ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜಾತಿಯ ಆಧಾರದ ಮೇಲೆ ಬಡವರ ಲೆಕ್ಕ ಸಾಧ್ಯವಿಲ್ಲ: ಗೌಡ

By Mahesh
|
Google Oneindia Kannada News

HD Devwgowda on poverty
ಬೆಂಗಳೂರು, ಮಾ. 13: ಹಿಂದುಳಿದ ವರ್ಗದಲ್ಲಿ ಮಾತ್ರವಲ್ಲದೆ ಎಲ್ಲಾ ಜಾತಿ ಮತ್ತು ವರ್ಗದಲ್ಲಿ ಬಡತನವಿದೆ. ಎಂದು ಜಾತಿಯ ಆಧಾರದ ಮೇಲೆ ಬಡವರನ್ನು ಲೆಕ್ಕ ಮಾಡಲು ಸಾಧ್ಯವಿಲ್ಲ. ಜಾತಿ, ವರ್ಗ ಅಥವಾ ಸಮುದಾಯಕ್ಕೆ ಬಡತನವನ್ನು ನಿಗದಿ ಮಾಡಿ ನಿರ್ಮೂಲನೆ ಮಾಡುವುದು ಕಷ್ಟಸಾಧ್ಯ ಎಂದು ಪಕ್ಷದ ಕಚೇರಿಯಲ್ಲಿ ಏರ್ಪಡಿಸಿದ್ದ 'ಹಿಂದುಳಿದ ವರ್ಗಗಳ ಸಮಾವೇಶ"ದಲ್ಲಿ ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ಎಚ್.ಡಿ.ದೇವೇಗೌಡ ಅವರು ಅಭಿಪ್ರಾಯಪಟ್ಟಿದ್ದಾರೆ.

ಸ್ವಾತಂತ್ರ ಬಂದು 60 ವರ್ಷಗಳಾದರೂ ದೇಶದ ಎಲ್ಲ ವರ್ಗಗಳಲ್ಲಿ ಬಡತನವಿದೆ. ಬಡತನದಿಂದ ರೈತರು ಆತ್ಮಹತ್ಯೆ ಮಾಡಿಕೊಳ್ಳವ ಹಂತಕ್ಕೆ ಬಂದಿದ್ದಾರೆ. ಆದರೆ, ಸರ್ಕಾರ ರೈತರ ಸಮಸ್ಯೆಗೆ ಸೂಕ್ತವಾಗಿ ಸ್ಪಂದಿಸುತ್ತಿಲ್ಲ. ಸಮಾಜದ ಎಲ್ಲ ಹಿಂದುಳಿದ ವರ್ಗಗಳ ಅಭಿವೃದ್ಧಿಗೆ ಸರಕಾರ ಶ್ರಮಿಸಬೇಕು ಎಂದು ದೇವೇಗೌಡ ಆಗ್ರಹಿಸಿದರು.

ಸರ್ಕಾರ ಹಗರಣಗಳನ್ನು ಬಿಚ್ಚಿಡಲು ಕುಮಾರಸ್ವಾಮಿ ಸಮರ್ಥರಿದ್ದಾರೆ. ಬಿಜೆಪಿ ಸರ್ಕಾರದ ಅಕ್ರಮಗಳ ಸರಮಾಲೆಯನ್ನು ರಾಜ್ಯದ ಜನತೆಗೆ ತೋರಿಸಬೇಕಿದೆ. ಕುಮಾರಸ್ವಾಮಿ ಅವರು ರಾಜ್ಯದ ಮುಂದಿನ ಮುಖ್ಯಮಂತ್ರಿಯಾಗಬೇಕು ಎಂದು ಮಾಜಿ ಮುಖ್ಯಮಂತ್ರಿ ಬಂಗಾರಪ್ಪ ತಮ್ಮ ಆಸೆಯನ್ನು ತೋಡಿಕೊಂಡರು.

ಅಪರೇಷನ್ ಕಮಲ ಮೂಲಕ ಸರ್ಕಾರ ನಡೆಸುತ್ತಿರುವ ಬಿಜೆಪಿ ಸರ್ಕಾರದೊಡನೆ ನೇರ ಹೋರಾಟಕ್ಕೆ ಇಳಿಯುವ ಕಾಲ ಬಂದಿದೆ. ಚನ್ನಪಟ್ಟಣ ಉಪ ಚುನಾವಣೆಯಲ್ಲಿ ಕಣಕ್ಕಿಳಿಯಲು ಒತ್ತಾಯ ಬಂದಿದೆ. ಆದರೆ, ಈ ಬಗ್ಗೆ ಇನ್ನೊಂದು ವಾರದಲ್ಲಿ ತೀರ್ಮಾನ ಪ್ರಕಟಿಸುವೆ. ಮೂರು ಕ್ಷೇತ್ರಗಳಲ್ಲಿ ಜೆಡಿಎಸ್ ತನ್ನ ಅಭ್ಯರ್ಥಿಗಳನ್ನು ಇಳಿಸಲಿದೆ. ಬಿಜೆಪಿಗೆ ಹಣ ಬಲವಿದ್ದರೆ, ನಮಗೆ ಜನಬಲವಿದೆ ಎಂದರು.

English summary
JDS Supreamo HD Devegowda said in Backward Community Convention there is poverty in all class and religions not only Backward community needs help. Every citizen has to be satisfied, So, one cannot count poor people on the basis of caste. JDS is preparing for Karnataka by poll.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X