ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅರ್ಚಕರೇ ಸಪ್ತ ವ್ಯಸನಗಳಿಂದ ದೂರವಿರಿ

By Srinath
|
Google Oneindia Kannada News

Muzrai Department
ಬೆಂಗಳೂರು, ಮಾ. 12: ಅರ್ಚಕರೇ ಬೇಡ್ವೇ ಬೇಡ. ಈ ಏಳೂ ಪಾಪಗಳು ನಿಮಗೆ ಸರ್ವತಾ ಸಾಧುವಲ್ಲ... ಜೂಜು ಬೇಡ, ಅನೈತಿಕ ಸೆಕ್ಸ್ ಬೇಡ, ಧೂಮಪಾನ ಬೇಡ, ಕುಡಿತ ಬೇಡ, ಅಪರಾಧ ಬೇಡ, ಕಳ್ಳತನ ಬೇಡ, ವಂಚನೆ ಬೇಡ. ಇವುಗಳಿಂದ ಖಡಕ್ಕಾಗಿ ದೂರವಿರಿ. ಹೀಗೆಂದು ರಾಜ್ಯ ಮುಜರಾಯಿ ಇಲಾಖೆ ತನ್ನ ವ್ಯಾಪ್ತಿಗೆ ಬರುವ ದೇವಸ್ಥಾನಗಳಲ್ಲಿ ಅರ್ಚಕರಾಗಿ ಸೇವೆ ಸಲ್ಲಿಸುತ್ತಿರುವವರಿಗೆ ಹೊಸ ಕಾಯಿದೆ ಮೂಲಕ ಫರ್ಮಾನು ಹೊರಡಿಸಲು ಅನುವಾಗುತ್ತಿದೆ.

ಹಾಗಾದರೆ ನಾವು ಇಂತಹ ಮಹಾಪಾಪ ಕೃತ್ಯಗಳಲ್ಲಿ ಭಾಗಿಯಾಗುತ್ತಿದ್ದೇವೆ ಎಂಬ ಗುಮಾನಿಯೇ ನಿಮಗೆ ಎಂದು ಮರು ಪ್ರಶ್ನಿಸಬೇಡಿ. ನಿಮ್ಮದೇ ವೃತ್ತಿಯ ಪಾವಿತ್ರ್ಯತೆಯನ್ನು ಎತ್ತಿಹಿಡಿಯಲು ಇಲಾಖೆಯು ಈ ನೀತಿ ಸಂಹಿತೆಯನ್ನು ಜಾರಿಗೊಳಿಸಲಿದೆ. ಇದನ್ನು ಪಾಲಿಸದಿದ್ದರೆ ಕೆಲಸ ಕಳೆದುಕೊಳ್ಳುವುದು ಗ್ಯಾರಂಟಿ ಎಂದು ಇಲಾಖೆಯು ತನ್ನ ಅಧೀನದಲ್ಲಿರುವ 30,000 ಅರ್ಚಕರಿಗೆ ತಿಳಿಯ ಹೇಳಿದೆ. ಅಷ್ಟೇ ಅಲ್ಲ, ಸೋಂಕು ರೋಗ ಮುಂತಾದ ಅನಾರೋಗ್ಯದಿಂದಲೂ ಮುಕ್ತರಾಗಿರುವಂತೆ ಆದೇಶಿಸಲಿದೆ.

ಭಕ್ತಾದಿಗಳಿಗೆ ತೀರ್ಥ, ಪ್ರಸಾದ ವಿತರಿಸುವ ಅರ್ಚಕರು ಪವಿತ್ರರಾಗಿರಬೇಕು. ಆದ್ದರಿಂದ ಕರ್ನಾಟಕ ಧಾರ್ಮಿಕ ದತ್ತಿ ಕಾಯಿದೆಗೆ (Karnataka Hindu Religious Institutions and Charitable Endowments Act, 1997) ತಿದ್ದುಪಡಿ ತರುವ ಪ್ರಸ್ತಾವನೆಯು ಇಲಾಖೆಯ ಮುಂದಿದ್ದು, ಅರ್ಚಕರನ್ನು ಶುದ್ಧಿಗೊಳಿಸುವ ಸದಾಶಯ ಹೊಂದಿದೆ. ಪ್ರಸ್ತಾವನೆ ಇನ್ನೂ ಕಾನೂನು ಚೌಕಟ್ಟಿಗೆ ಒಳಪಟ್ಟಿಲ್ಲ. ಜತೆಗೆ ಆಯಾ ದೇವಸ್ಥಾನಗಳ ಧಾರ್ಮಿಕ ರೀತಿರಿವಾಜುಗಳಿಗೆ ತಕ್ಕಂತೆ ಅರ್ಚಕರು ವೇದ, ಮಂತ್ರ, ಶ್ಲೋಕಗಳ ಬಾಯಿಪಾಠ ಮಾಡುವುದು ಅನಿವಾರ್ಯವಾಗಲಿದೆ ಎಂದು ಮುಜರಾಯಿ ಖಾತೆ ಸಚಿವ ವಿ.ಎಸ್. ಆಚಾರ್ಯ ಮಾಹಿತಿ ನೀಡಿದ್ದಾರೆ.

ಇದೇ ವೇಳೆ ದೀರ್ಘ ಕಾಲದಿಂದ ಚರ್ಚೆಗೆ ಗ್ರಾಸವಾಗಿರುವ ಹುಂಡಿ ಕಾಸಿನ ಬಗ್ಗೆಯೂ ಹೊಸ ಕಾನೂನಿನಲ್ಲಿ ಪ್ರಸ್ತಾಪ ಮಾಡಲಾಗಿದೆ. ಹುಂಡಿ ಕಾಸು ಮುಂತಾದವು ನೇರವಾಗಿ ದೇವಸ್ಥಾನದ ಆಡಳಿತಕ್ಕೆ ಸೆರಬೇಕು. ತಟ್ಟೆ ಕಾಸು ಮತ್ತು ಸೇವಾ ಕಮಿಷನ್ ಅನ್ನು ಅರ್ಚಕರು ಪಡೆಯಬಹುದು.

English summary
Now, temple priests across Karnataka will be bound by a stringent code of conduct to uphold the sanctity of their profession. Strictly there will be No gambling. No immoral sex. No smoking says muzrai minister V S Acharya.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X