• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ದೆಹಲಿಯಲ್ಲಿ ಧೋನಿ ಹುಡುಗರಿಗೆ ಡಚ್ಚರ ಸವಾಲು

By Mahesh
|

ನವದೆಹಲಿ, ಮಾ.9: ಕ್ವಾರ್ಟರ್ ಫೈನಲ್‌ ಹಂತ ತಲುಪುವ ಗುರಿಯಿಂದ ಈ ಪಂದ್ಯ ತುಂಬಾ ಮುಖ್ಯ. ನೆದರ್ಲೆಂಡ್ ದುರ್ಬಲ ತಂಡವಲ್ಲ. ಟೀಂ ಇಂಡಿಯಾ ಬೌಲಿಂಗ್ ಇನ್ನೂ ಸುಧಾರಿಸಬೇಕಿದೆ ಎಂದು ನಾಯಕ ಎಂಎಸ್ ಧೋನಿ ಹೇಳಿದ್ದಾರೆ. ವಿಶ್ವಕಪ್‌ನ ಬಿ ಗುಂಪಿನ ಅಂಕಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿರುವ ಭಾರತ, ಫಿರೋಜ್ ಶಾ ಕೋಟ್ಲಾ ಮೈದಾನದಲ್ಲಿ ಹಾಲೆಂಡ್‌ನ್ನು ಎದುರಿಸಲಿದೆ.

ಈ ವರೆಗೆ ಮೂರು ಪಂದ್ಯಗಳನ್ನು ಆಡಿರುವ ಭಾರತ, ಎರಡರಲ್ಲಿ ಜಯ ಗಳಿಸಿದೆ. ಒಂದು ಟೈ ಆಗಿದೆ. ಸೋಲಿಲ್ಲದೆ ಅಜೇಯ ಮುನ್ನಡೆ ಕಾಯ್ದುಕೊಂಡು, 5 ಅಂಕಗಳೊಂದಿಗೆ ಭಾರತ ಪ್ರಥಮ ಸ್ಥಾನದಲ್ಲಿದೆ. ಇಂಗ್ಲೆಂಡ್ ಅಷ್ಟೇ ಅಂಕಗಳನ್ನು ಪಡೆದಿದ್ದರೂ 3 ಪಂದ್ಯಗಳನ್ನು ಆಡಿದೆ. ರನ್ ಸರಾಸರಿಯಲ್ಲಿ ಹಿಂದಿದೆ. ವೆಸ್ಟ್ ಇಂಡೀಸ್ ಮತ್ತು ದಕ್ಷಿಣ ಆಫ್ರಿಕಾ ತಲಾ 4 ಅಂಕಗಳನ್ನು ಪಡೆದಿದೆ.

ನೆದರ್ಲೆಂಡ್ ನೊಂದಿಗೆ ವಿರುದ್ಧ ಭಾರಿ ಅಂತರದಿಂದ ಗೆದ್ದು, ರನ್ ಸರಾಸರಿಯನ್ನು ಉತ್ತಮ ಪಡಿಸಲು ಭಾರತ ತಯಾರಿ ನಡೆಸಿದೆ. ಭಾರತ ಬ್ಯಾಟಿಂಗ್‌ನಲ್ಲಿ ಬಲಿಷ್ಠವಾಗಿದ್ದರೂ ಬೌಲಿಂಗ್‌ನಲ್ಲಿ ದುರ್ಬಲವಾಗಿದೆ. ಕಳೆದ ಮೂರು ಪಂದ್ಯಗಳಲ್ಲೂ ಬೌಲಿಂಗ್ ಹಾಗೂ ಫಿಲ್ಡಿಂಗ್‌ನಲ್ಲಿ ಕಳಪೆ ಪ್ರದರ್ಶನ ನೀಡಿದೆ. ನಾಲ್ಕು ಮಂದಿ ತಜ್ಞ ಬೌಲರ್‌ಗಳನ್ನು ಹೊಂದಿದ್ದರೂ, ವೇಗಿ ಜಹೀರ್ ಖಾನ್‌ರನ್ನೆ ತಂಡ ಅತಿಯಾಗಿ ಅವಲಂಬಿಸಿದೆ. ಪಾರ್ಟ್ ಟೈಮ್ ಬೌಲರ್ ಆದ ಯುವರಾಜ್ ಸಿಂಗ್ ಆಲ್ ರೌಂಡರ್ ಸ್ಥಾನ ತುಂಬಿದ್ದಾರೆ. ಯೂಸುಫ್ ಬೌಲಿಂಗ್ ಎದುರಾಳಿಗಳಿಗೆ ಸುಲಭ ತುತ್ತಾಗಿದೆ. ಅಶ್ವಿನ್ ಹಾಗೂ ನೆಹ್ರಾ ಅವರನ್ನು ಸುಮ್ಮನೆ ಮ್ಯಾಚ್ ನೋಡಿಕೊಂಡಿರಲು ಬಿಟ್ಟಿರುವುದು ಏಕೆ ಎಂದು ತಿಳಿಯುತ್ತಿಲ್ಲ.

