ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕಾಡಿದೆ ರಾಜಕೀಯ ಅಸ್ಥಿರತೆ: ಇಳಿದಿದೆ ಸೆನ್ಸೆಕ್ಸ್

By Srinath
|
Google Oneindia Kannada News

ಮುಂಬೈ, ಮಾ. 7: ದೇಶದಲ್ಲಿ ಇತ್ತೀಚಿನ ದಿನಗಳಲ್ಲಿ ಸುಪ್ತವಾಗಿದ್ದ ರಾಜಕೀಯ ಅಸ್ಥಿರತೆ ಧಿಡೀರನೆ ಭುಗಿಲೆದ್ದಿದೆ. ಇದರ ಮೊದಲ ಕುರುಹಾಗಿ ದೇಶದ ಅರ್ಥವ್ಯವಸ್ಥೆಯ ದಿಕ್ಸೂಚಿಯಾದ ಮುಂಬಯಿ ಷೇರುಪೇಟೆ ಸೂಚ್ಯಂಕ (ಸೆನ್ಸೆಕ್ಸ್) ಬೆಳಗ್ಗೆ ಎದ್ದೇಳುತ್ತಿದ್ದಂತೆ ಮಲಗಿ ಬಿಟ್ಟಿದೆ. ಇದಕ್ಕೆ ಹೆಚ್ಚುತ್ತಿರುವ ಕಚ್ಚಾ ತೈಲ ಬೆಲೆ ತುಪ್ಪ ಸುರಿದಿದೆ. ಸೆನ್ಸೆಕ್ಸ್ ಇನ್ನೂರು ಅಂಕ ಜಾರಿದ್ದರೆ ನಿಫ್ಟಿ ನೂರು ಅಂಕ ಕಳೆದುಕೊಂಡಿದೆ. ಜಾರುವಿಕೆ ಮುಂದುವರಿದಿದೆ. ಹೂಡಿಕೆದಾರರು ಎಚ್ಚರಿಕೆ ವಹಿಸುವುದು ಒಳಿತು.

ಕಾಂಗ್ರೆಸ್ ನ ಪ್ರಮುಖ ಮಿತ್ರ ಪಕ್ಷವಾದ ಡಿಎಂಕೆ ಸಚಿವರು ಕೇಂದ್ರ ಸರಕಾರಕ್ಕೆ ರಾಜೀನಾಮೆ ಸಲ್ಲಿಸಲು ಕ್ಷಣಗಣನೆ ಮಾಡುತ್ತಿರುವುದು ಯುಪಿಎ ಮೈತ್ರಿಕೂಟಕ್ಕೆ ತಲೆನೋವಾಗಿದೆ. ಒಂದೊಂದಾಗಿ ಭ್ರಷ್ಟಾಚಾರ ಪ್ರಕರಣಗಳಲ್ಲಿ ಸಿಲುಕಿರುವ ಕೇಂದ್ರ ಸರಕಾರದ ಭವಿಷ್ಯ ನೆಟ್ಟಗಿಲ್ಲ ವೆಂದು ಲೆಕ್ಕಾಚಾರ ಹಾಕಿರುವ ಹಣಕಾಸು ಪಂಡಿತರು ಸೆನ್ಸೆಕ್ಸ್ ಮೇಲೆ ಇದು ಪರಿಣಾಮ ಬೀರುತ್ತಿದೆ ಎಂದಿದ್ದಾರೆ.

ಇನ್ನು, ಲಿಬಿಯಾ ಅಶಾಂತಿ ಕಚ್ಚಾ ತೈಲ ಉತ್ಪಾದನೆಗೆ ಮುಳುವಾಗಿದೆ. ತೈಲ ಬೆಲೆ ಬ್ಯಾರೆಲ್ ಗೆ 117 ಡಾಲರ್ ದಾಟಿದೆ. ಏಷ್ಯಾ ಷೇರು ವಿನಿಮಯ ಕೇಂದ್ರಗಳಲ್ಲೂ ವಹಿವಾಟು ನಿರಾಶಾದಾಯಕವಾಗಿದೆ. ಇದು ಭಾರತದ ಷೇರು ವಹಿವಾಟಿನ ಮೇಲೂ ಪ್ರಭಾವ ಬೀರಿದೆ. ಇಲ್ಲಿನ ಷೇರು ಮಾರುಕಟ್ಟೆಗಳು ತಟಸ್ಥ ಧೋರಣೆ ತೋರುತ್ತಿವೆ. ಅಸ್ಥಿರತೆ ತೂರಾಡಲಿದ್ದು, ಕಾದು ನೋಡುವ ತಂತ್ರ ಅಳವಡಿಸಿಕೊಂಡರೆ ಕ್ಷೇಮ.

English summary
Markets are opened in the red due to political instability, rising crude prices and subdued cues from Asia. Investors turned jittery due to political instability after six ministers from DMK said that they will meet the Prime Minister today and hand over their resignation letters.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X