ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹೆಚ್ಚು ಟಿಕೆಟ್ ಮಾರಲು ಕೆಎಸ್ ಸಿಎಗೆ ಪೊಲೀಸ್ 'ಬುದ್ಧಿ'ಮಾತು

By Srinath
|
Google Oneindia Kannada News

Sell More Tickets KASC
ಬೆಂಗಳೂರು, ಮಾ. 9: ಅಂತೂ ನಗರ ಪೊಲೀಸ್ ಆಯುಕ್ತ ಶಂಕರ್ ಬಿದರಿ ಅವರೇ ಕ್ರಿಕೆಟ್ ಅಭಿಮಾನಿಗಳ ನೆರವಿಗೆ ಧಾವಿಸಿದ್ದಾರೆ. ಏನಪಾ ಅಂದರೆ, 'ನೀವೇನಾದರೂ ಮಾಡಿಕೊಳ್ಳಿ. ನಮ್ಮ ಕ್ರಿಕೆಟ್ ಪ್ರಿಯರಿಗೆ ಶೇ. 50ರಷ್ಟು ಟಿಕೆಟ್ ಗಳನ್ನು ಪಾರದರ್ಶಕವಾಗಿ ಹಂಚಿಕೆ ಮಾಡಿ. ಇದರಿಂದ ಅವರಿಗೆ ಭ್ರಮನಿರಸನ ಆಗದು. ನಮ್ಮಿಂದ ಏಟು ತಿನ್ನುವುದೂ ತಪ್ಪೀತು. ನಿಮ್ಮ ಬಗ್ಗೆ ಅಭಿಮಾನವೂ ಮೂಡುತ್ತದೆ' ಎಂದು ಕರ್ನಾಟಕ ರಾಜ್ಯ ಕ್ರಿಕೆಟ್ ಒಕ್ಕೂಟಕ್ಕೆ ಬುದ್ಧಿಮಾತು ಹೇಳಿದ್ದಾರೆ. ಬುದ್ಧಿ! ಸರಿಯಾದ್ ಮಾತ್ ಹೇಳಿದ್ದೀರಿ ಎಂದು ಕ್ರಿಕೆಟ್ ಅಭಿಮಾನಿಗಳೂ ಸಂತಸಗೊಂಡಿದ್ದಾರೆ.

ಗಮನಾರ್ಹವೆಂದರೆ, ಇತ್ತೀಚೆಗೆ ದಿಲ್ಲಿಯ ಫಿರೋಜ್ ಷಾ ಕೋಟ್ಲಾ ಸ್ಟೇಡಿಯಂನಲ್ಲೂ ಹೀಗೆ ಆಯಿತು. ಆಗ ದಿಲ್ಲಿ ಹೈಕೋರ್ಟ್ ಮಧ್ಯ ಪ್ರವೇಶಿಸಿ, 10,000 ಕ್ಕಿಂತ ಹೆಚ್ಚು ಪಾಸುಗಳನ್ನು ವಿತರಿಸಬೇಡಿ. ಉಳಿದ ಅಷ್ಟನ್ನೂ ಸಾರ್ವಜನಿಕ ಮಾರಾಟಕ್ಕೆ ಬಿಡಿ ಎಂಬ ಸಾರ್ವತ್ರಿಕ ತೀರ್ಪು ನೀಡಿತು.

