ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಏರ್ ಟೆಲ್ 3ಜಿ ಬುಟ್ಟಿಗೆ 6 ಲಕ್ಷ ಗ್ರಾಹಕರು

By Srinath
|
Google Oneindia Kannada News

6 lakh 3G subscribers
ಮುಂಬೈ, ಮಾ. 9: ಜನವರಿಯಲ್ಲಿ ಜಾರಿಗೆ ಬಂದ ಮೂರನೇ ಪೀಳಿಗೆ ಮೊಬೈಲ್ ಸೇವೆಗಾಗಿ (3 ಜಿ) ದೇಶದ ಅಗ್ರ ಮೊಬೈಲ್ ಸೇವಾ ಕಂಪನಿಯಾದ ಭಾರ್ತಿ ಏರ್ ಟೆಲ್ ಈಗಾಗಲೇ 6 ಲಕ್ಷ ಗ್ರಾಹಕರನ್ನು ತನ್ನ ಮಡಿಲಿಗೆ ಹಾಕಿಕೊಂಡಿದೆ. ಖರೀದಿದಾರರೂ ಇದನ್ನು ಹೆಚ್ಚು ಪ್ರಮಾಣದಲ್ಲಿ ಬಳಸತೊಗಿದ್ದಾರೆ ಎಂದು ಕಂಪನಿ ಅಧ್ಯಕ್ಷ ಅತುಲ್ ಬಿಂದಾಲ್ ಹೇಳಿದ್ದಾರೆ.

3ಜಿ ಉತ್ತಮ ಬ್ಯಾಂಡ್ ವಿಡ್ತ್ ಹೊಂದಿರುತ್ತದೆ. ಇದರಿಂದ ಹೆಚ್ಚಿನ ಪ್ರಮಾಣದ ಮಾಹಿತಿ ಕ್ಷಿಪ್ರವಾಗಿ ಮೊಬೈಲ್ ಫೋನ್ ಗಳಿಗೆ ರವಾನೆಯಾಗಲಿದೆ. ಸದ್ಯಕ್ಕೆ ಕಂಪನಿ 11 ನಗರಗಳಲ್ಲಿ 3ಜಿ ಸೇವೆ ಒದಗಿಸುತ್ತಿದೆ. ಮುಂದೆ ಮಾರ್ಚ್ ಕೊನೆಯ ವೇಳೆಗೆ ಇದು ದೇಶಾದ್ಯಂತ 40 ನಗರಗಳಿಗೆ ವಿಸ್ತರಿಸಲಿದೆ. ಇನ್ನು 2012ರ ಕೊನೆಗೆ 1,000 ನಗರಗಳಲ್ಲಿ 3ಜಿ ರಾರಾಜಿಸಲಿದೆ ಎಂದು ಅವರು ವಿವರಿಸಿದ್ದಾರೆ.

ಕುತೂಹಲಕಾರಿ ಸಂಗತಿಯೆಂದರೆ ಎಲ್ಲ ರಂಗಗಳಲ್ಲೂ ಭಾರತಕ್ಕೆ ಸಡ್ಡು ಹೊಡೆಯುವ ಚೀನಾ 3ಜಿ ಸೇವೆಯನ್ನು ಕೈಬಿಟ್ಟು ನೇರವಾಗಿ 4ಜಿಗೆ ಜಿಗಿದಿದೆ. ಇನ್ನು ನೆರೆಯ ಶ್ರೀಲಂಕಾ 3ಜಿಯನ್ನು ಯಾವಾಗಲೋ ಅಪ್ಪಿಕೊಂಡಿದೆ. ಭಾರತ ಇತ್ತೀಚೆಗಷ್ಟೇ 3ಜಿಯನ್ನು ಒಪ್ಪಿಕೊಂಡಿರುವುದು. ಆದರೆ ಏರ್ ಟೆಲ್ ನಂತಹ ಕಂಪನಿಗಳು ಆ ಭಾಗಗಳಲ್ಲಿ ಸೇವಾನಿರತವಾಗಿದ್ದು, ಸಾಕಷ್ಟು ಅನುಭವ ಗಳಿಸಿವೆ. ಭಾರತ ಸದ್ಯಕ್ಕೆ ಇದರ ಪ್ರಯೋಜನ ಪಡೆದರೆ ಸಾಕು ಎನ್ನುವ ಮಟ್ಟದಲ್ಲಿದೆ. ಆರಂಭಿಕ ಬಿಎಸ್ಎನ್ಎಲ್ ಸೇರಿದಂತೆ ಏರ್ ಟೆಲ್, ಟಾಟಾ ಡೊಕೊಮೊ, ಏರ್ ಸೆಲ್ ಸೇವಾ ಕಂಪನಿಗಳು ಬೆಂಗಳೂರಿನಲ್ಲಿ ಈಗಾಗಲೇ ಸೇವೆ ಒದಗಿಸುತ್ತಿವೆ.

English summary
Bharti Airtel has said it has added up to 6 lakh 3G subscribers since the launch of the next generation telephony service in January-end. Also it is witnessing a good data usage of over 1terabyte per day from a single city.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X