ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಂ. ವೈದ್ಯಕೀಯ ಕಾಲೇಜಿನಲ್ಲಿ ಮೊಬೈಲ್ ಬಳಸಿದರೆ ...

By Srinath
|
Google Oneindia Kannada News

Cellphones in Campus
ಮಂಗಳೂರು, ಮಾ. 10: ವಾಹನ ಚಲಾಯಿಸುವಾಗ ಮೊಬೈಲ್ ಫೋನ್ ಬಳಸಿದರೆ ಪೊಲೀಸರು 300 ರುಪಾಯಿ ದಂಡ ಪೀಕುತ್ತಾರೆ. ಯಡವಟ್ಟಾದರೆ ಇನ್ನೂ ಏನು ಬೇಕಾದರೂ ಆಗಬಹುದು. ಹಾಗೆಯೇ ಇಲ್ಲಿನ ವೈದ್ಯಕೀಯ ಕಾಲೇಜು ಆವರಣದಲ್ಲೂ ಮೊಬೈಲ್ ಬಳಸುವ ವಿದ್ಯಾರ್ಥಿಗಳಿಗೆ ದಂಡ ವಿಧಿಸುವ ಪರಿಪಾಠ ಇತ್ತೀಚೆಗೆ ಕಾಣಿಸಿಕೊಂಡಿದೆ. ಇಲ್ಲಿನ ಭಾವಿ ಮೆಡಿಕೋಗಳು ಕಾಲೇಜು ತರಗತಿಯೊಳಗಷ್ಟೇ ಅಲ್ಲ ಕ್ಯಾಂಪಸ್-ನಲ್ಲಿ ಮೊಬೈಲ್ ಬಳಸುತ್ತಿರುವುದು ಸಿಬ್ಬಂದಿ ಕಣ್ಣಿಗೆ ಬಿದ್ದರೂ 10,000 ರು. ದಂಡ ಜತೆಗೆ ಒಂದು ವಾರ ಕಾಲ ಕಾಲೇಜಿನಿಂದ ಬಾಹರ್ ಶಿಕ್ಷೆ !

ಇದೇನ್ ಮಹಾ. ಇತ್ತೀಚೆಗೆ ಬಹುತೇಕ ಎಲ್ಲ ಶಿಕ್ಷಣ ಸಂಸ್ಥೆಗಳಲ್ಲೂ ಕಂಡುಬರುತ್ತಿದೆ. ವಿದ್ಯಾರ್ಥಿಗಳನ್ನು ಹದ್ದುಬಸ್ತಿನಲ್ಲಿಡಲು ಇಂತಹ ಪ್ರಯೋಗಗಳು ಅನಿವಾರ್ಯ ಎಂಬುದು ಅನೇಕ ಪ್ರಿನ್ಸಿಪಾಲ್-ಗಳ ಅಳಲು. ಇನ್ನು ಕಾಲೇಜಿನ ಆಡಳಿತಾಧಿಕಾರಿಯಂತೂ 'ಇಂತಹ ವ್ಯವಸ್ಥೆ ಜಾರಿಗೆ ಬಂದ ಮೇಲೆ ವಿದ್ಯಾರ್ಥಿಗಳು ದಾರಿಗೆ ಬಂದಿದ್ದಾರೆ. ಶಿಸ್ತು ಎಂಬುದು ಅವರಲ್ಲಿ ಮನೆಮಾಡುತ್ತಿದೆ. ದಂಡ ನೀತಿಗೆ ವಿರೋಧವೇನೂ ಇಲ್ಲ' ಎಂದು ಸಮಾಧಾನ ವ್ಯಕ್ತಪಡಿಸಿದ್ದಾರೆ.

ಮಂಗಳೂರಿನ ಫಾದರ್ ಮುಲ್ಲರ್ ಮೆಡಿಕಲ್ ಕಾಲೇಜಿನಲ್ಲಿ ಇಂತಹ ವ್ಯವಸ್ಥೆಯನ್ನು ಇತ್ತೀಚೆಗೆ ಜಾರಿಗೆ ತರಲಾಗಿದೆ. ಇಲ್ಲಿ ಇನ್ನೂ ಥರಹೇವಾರಿ ದಂಡಗಳನ್ನೂ ವಿಧಿಸಲಾಗುತ್ತಿದೆ. ಒಂದು ಗಂಟೆ ಅವಧಿಯ ಕ್ಲಾಸ್-ಗೆ ಚಕ್ಕರ್ ಹೊಡೆದರೆ ವಿದ್ಯಾರ್ಥಿಯ ಜೇಬಿನಿಂದ 500 ರು. ನಿಕಾಲಿ ಎಂದೇ ಅರ್ಥ. ರಜೆ ಮುಗಿದರೂ ತಡವಾಗಿ ಬಂದರೆ ಅಥವಾ ಜೀನ್ಸ್ ಧರಿಸಿದರೆ ಅಥವಾ ಗುಂಡಿಗೆ ತೋರಿಸಲು ಅಂಗಿ ಗುಂಡಿ ಬಿಚ್ಚಿದರೆ ತೆಪ್ಪಗೆ 1,000 ರು. ಕಕ್ಕಬೇಕು.

ಇನ್ನು ದೈನಂದಿನ ಕ್ಲಾಸಿಗೆ ಒಂದೇ ನಿಮಿಷ ತಡವಾಗಿ ಬಂದರೂ ಐದು ಹೌದು ಐದು ಸಾವಿರ ರುದಂಡ ಕಟ್ಟಲೇಬೇಕು. ಆಯ್ತು ದಂಡ ಆಮೇಲೆ ಕಟ್ಟುವೆ. ಮೊದಲು ತರಗತಿಗೆ ಅಟೆಂಡ್ ಆಗುವೆ ಎಂದು ಗೋಗರೆದರೆ ಏನೂ ಪ್ರಯೋಜನವಿಲ್ಲ. ಕ್ಯಾಂಪಸ್-ನಲ್ಲೇ ಇರುವ ಬ್ಯಾಂಕಿನಿಂದ ದಂಡ ಕಟ್ಟಿದ ರಶೀದಿ ತಂದರೆ ಮಾತ್ರ ಪ್ರವೇಶಾವಕಾಶ. ಇದಕ್ಕೆ ಕಿರಿಯರು, ಹಿರಿಯರು ಎಂಬ ಭೇದವಿಲ್ಲ. ಸ್ನಾತಕೋತ್ತರ ವಿದ್ಯಾರ್ಥಿಗಳಿಗೂ ದಂಡ ನೀತಿ ಅನ್ವಯವಾಗುತ್ತದೆ. ಇನ್ನು ಇದನ್ನೇ ಹವ್ಯಾಸವಾಗಿಸಿಕೊಂಡರೆ ನೇರವಾಗಿ ಪೋಷಕರಿಗೆ ಬುಲಾವ್ ಹೋಗುತ್ತದೆ.

English summary
Using a cellphone in a medical college campus in Mangalore will attract a a fine of Rs 10,000 plus confiscation of the cellphone and a week's suspension from class. So students while in the campus should be education minded.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X