• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಬಾಬಾಬುಡಾನ್‌ಗಿರಿಯಲ್ಲಿ ಉರುಸ್ ಗೆ ಬನ್ನಿ

By Mahesh
|

ಚಿಕ್ಕಮಗಳೂರು, ಮಾ. 11: ಇಲ್ಲಿನ ಬಾಬಾಬುಡಾನ್‌ಗಿರಿಯಲ್ಲಿರುವ ಇನಾಂ ದತ್ತಾತ್ರೇಯ ಪೀಠದಲ್ಲಿ ಮಾ.20ರಿಂದ 22 ರವರೆಗೆ ಮೂರು ದಿನಗಳ ಕಾಲ ಉರುಸ್ ಕಾರ್ಯಕ್ರಮ ನಡೆಸಲು ತೀರ್ಮಾನಿಸಲಾಗಿದೆ ಎಂದು ಚಿಕ್ಕಮಗಳೂರು ಜಿಲ್ಲಾಧಿಕಾರಿ ಡಾ.ಎನ್. ಎಸ್.ಚನ್ನಪ್ಪ ಗೌಡ ತಿಳಿಸಿದ್ದಾರೆ. ಈ ಸಂಬಂಧ ಉರುಸ್ ಸಮಿತಿಯ ಮುಖಂಡರೊಡನೆ ಮಾತುಕತೆ ನಡೆಸಲಾಗಿದೆ. ಬಾಬಾಬುಡನ್‌ಗಿರಿ ಸಂದಲ್ ಸಮಿತಿಯ ಅಧ್ಯಕ್ಷ ಔರಂಗಜೇಬ್ ಹಾಗೂ ಶಾಖಾದ್ರಿಗಳು ಹೆಚ್ಚಿನ ಭದ್ರತೆ ಕೋರಿದ್ದಾರೆ ಎಂದು ಚನ್ನಪ್ಪಗೌಡ ಹೇಳಿದರು.

ಉರುಸ್ ಕಾರ್ಯಕ್ರಮದ ಮೊದಲ ದಿನ ಭಕ್ತಾದಿಗಳಿಗೆ ಗಿರಿಯಲ್ಲಿ ಗುಹೆ ದರ್ಶನಕ್ಕೆ ಅವಕಾಶ ನೀಡಲಾಗುವುದು ಎಂದು ತಿಳಿಸಿದ ಅವರು, ಉರುಸ್ ಸಂದರ್ಭದಲ್ಲಿ ಭಕ್ತಾದಿಗಳ ಅನುಕೂಲಕ್ಕೆ ಪ್ರಸಾದ ವಿತರಣೆಗೆ ವ್ಯವಸ್ಥೆ, ಗಂಜಿ ಕೇಂದ್ರಗಳು, ತಾತ್ಕಾಲಿಕ ಶೆಡ್ ವ್ಯವಸ್ಥೆ, ಕುಡಿಯುವ ನೀರು ಸೇರಿದಂತೆ ಎಲ್ಲ ರೀತಿಯ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಲಾಗುವುದು ಎಂದರು.

ಬಾಬಾಬುಡಾನ್‌ಗಿರಿಗೆ ಹೋಗುವ ರಸ್ತೆ ಕುಸಿದಿರುವುದರಿಂದ ಘನ ವಾಹನಗಳ ಸಂಚಾರಕ್ಕೆ ಅವಕಾಶವಿಲ್ಲ. ಉರುಸ್ ಆಚರಣೆ ಸಂದರ್ಭದಲ್ಲಿ ಚಿಕ್ಕಮಗಳೂರು ಹಾಗೂ ತರಿಕೆರೆ ಕಡೆಯಿಂದ ದೊಡ್ಡ ಸರಕು ವಾಹನಗಳನ್ನು ನಿಷೇಧಿಸಲಾಗಿದೆ. ಗುಹೆಯಿಂದ ಸುಮಾರು 3 ಕಿ.ಮೀ ವ್ಯಾಪ್ತಿಯವರೆಗೂ(ಗಿರಿಯಿಂದ ಹೊನ್ನಮ್ಮನ ಹಳ್ಳದ ವರೆಗೂ) ಎಲ್ಲ ರೀತಿಯ ಭದ್ರತಾ ವ್ಯವಸ್ಥೆಯನ್ನು ಕಲ್ಪಿಸಲಾಗುವುದು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವಿಕಾಸ್ ಕುಮಾರ್ ವಿವರಿಸಿದರು.

ಮೂರು ದಿನಗಳ ಕಾಲ ನಡೆಯುವ "ಸಂದಲ್ ಉರುಸ್‌"ನಲ್ಲಿ ರಾಜ್ಯದ ವಿವಿಧೆಡೆಯಿಂದ ಹಾಗೂ ಆಂಧ್ರಪ್ರದೇಶ, ತಮಿಳುನಾಡು ಮತ್ತು ಕೇರಳ ರಾಜ್ಯಗಳಿಂದ ಭಕ್ತರು ಆಗಮಿಸುತ್ತಾರೆ. ಮೊದಲ ದಿನ ಫಕೀರರು ಗೋರಿಗಳಿಗೆ ಗಂಧ ಲೇಪಿಸಿ, ವಿವಿಧ ವಿಧಿ ವಿಧಾನ ನೆರವೇರಿಸಿದರು. ಗೋರಿಗಳಿಗೆ ಲೇಪಿಸುವ ಗಂಧವನ್ನು ಬಡಾಮಕಾನ್ ಮಸೀದಿ ಹಾಗೂ ಅತ್ತಿಗುಂಡಿ ಗ್ರಾಮದಲ್ಲಿ ತಯಾರಿಸಲಾಗುತ್ತದೆ. ಭಕ್ತರು ತಾವು ತಂದಿದ್ದ ಹೂವು, ಸಕ್ಕರೆ, ತೆಂಗಿನಕಾಯಿಗಳನ್ನು ಅರ್ಪಿಸಿ, ಗಂಧ ಲೇಪಿಸುತ್ತಾರೆ. ನಂತರ ಜಿಲ್ಲಾಡಳಿತ ವತಿಯಿಂದ ಭಕ್ತರಿಗೆ ಪ್ರಸಾದ ನೀಡಲಾಗುತ್ತಿದೆ.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Annual jatra or Sandal urus celebrated by both Hindus and Muslim in inam dattatreya peetha, Bababudan giri, Chikmagaluru will be from Mar 20 to 22 said district commissioner NS Channappa Gowda. Baba Budangiri Sufi shrine worshipped by both Muslims and Hindus. Shah Khadri and devotees are allowed to enter the cave this time. which is under rernovation work.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more