ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನೊಬೆಲ್ ಪುರಸ್ಕೃತನ ವಜಾಕ್ಕೆ ಹೈಕೋರ್ಟ್ 'ಸಹ'ಮತಿ

By Srinath
|
Google Oneindia Kannada News

yunus dismissal upheld
ಢಾಕಾ, ಮಾ. 8: ಇಡೀ ದೇಶವಾಸಿಗಳಿಗೆ ಆರ್ಥಿಕ ಚೇತನ ನೀಡಲು ಮೂರು ದಶಕದ ಹಿಂದೆ ಗ್ರಾಮೀಣ ಬ್ಯಾಂಕ್ ಅನ್ನು ಸ್ಥಾಪಿಸಿ ಯಶಸ್ವಿಯಾಗಿದ್ದ ನೊಬೆಲ್ ಪುರಸ್ಕೃತ ಮೊಹಮದ್ ಯೂನಸ್ ಅವರನ್ನು ಬ್ಯಾಂಕ್ ಆಡಳಿತದಿಂದ ಸರಕಾರವೇ ವಜಾಗೊಳಿಸಿರುವುದಕ್ಕೆ ಹೈಕೋರ್ಟ್ ಸಹಮತಿ ವ್ಯಕ್ತಪಡಿಸಿದೆ. ಗ್ರಾಮೀಣ ಬ್ಯಾಂಕಿನಲ್ಲಿ ಸರಕಾರ ಕೇವಲ ಶೇ. 25ರಷ್ಟು ಪಾಲು ಹೊಂದಿದ್ದರೆ ಉಳಿದ ಬೃಹತ್ ಪಾಲನ್ನು ಸುಮಾರು ಒಂದು ಕೋಟಿಯಷ್ಟಿರುವ ಬಡ ಸಾಲದಾರರೇ (ಬಹುತೇಕ ಮಹಿಳೆಯರು) ಹೊಂದಿದ್ದಾರೆ. ಇಂತಹ ಬ್ಯಾಂಕ್ ಅನ್ನು ಹುಟ್ಟುಹಾಕಿದ ಯೂನಸ್ ಗೆ 2006ರಲ್ಲಿ ನೊಬೆಲ್ ಶಾಂತಿ ಪ್ರಶಸ್ತಿ ನೀಡಲಾಗಿತ್ತು.

ಗ್ರಾಮೀಣ ಬ್ಯಾಂಕಿನ ಮ್ಯಾನೇಜಿಂಗ್ ಡೈರೆಕ್ಟರ್ ಸ್ಥಾನದಿಂದ ತಮ್ಮನ್ನು ತೆಗೆದುಹಾಕಿರುವ ಸೆಂಟ್ರಲ್ ಬ್ಯಾಂಕ್ ಆದೇಶವನ್ನು ಪ್ರಶ್ನಿಸಿ 70 ವರ್ಷದ ಯೂನಸ್ ಹೈಕೋರ್ಟ್ ಮೊರೆ ಹೋಗಿದ್ದರು. 1983 ರಲ್ಲಿ ಗ್ರಾಮೀಣ ಬ್ಯಾಂಕ್ ಅನ್ನು ಸ್ಥಾಪಿಸಿ, ಸ್ವತಃ ಅದರ ಕಾರ್ಯಕಾರಿ ಮುಖ್ಯಸ್ಥರಾಗಿ ನೇಮಕಗೊಳ್ಳುವ ಮುನ್ನ ಸೆಂಟ್ರಲ್ ಬ್ಯಾಂಕ್ ನ (ಬಾಂಗ್ಲಾದೇಶ ಬ್ಯಾಂಕ್) ಅಪ್ಪಣೆ ಪಡೆದಿರಲಿಲ್ಲ. ಪ್ರಸ್ತುತ ಅವರು ನಿವೃತ್ತಿ ನೀತಿಯನ್ನೂ ಮೀರಿ ನಡೆಯುತ್ತಿದ್ದಾರೆ ಎಂಬ ಪ್ರತಿವಾದವನ್ನು ಹೈಕೋರ್ಟ್ ನ ಇಬ್ಬರು ಸದಸ್ಯರ ಪೀಠ ಎತ್ತಿಹಿಡಿದಿದೆ.

'ನಮ್ಮ ವಾದ ಸರಿಯಾಗಿಯೇ ಇತ್ತು. ಆದರೂ ಏಕೋ ಹಿಂಗಾಯ್ತು' ಎಂದು ಯೂನಸ್ ಪರ ಕಿರಿಯ ವಕೀಲ ಅಲವತ್ತುಕೊಂಡರು. ಅಟಾರ್ನಿ ಜನರಲ್, ಸೆಂಟ್ರಲ್ ಬ್ಯಾಂಕ್ ನ್ಯಾಯವಾದಿಗಳು ತೀರ್ಪು ಹೊರಬೀಳುವ ವೇಳೆ ನ್ಯಾಯಾಲಯದಲ್ಲಿ ಹಾಜರಿದ್ದರು. ತೀರ್ಪು ಪ್ರಕಟವಾಗುವಾಗ ಯೂನಸ್ ನ್ಯಾಯಾಲಯದಲ್ಲಿ ಹಾಜರಿರಲಿಲ್ಲ. ಇದರಿಂದ ಅವರು ಮೇಲ್ಮನವಿ ಸಲ್ಲಿಸುವ ಬಗ್ಗೆ ತಕ್ಷಣಕ್ಕೆ ತಿಳಿದುಬಂದಿಲ್ಲ. ಪ್ರಧಾನಿ ಷೇಕ್ ಹಸೀನಾರ ಕಟು ವಿರೋಧಿ ಯೂನಸ್, 2007ರಲ್ಲಿ ದೇಶದ ಸೇನೆಯ ಜತೆಗೂಡಿ ತಮ್ಮದೇ ಪಕ್ಷ ಸ್ಥಾಪಿಸಲು ಮುಂದಾಗಿದ್ದರು.

English summary
Bangladesh's High Court on Tuesday upheld the government's dismissal of Nobel laureate Muhammad Yunus from the microfinance bank he founded. Last week, the central bank ordered Yunus, 70, out of Grameen Bank, saying he was working in violation of the country's retirement laws.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X