ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಗೂಗಲ್, ಯೂಟ್ಯೂಬ್ ನಲ್ಲಿ ಬೃಹತ್ ಉದ್ಯೋಗವಕಾಶ

By Mahesh
|
Google Oneindia Kannada News

Google, Youtube hiring
ಸ್ಯಾನ್ ಫ್ರಾನಿಸ್ಕೋ, ಮಾ.12: ವಿಡಿಯೋ ಹಂಚಿಕೆ ವೆಬ್ ತಾಣ ಯೂಟ್ಯೂಬ್ ನ ಮಾತೃ ಸಂಸ್ಥೆ ಗೂಗಲ್ ನಲ್ಲಿ ಬೃಹತ್ ಉದ್ಯೋಗವಕಾಶಗಳನ್ನು ನೀಡುತ್ತಿದೆ. ವಿಶ್ವದೆಲ್ಲೆಡೆ ಈ ಬಗ್ಗೆ ಪ್ರಕಟಣೆ ಹೊರಡಿಸಿರುವ ಗೂಗಲ್, ಉತ್ತಮ ಪ್ರತಿಭಾವಂತರನ್ನು ಮಾತ್ರ ಆರಿಸಿಕೊಳ್ಳುವುದಾಗಿ ಹೇಳಿದೆ.

2011 ರಲ್ಲಿ ಶೇ.30ರಷ್ಟು ಸಿಬ್ಬಂದಿ ಹೆಚ್ಚಳ ಮಾಡಲಾಗುತ್ತದೆ. ಅಂದರೆ ಸುಮಾರು 600 ರಿಂದ 700 ಹೊಸ ಅಭ್ಯರ್ಥಿಗಳಿಗೆ ಅವಕಾಶ ಸಿಗಲಿದೆ. ಕಳೆದ ಆರು ವರ್ಷಗಳಲ್ಲಿ ಇದು ಬೃಹತ್ ಉದ್ಯೋಗ ಅವಕಾಶವಾಗಲಿದೆ. 2010ರಲ್ಲಿ ಸಿಬ್ಬಂದಿ ಹೆಚ್ಚಳದ ಬಗ್ಗೆ ಯೋಚಿಸಿದರೂ, ಸಾಧ್ಯವಾಗಿರಲಿಲ್ಲ. ನಿಮ್ಮಲ್ಲಿ ಪ್ರತಿಭೆ ಇದ್ದರೆ ತಪ್ಪದೇ ಅರ್ಜಿ ಹಾಕಿ ಎಂದು ಯೂಟ್ಯೂಬ್ ನ ಮಾನವ ಸಂಪನ್ಮೂಲ ಅಧಿಕಾರಿ ಜೆಫ್ ಫರ್ಗುಸನ್ ಗೂಗಲ್ ಬ್ಲಾಗ್ ನಲ್ಲಿ ಬರೆದುಕೊಂಡಿದ್ದಾರೆ.

ಪ್ರತಿ ನಿಮಿಷಕ್ಕೆ ಸುಮಾರು 35 ಗಂಟೆಗಳ ಅವಧಿಯ ವಿಡಿಯೋಗಳು ಯೂಟ್ಯೂಬ್ ಗೆ ಅಪ್ ಲೋಡ್ ಆಗುತ್ತದೆ ಹಾಗೂ ಪ್ರತಿದಿನ 2 ಬಿಲಿಯನ್ ವಿಡಿಯೋಗಳು ವೀಕ್ಷಿಸಲ್ಪಡುತ್ತದೆ. ಪ್ರಸ್ತುತ ಯೂಟ್ಯೂಬ್ ನಲ್ಲಿ ಚಿತ್ರ ನಿರ್ಮಾಪಕರು ಹಾಗೂ ಸಂಗೀತಗಾರರು ಉದ್ಯೋಗಿಗಳಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಅಡ್ಮಿನ್, ಜಾಹೀರಾತು ಹಾಗೂ ಸಾರ್ವಜನಿಕ ಸಂಪರ್ಕ ಮುಂತಾದ ವಿಭಾಗಕ್ಕೆ ನೇಮಕಾತಿ ಆಗಬೇಕಿದೆ. ಬಿಸಿನೆಸ್ ಡೆವಲಪ್ ಮೆಂಟ್, ಎಚ್ ಆರ್, ಕಾನೂನು ಹಾಗೂ ಸಾರ್ವಜನಿಕ ನಿಯಮಾವಳಿಗಳು ಮುಂತಾದ ವಿಭಾಗದಲ್ಲೂ ಅವಕಾಶಗಳಿವೆ[ಹೆಚ್ಚಿನ ವಿವರಗಳಿಗೆ ಯೂಟ್ಯೂಬ್ ಜಾಬ್ ಪೇಜ್ ನೋಡಿ]

ನೆಕ್ಸ್ಟ್ ನ್ಯೂ ನೆಟ್ ವರ್ಕ್ಸ್ ವೆಬ್ ಆಡ್ ಸಂಸ್ಥೆಯನ್ನು ಖರೀದಿಸಿರುವ ಯೂಟ್ಯೂಬ್, ಮಾಹಿತಿ ಸೃಷ್ಟಿ ಕಾರ್ಯಕ್ಕೆ ಹೆಚ್ಚು ಒತ್ತು ನೀಡುತ್ತಿದೆ. ಇತ್ತೀಚಿನ ದಿನಗಳಲ್ಲಿ ಗೂಗಲ್, ಯಾಹೂ ಹಾಗೂ ಮೈಕ್ರೋಸಾಫ್ಟ್ ನಂಥ ದೊಡ್ಡ ಸಂಸ್ಥೆಗಳಿಂದ ಉದ್ಯೋಗಿಗಳು ಫೇಸ್ ಬುಕ್, ರೊವಿಯೊ ಮುಂತಾದ ಸಣ್ಣ ಕಂಪೆನಿಗಳತ್ತ ಮುಖ ಮಾಡಿದ್ದಾರೆ, ಫೇಸ್ ಬುಕ್ ಸೇರಿದ ಇತ್ತೀಚಿನ ಉದ್ಯೋಗಿಗಳಲ್ಲಿ ಶೇ.10 ರಷ್ಟು ಜನ ಗೂಗಲ್ ನಿಂದ ಬಂದವರು ಎಂಬುದು ವಿಶೇಷ. ಈ ಜ್ಞಾನ ಪ್ರವಾಹವನ್ನು ತಡೆಗಟ್ಟಲು ನವೆಂಬರ್ 2010ರಲ್ಲಿ ಗೂಗಲ್ ತನ್ನ ಸಿಬ್ಬಂದಿಗಳಿಗೆ ಶೇ. 30 ರಷ್ಟು ಸಂಬಳದಲ್ಲಿ ಹೆಚ್ಚಳ ಹಾಗೂ ಶೇ 250ರಷ್ಟು ಬೋನಸ್ ನೀಡಿ ಅಚ್ಚರಿ ಮೂಡಿಸಿತ್ತು. ಒಟ್ಟಿನಲ್ಲಿ ಪ್ರತಿಭಾವಂತರಿಗೆ ಮತ್ತೆ ಮಣೆ ಹಾಕಿ ಸಕಲ ಸೌಲಭ್ಯ ನೀಡಲು ಗೂಗಲ್ ಟೊಂಕ ಕಟ್ಟಿ ನಿಂತಿದೆ.

English summary
The video sharing website owned by Google Inc, YouTube announced its plan to increase the number of staffs. YouTube said that it is looking for "top talent from around the world." This hiring will be the biggest in YouTubes' six-year history.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X