ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಿಶ್ವಕಪ್ :ತ್ರಿವಿಕ್ರಮ ಸಚಿನ್ ರಿಂದ ಮತ್ತೊಂದು ಪರಾಕ್ರಮ

By Mahesh
|
Google Oneindia Kannada News

ನವದೆಹಲಿ, ಮಾ.10: ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಭಾರವಾದ ಬ್ಯಾಟ್ ಹಿಡಿದು ಮೈದಾನಕ್ಕೆ ಇಳಿದರೆ ಅವತ್ತು ಒಂದು ದಾಖಲೆ ನಿರ್ಮಾಣ ಗ್ಯಾರಂಟಿ. ದಾಖಲೆಗಳ ಬಗ್ಗೆ ಅಷ್ಟಾಗಿ ತಲೆ ಕೆಡಿಸಿಕೊಳ್ಳದ ನನ್ನ ನೈಜ ಆಟಕ್ಕೆ ಹೆಚ್ಚು ಕೊಡುತ್ತೇನೆ ಎಂದು ಸಚಿನ್ ಹೇಳಿಕೊಂಡರೂ ದಾಖಲೆಗಳು ಅವರನ್ನು ಹಿಂಬಾಲಿಸದೇ ಬಿಡುವುದಿಲ್ಲ. ಬುಧವಾರ ಫಿರೋಜ್ ಶಾ ಕೋಟ್ಲಾ ಮೈದಾನದಲ್ಲಿ ನೆದರ್ಲೆಂಡ್ ವಿರುದ್ಧದ ವಿಶ್ವಕಪ್ 2011 ಲೀಗ್ ಪಂದ್ಯದಲ್ಲೂ ಮತ್ತೊಂದು ಮೈಲಿಗಲ್ಲು ಸ್ಥಾಪಿಸಿದರು. ವಿಶ್ವಕಪ್ ಟೂರ್ನಿಗಳಲ್ಲಿ 2000 ರನ್ ಪೂರೈಸಿದ ಮೊದಲ ಕ್ರಿಕೆಟಿಗ ಎಂದು ಕೀರ್ತಿಗೆ ಪಾತ್ರರಾದರು.

ನೆದರ್ಲೆಂಡ್ ನ ಟೆನ್ ಡೊಶೆಟ್‌ರ 4ನೇ ಓವರ್‌ನಲ್ಲಿ 4, 5 ಮತ್ತು 6ನೇ ಎಸೆತಗಳಲ್ಲಿ ಸತತವಾಗಿ ಬೌಂಡರಿ ಗಿಟ್ಟಿಸುವ ಮೂಲಕ ಈ ಮಹತ್ವದ ಮೈಲುಗಲ್ಲನ್ನು 37 ವರ್ಷದ ಮಹಾನ್ ಕ್ರಿಕೆಟಿಗ ಮುಟ್ಟಿದರು. ಸಚಿನ್ ಹೆಚ್ಚು ಹೊತ್ತು ಕ್ರೀಸ್ ನಲ್ಲಿ ನಿಲ್ಲಲಿಲ್ಲ. 22 ಎಸೆತಗಳನ್ನು ಎದುರಿಸಿ 6 ಬೌಂಡರಿ ಇರುವ 27 ರನ್‌ಗಳನ್ನು ಗಳಿಸಿ ಪೀಟರ್ ಸೀಲಾರ್ ಎಸೆತವನ್ನು ಬೌಂಡರಿಗೆ ಅಟ್ಟಲು ವಿಫಲ ಯತ್ನ ನಡೆಸಿ ಬ್ರಾಡ್ಲಿ ಕ್ರೂಗರ್‌ಗೆ ಕ್ಯಾಚಿತ್ತು ನಿರ್ಗಮಿಸಿದರು.

ವಿಶ್ವಕಪ್ : ಅಭ್ಯಾಸ ಪಂದ್ಯಗಳ ಫಲಿತಾಂಶ ಮುಖಪುಟ | ಚಿತ್ರಪಟ | ಅಂಕಗಳ ಕೋಷ್ಟಕ | ಟಾಪ್ ಬ್ಯಾಟ್ಸ್ ಮನ್| ಟಾಪ್ ಬೌಲರ್

ದಾಖಲೆಯ 6ನೇ ವಿಶ್ವಕಪ್ ಆಡುತ್ತಿರುವ ಸಚಿನ್ ತೆಂಡುಲ್ಕರ್ 1992ರಲ್ಲಿ ಮೊದಲ ವಿಶ್ವಕಪ್ ಆಡಿದ್ದರು. ಈ ವರೆಗೆ 40 ವಿಶ್ವಕಪ್ ಪಂದ್ಯಗಳನ್ನು ಆಡಿ 39 ಇನಿಂಗ್ಸ್‌ಗಳಲ್ಲಿ 2009 ರನ್ ಪೂರೈಸಿದ್ದಾರೆ. ವಿಶ್ವಕಪ್‌ನಲ್ಲಿ 5 ಶತಕ ಮತ್ತು 13 ಅರ್ಧಶತಕ ಬಾರಿಸಿದ್ಧಾರೆ. ಇದು ಕೂಡಾ ದಾಖಲೆಯಾಗಿದೆ. ಗರಿಷ್ಠ ರನ್ 152. 447 ಏಕದಿನ ಪಂದ್ಯಗಳಲ್ಲಿ 47 ಶತಕ 93 ಅರ್ಧಶತಕಗಳಿರುವ 17815 ರನ್ ಗಳನ್ನು ಸಚಿನ್ ಕಲೆಹಾಕಿದ್ದಾರೆ. ಗರಿಷ್ಠ ರನ್ 200 ರನ್ ಗಳಿಸಿರುವ ಏಕೈಕ ಆಟಗಾರ. ಆಸ್ಟ್ರೇಲಿಯಾ ಆಟಗಾರ ರಿಕಿ ಪಾಂಟಿಂಗ್ ಹೆಚ್ಚು ರನ್ ಗಳಿಸಿದ ಆಟಾಗರರ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದ್ದಾರೆ. ರಿಕಿ 42 ವಿಶ್ವಕಪ್ ಪಂದ್ಯಗಳಿಂದ 1577 ರನ್ ಗಳಿಸಿದ್ದಾರೆ.

English summary
World Cup 2011 : Sachin has become first cricketer to score 2000 runs in World Cup tournament. He achieved this feet in tie against Netherlands on Mar. 9. 37 Year old cricketer also holds record for the most half-centuries and back to back five hundreds in WC Tournament.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X