ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಐಟಿ ಕಂಪನಿಗಳಿಗೆ ಬೇಕಂತೆ ಲಕ್ಷಾಂತರ ವೆರೈಟಿ ಜನ

By Srinath
|
Google Oneindia Kannada News

IT Industry to hire
ಮುಂಬೈ, ಮಾ.14: ದೇಶದ ಮಾಹಿತಿ ತಂತ್ರಜ್ಞಾನ (ಐಟಿ) ಕಂಪನಿಗಳು ಈ ವರ್ಷ ತನ್ನ ಉದ್ಯೋಗಿಗಳ ಸಂಖ್ಯೆಯನ್ನು ಬರೋಬ್ಬರಿ 2.25 ಲಕ್ಷದಷ್ಟು ಹೆಚ್ಚಿಸಿಕೊಳ್ಳಲು ಸಿದ್ಧತೆ ನಡೆಸಿವೆ. ಐಟಿ ಮತ್ತು ಹೊರಗುತ್ತಿಗೆ ಕಂಪನಿಗಳ ವಹಿವಾಟು 2011ನೇ ಸಾಲಿನಲ್ಲಿ 1.7 ಶತಕೋಟಿ ಡಾಲರ್ ತಲುಪಿದ್ದು, ಸುಭದ್ರವಾಗಿವೆ. ಇದು ದೇಶದ ತಲಾ ಆದಾಯದ ಶೇ. 5.8ರಷ್ಟು ಕೊಡುಗೆ ನೀಡಿವೆ.

ಐಟಿ ಮತ್ತು ಐಟಿ ಸೇವಾನಿತರ ಕ್ಷೇತ್ರದಲ್ಲಿ ದೇಶಾದ್ಯಂತ ಇದುವರೆಗೆ ಒಟ್ಟು 20 ಲಕ್ಷಕ್ಕೂ ಹೆಚ್ಚು ಮಂದಿ ಉದ್ಯೋಗದಲ್ಲಿ ತೊಡಗಿದ್ದಾರೆ. ಇದೇ ವೇಳೆ ಪರೋಕ್ಷವಾಗಿ 80 ಲಕ್ಷ ಮಂದಿ ಉದ್ಯೋಗ ಕಂಡುಕೊಂಡಿದ್ದಾರೆ. ದೂರಸಂಪರ್ಕ ಸೇವಾ ಕಂಪನಿಗಳು, ಮಾಧ್ಯಮ, ಬ್ಯಾಂಕಿಂಗ್, ಆರೋಗ್ಯ ವಲಯ, ಶಿಕ್ಷಣ ಕ್ಷೇತ್ರದಲ್ಲಿ ಐಟಿ ಬಳಕೆ ಹೆಚ್ಚಾಗುವುದರಿಂದ ಈ ರೀತಿಯ ಭಾರಿ ನೇಮಕಗಳು ನಡೆಯಲಿವೆ ಎಂದು ಉದ್ಯಮ ಮೂಲಗಳು ಹೇಳಿವೆ.

ಈ ಕ್ಷೇತ್ರಗಳಲ್ಲಿನ ಸೇವಾ ಕಂಪನಿಗಳು ಗ್ರಾಮೀಣ ಭಾರತದತ್ತ ಧಾವಿಸುವುದರಿಂದ ಐಟಿ ಸೇವಾ ಕಂಪನಿಗಳತ್ತ ಅವಕಾಶಗಳ ಮಹಾಪೂರವೇ ಹರಿದುಬರಲಿದೆ. 3ಜಿ ಸೇವೆ ಬಳಸುವ ಕಂಪನಿಗಳಿಗೆ ಹೆಚ್ಚಿನ ಅವಕಾಶ ದೊರಕಲಿವೆ. ಗಮನಾರ್ಹವೆಂದರೆ ಇದುವರೆಗೆ ಐಟಿ ಮಾರುಕಟ್ಟೆಯಲ್ಲಿ ಪರ್ಸನಲ್ ಕಂಪ್ಯೂಟರ್ ಗಳು ಅಧಿಪತ್ಯ ಸ್ಥಾಪಿಸಿದ್ದವು. ಆದರೆ ಇತ್ತೀಚಿನ ದಿನಗಳಲ್ಲಿ ಸ್ಮಾರ್ಟ್ ಫೋನ್, ಟ್ಯಾಬ್ಲೆಟ್, ನೋಟ್ ಬುಕ್ ಎಲ್ಲೆಲ್ಲೂ ರಾರಾಜಿಸತೊಡಗಿವೆ. ಇದು ಐಟಿ ಕ್ಷೇತ್ರದ ಬೆಳವಣಿಗೆಗೆ ವರವಾಗಿದೆ.

English summary
The Indian IT industry would add over 2.25 lakh employees in 2011. Media reports said revenues from the information technology and BPO industry will reach US $71.7 billion for 2011 and account for 5.8 per cent of the country's GDP.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X