ವಿಶ್ವಕಪ್ : ಅಭ್ಯಾಸ ಪಂದ್ಯಗಳ ಫಲಿತಾಂಶ ಮುಖಪುಟ | ಚಿತ್ರಪಟ | ಅಂಕಗಳ ಕೋಷ್ಟಕ | ಟಾಪ್ ಬ್ಯಾಟ್ಸ್ ಮನ್| ಟಾಪ್ ಬೌಲರ್

ಡೊಶೆಟ್ ಬ್ಯಾಟಿಂಗ್ ಬಲ : ಹಾಲೆಂಡ್ ತಂಡ ಮೂರು ಪಂದ್ಯಗಳನ್ನು ಸೋತಿದ್ದರೂ ಇಂಗ್ಲೆಂಡ್‌ನ ಎದುರು ವಿರೋಚಿತ ಸೋಲು ಅನುಭವಿಸಿತ್ತು. ಡೊಶಾಟ್‌ರ ಆಲ್‌ರೌಂಡ್ ಪ್ರದರ್ಶನ ನೀಡಿ ಗಮನ ಸೆಳೆದಿದ್ದಾರೆ. ಸಾಂಘಿಕ ಹೋರಾಟದ ಕೊರತೆಯಿಂದ ಬಳಲುತ್ತಿರುವ ಡಚ್ಚರು, ಕಳಪೆ ಆಟವನ್ನಂತೂ ನೀಡುವುದಿಲ್ಲ ಎಂದು ನಾಯಕ ನಾಯಕ ಪೀಟರ್ ಬೊರೆನ್ ಹೇಳಿದ್ದಾರೆ.

ಸಚಿನ್, ಯುವರಾಜ್‌ ಕಟ್ಟಿ ಹಾಕಿದರೆ ಸಾಕು ಎಂದು ಡಚ್ಚರು ತಂತ್ರ ರೂಪಿಸಿದ್ದಾರೆ. ಸೆಹ್ವಾಗ್ ತಾನಾಗೇ ಔಟ್ ಆಗುತ್ತಾರಂತೆ, ಗಂಭೀರ್, ಧೋನಿ ಭಯ ನಮಗಿಲ್ಲ ಎನ್ನುತ್ತಾರೆ ನೆದರ್ಲೆಂಡ್ ನಾಯಕ ಬೊರೆನ್. ಕ್ರಿಕೆಟ್ ದಂತಕಥೆ ಸಚಿನ್ ಅವರ ಜೊತೆ ನಾವಾಡುತ್ತಿರುವುದು ನಮ್ಮ ಪುಣ್ಯ. ಆದರೆ, ಮೈದಾನದಲ್ಲಿ ಅವರನ್ನು ಸಮರ್ಥವಾಗಿ ಎದುರಿಸುತ್ತೇವೆ ಎಂದು ಬೊರೆನ್ ಹೇಳಿದರು.

English summary
World Cup 2011 : Team India is hoping to make Quarter final entry by winning tie against Netherlands in Group B encounter on Mar.9. MS Dhoni says team India bowling is still needs to be improved. Though Delhi's Feroz Shah Kotla ground often favorable to bowlers. India have to play hard.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more
X