• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಈ ಮಹಿಳೆ ಹೆಸರಲ್ಲಿದೆ 117 ಮೊಬೈಲ್ ಕನೆಕ್ಷನ್

By Mahesh
|

ನವದೆಹಲಿ, ಮಾ.8: ತುರ್ಕಮನ್ ಗೇಟ್ ಬಳಿ ವಾಸಿಸುತ್ತಿರುವ 34 ವರ್ಷದ ಮಹಿಳೆಯ ಹೆಸರಿನಲ್ಲಿ ಬರೋಬ್ಬರಿ 117 ಮೊಬೈಲ್ ಸಂಪರ್ಕಗಳಿರುವುದು ಇತ್ತೀಚೆಗೆ ಪತ್ತೆಯಾಗಿದೆ. ಒಬ್ಬ ವ್ಯಕ್ತಿ ಅಷ್ಟೊಂದು ಮೊಬೈಲ್ ಸಂಪರ್ಕ ಹೊಂದಲು ಹೇಗೆ ಸಾಧ್ಯ. ಅಥವಾ ಹೊಂದಿದ್ದರೂ ಏತಕ್ಕೆ ಎಷ್ಟು ಕನೆಕ್ಷನ್ ಎಂಬ ಪ್ರಶ್ನೆ ಏಳುವುದು ಸಹಜ. ಆದರೆ, ಕುತೂಹಲದ ಸಂಗತಿ ಎಂದರೆ, ಇಷ್ಟೊಂದು ಮೊಬೈಲ್ ಸಂಪರ್ಕಗಳು ಆಕೆಯ ಹೆಸರಿನಲ್ಲಿದ್ದರೂ ಒಂದು ಅಧಿಕೃತವಲ್ಲ. ಆಕೆ ಒಂದನ್ನೂ ಬಳಸುತ್ತಿಲ್ಲ.

ಅಲ್ಲದೆ, ಆಕೆ ಒಮ್ಮೆ ಕೂಡಾ ಮೊಬೈಲ್ ಸಂಪರ್ಕ ನೀಡುವಂತೆ ದೂರ ಸಂಪರ್ಕ ಇಲಾಖೆಗೆ ಅರ್ಜಿ ಸಲ್ಲಿಸಿಲ್ಲ. ಇದರಲ್ಲಿ ಯಾವುದೇ ಮೊಬೈಲ್ ಸಂಖ್ಯೆಯು ಅವಳಿಗೆ ಸಂಬಂಧಿಸಿದ್ದಲ್ಲ ಎಂದು ಪೊಲೀಸರು ಹೇಳುತ್ತಾರೆ. ಹಾಗಾದರೆ, ಎಷ್ಟೊಂದು ಸಂಪರ್ಕಗಳ ಜಾಲದ ಮೂಲ ಏನು ಎಂದು ಪೊಲೀಸರು ತಲೆ ಕೆಡಿಸಿಕೊಂಡಿದ್ದಾರೆ.

ಒಂದಷ್ಟು ತನಿಖೆ ನಂತರ ಪೊಲೀಸರಿಗೆ ತಿಳಿದದ್ದು ಇಷ್ಟು : ಮತದಾನ ಗುರುತಿನ ಚೀಟಿಯನ್ನು ಹಲವು ಬಾರಿ ಜೆರಾಕ್ಸ್ ಮಾಡಿರಬಹುದು. ಅದೇ ಮತದಾರ ಚೀಟಿಯನ್ನು ಹಲವರು ಗುರುತಿನ ಚೀಟಿಯನ್ನಾಗಿ ಉಪಯೋಗಿಸಿರಬಹುದು ಅಥವಾ ಸೆಲ್ಯುಲಾರ್ ಆಪರೇಟರ್ ಗಳು ಗ್ರಾಹಕರನ್ನು ಹೆಚ್ಚಿಸಿಕೊಳ್ಳಲು ಈ ತಂತ್ರ ಹೂಡಿರುವ ಸಾಧ್ಯತೆಯಿರಬಹುದು ಎಂದು ಶಂಕೆ ವ್ಯಕ್ತವಾಗಿದೆ. ನಕಲಿ ದಾಖಲೆ ಪತ್ರ ಬಳಕೆಯಂತೂ ಆಗಿದೆ ಎಂದು ದೆಹಲಿ ಪೊಲೀಸರು ದೃಢಪಡಿಸಿದ್ದಾರೆ.

ದೂರಸಂಪರ್ಕ ಇಲಾಖೆ (department of telecommunications) ಒಬ್ಬ ಗ್ರಾಹಕರ ಹೆಸರಿನಲ್ಲಿ ಹಲವು ಮೊಬೈಲ್ ಸಂಪರ್ಕಗಳಿರುವುದರ ಬಗ್ಗೆ ತನಿಖೆಗೆ ಆದೇಶಿಸಿದಾಗ ಈ ಸತ್ಯಾಂಶ ಹೊರಬಂದಿದೆ. ತುರ್ಕಮನ್ ಗೇಟ್ ಬಳಿಯಿರುವ ಮಹಿಳೆ ಅಲ್ಪ ಸಂಖ್ಯಾತ ಸಮುದಾಯಕ್ಕೆ ಸೇರಿದವಳಾಗಿದ್ದು, ಪತಿಯಿಂದ ದೂರವಾಗಿ ಒಬ್ಬಳೆ ವಾಸಿಸುತ್ತಿದ್ದಾಳೆ. ಪೊಲೀಸರು ಮೊಬೈಲ್ ಸಂಪರ್ಕಗಳ ಕುರಿತಂತೆ ವಿಚಾರಣೆ ನಡೆಸಿದಾಗ, ತನಗೆ ಇಂತಹ ಯಾವುದೇ ಮಾಹಿತಿಯಲ್ಲವೆಂದು ಸ್ಪಷ್ಟಪಡಿಸಿದ್ದಾಳೆ.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
A 34 year old woman who stays near Turkman Gate Delhi has got nearly 117 mobile connections in her name. But none of the connection belongs to her. Department of Telecommunications survey revealed connection being given with fraud name and forged documents.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more