೆ ನೀಡಿ ಪ್ರತಿಭಟಿಸುತ್ತಿದ್ದವರನ್ನು ಸಮಾಧಾನಪಡಿಸಿದರು. ಬಳಿಕ ಘಟನೆ ನಡೆದ ಸ್ಥಳದಲ್ಲಿ ವಾಸಿಸುವ (ಎಗ್ ಮೋರ್) ಮಕ್ಕಳನ್ನು ಕರೆದು ಗಾಳಿಪಟ ಬಿಡುತ್ತಿದ್ದವರ ಬಗ್ಗೆ ವಿಚಾರಿಸತೊಡಗಿದರು.

ಚೆನ್ನೈನಲ್ಲಿ 2006ರಲ್ಲಿ ಎಂಟು ವರ್ಷದ ಬಾಲಕ ಇದೇ ರೀತಿ ಮಾಂಜಾಕ್ಕೆ ಬಲಿಯಾಗಿದ್ದ. ಗಾಳಿಪಟ ಹಾರಾಟವನ್ನು ಆಗಿನಿಂದ ನಿಷೇಧಿಸಲಾಗಿದೆ. ಗಾಳಿಪಟ ಹಾರಿಸುವವರನ್ನು ಭಾರತೀಯ ದಂಡ ಸಂಹಿತೆಯಡಿ ಬಂಧಿಸಲಾಗುತ್ತದೆ. ಜತೆಗೆ ಮಾಂಜಾ ದಾರದ ಮಾರಾಟಗಾರರನ್ನೂ ಪೊಲೀಸರು ಬಂಧಿಸಬಹುದಾಗಿದೆ. ತಪ್ಪಿತಸ್ಥರಿಗೆ ಆರು ತಿಂಗಳ ಜೈಲು ಶಿಕ್ಷೆ ಮತ್ತು 500 ರುಪಾಯಿ ದಂಡ ವಿಧಿಸಲಾಗುತ್ತದೆ ಎಂದು ಹೆಚ್ಚುವರಿ ಪೊಲೀಸ್ ಆಯುಕ್ತ ಮೊಹಮದ್ ಶಕೀಲ್ ಅಖ್ತರ್ ತಿಳಿಸಿದ್ದಾರೆ. ನಿಷೇಧದ ನಡುವೆಯೂ ಮಾಂಜಾದಿಂದ ಗಾಳಿಪಟ ಹಾರಿಸುವುದು ಚೆನ್ನೈನಲ್ಲಿ ಅವ್ಯಾಹತವಾಗಿ ನಡೆದಿದೆ. ಕಳೆದೆರಡು ತಿಂಗಳಲ್ಲಿ ಮಾಂಜಾದಿಂದ ಗಾಯಗೊಂಡವರ ಸಂಖ್ಯೆ 10ರ ಗಡಿ ದಾಟಿದೆ.

English summary
A stray piece of sharp 'manja' string used for flying kites slashed a 4-year-old girl's neck. As a result the girl lost her life. The incident took place near Marina Beach in Chennai on March 13th Afternoon. Those who flout the kite-flying ban in Chennai are booked under sections of the Indian Penal Code
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X