ಈ ಹಿನ್ನೆಲೆಯಲ್ಲಿ ಸರಕಾರಕ್ಕೆ ಪ್ರಸ್ತಾವನೆಯೊಂದನ್ನು ಕಳಿಸಿರುವ ಬಿದರಿ ಸಾಹೇಬರು, ಕೌಂಟರ್ ಗಳಲ್ಲಿ ಟೆಕೆಟ್ ಮಾರುವ ಮುನ್ನ ಅದರ ಲೆಕ್ಕಾಚಾರದ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿ. ಕನಿಷ್ಠ 18,000 ಟಿಕೆಟ್ ಗಳನ್ನಾದ್ರೂ ಮಾರಿ ಸ್ವಾಮಿ ಎಂದು ಅವರು ಭಿನ್ನವಿಸಿಕೊಂಡಿದ್ದಾರೆ. ಈಗ ನಾನು ಕಳಿಸಿರುವ ಪ್ರಸ್ತಾವನೆಯನ್ನು ಸರಕಾರ ಅನುಮೋದಿಸಲಿ ಬಳಿಕ ಕೆಎಸ್ ಸಿಎ ಜತೆ ಕೂತು ಮಾತನಾಡುವ ಎಂದೂ ಹೇಳೀದ್ದಾರೆ. ಒಂದೆರಡು ದಿನದಲ್ಲಿ ರಾಜ್ಯ ಸರಕಾರ ಪೊಲೀಸ್ ಆಯುಕ್ತರ ಪ್ರಸ್ತಾವನೆಗೆ ಅಂಕಿತ ಹಾಕುವ ಭರವಸೆ ಇದೆ ಎಂದು ತಿಳಿದುಬಂದಿದೆ.

ಬೆಂಗಳೂರಿನಲ್ಲಿ ಭಾರತ ಭಾಗಿಯಾಗಿದ್ದ ಎರಡು ವಿಶ್ವ ಕಪ್ ಪಂದ್ಯಗಳ ವೇಳೆ ಅಮಾಯಕ ಕ್ರಿಕೆಟ್ ಅಭಿಮಾನಿಗಳ ಮೇಲೆ ಅನಿವಾರ್ಯವಾಗಿ ಲಾಠಿ ಚಾರ್ಜ್ ಮಾಡಿರುವುದಕ್ಕೆ ಶ್ಯಾನೆ ಬೇಜಾರು ಮಾಡಿಕೊಂಡಿರುವ ಬಿದರಿ ಅವರು ಟಿಕೆಟ್ ಮಾರಾಟವೂ 'ಟೈ' ಆಗಲಿ ಎಂದು ಆಶಿಸಿದ್ದಾರೆ. ಮೊದಲು ಅರ್ಧದಷ್ಟು ಟಿಕೆಟ್ ಗಳನ್ನು ಅಭಿಮಾನಿ ದೇವರುಗಳಿಗೆ ಹಂಚಿಬಿಡಿ. ಮುಂದೆ ಯಾವುದೇ ತಾಪತ್ರಯ ಬಾರದಂತೆ ನಾನು ನೋಡಿಕೊಳ್ಳುವೆ ಎಂದೂ ಅವರು ಹೊಸದಾಗಿ ಕೆಎಸ್ ಸಿಎ ಸಾರಥ್ಯ ವಹಿಸಿರುವ ಜಾವಗಲ್ ಶ್ರೀನಾಥ್ ತಂಡಕ್ಕೆ ಅಭಯ ನೀಡಿದ್ದಾರೆ. ಸ್ಟೇಡಿಯಂನಲ್ಲಿ 38,000 ಮಂದಿ ಆರಾಮವಾಗಿ ಕುಳಿತುಕೊಳ್ಳಬಹುದು. ಸ್ವಲ್ಪ ಒತ್ತರಿಸಿಕೊಂಡು ಕುಳಿತರೆ 42,000 ಮಂದಿಗೂ ಅವಕಾಶ ಕಲ್ಪಿಸಬಹುದು ಎಂಬುದು ಲೋಕೋಪಯೋಗಿ ಇಲಾಖೆಯ ಲೋಕೋಪಯೋಗ ಮಾತು.

English summary
City police commissioner Shankar Bidari has suggested KASC to sell at least 50% of Tickets to the public and do the sale in a transparent manner. In a draft proposal to the government, Bidari said the KSCA give details of ticket sales to police personnel before opening the counters. At least 18,000 tickets should be sold to the public, he added.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X