ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಾವು ಅನುದಾನಕ್ಕೆ ಆಸ್ಟ್ರೇಲಿಯಾದಲ್ಲೊಂದು ಆಸ್ಪತ್ರೆ

By Srinath
|
Google Oneindia Kannada News

euthanasia-law-australia
ತಾಸ್ಮೇನಿಯಾ, ಮಾ. 7: ಇತ್ತ ನಮ್ಮ ಅರುಣಾಗೆ ನ್ಯಾಯಾಲಯ ಇಚ್ಛಾಮರಣ ದಯಪಾಲಿಸಲು ಹಿಂಜರಿದಿದೆ. ಆದರೆ ಇಡೀ ಜಗತ್ತಿನಲ್ಲಿಯೇ ಮೊದಲ ಬಾರಿಗೆ ಸ್ವಯಂ ದಯಾಮರಣ ಕಾನೂನು ಜಾರಿಗೆ ತರಲು ಅಸ್ಟ್ರೇಲಿಯಾ ಸಿದ್ಧತೆ ನಡೆಸಿದೆ.

ಪ್ರೀಮಿಯರ್ (ತಾಸ್ಮೇನಿಯಾ) ಲಾರಾ ಗಿಡ್ಡಿಂಗ್ಸ್ ನ ಮೆಕಿಮ್ ವಿಧೇಯಕವು ಇಚ್ಛಾಮರಣ ಕಾನೂನು ರೂಪದಲ್ಲಿ ಈ ವರ್ಷಾಂತ್ಯ ಜಾರಿಗೆ ಬರುವುದು ಬಹುತೇಕ ಖಚಿತವಾಗಿದೆ. ಇದು ದಯಾಮರಣವನ್ನು ಕಲ್ಪಿಸುವ ಕಾನೂನು ಎಂದು ಸ್ಟಂಬಲ್ ಅಪಾನ್ ವೆಬ್ ಸೈಟ್ ಕಳೆದ ವಾರ ವರದಿ ಮಾಡಿದೆ.

ಇದೇ ಸಂದರ್ಭದಲ್ಲಿ ದಯಾಮರಣ ಬೇಡುವ ರೋಗಿಗಳಿಗಾಗಿಯೇ ವಿಶೇಷ ಆಸ್ಪತ್ರೆ ಪ್ರಾರಂಭಿಸುವ ಯೋಜನೆಯೂ ಆಸ್ಟ್ರೇಲಿಯಾದಲ್ಲಿ ಜಾರಿಯಲ್ಲಿದೆ. ಈ ಆಸ್ಪತ್ರೆ ಬಹುಶಃ ಹೊಬಾರ್ಟ್ ಅಥವಾ ಅಡಿಲೇಡ್ ನಲ್ಲಿ ಅಸ್ತಿತ್ವಕ್ಕೆ ಬರುವ ಸಾಧ್ಯತೆ ಇದೆ. ಮರಣಶಯ್ಯೆಯಲ್ಲಿರುವ ರೋಗಿಗಳನ್ನು ಆರೈಕೆ ಮಾಡುವುದಕ್ಕಾಗಿಯೇ ವಿಶೇಷ ವೈದ್ಯರ ಆಗತ್ಯವಿದೆ. ಇನ್ನು ಹೊಸ ಕಾನೂನು ಜಾರಿಗೆ ಬಂದಾಗ ಅಂತಹ ರೋಗಿಗಳಿಗೆ ಜೀವನದಿಂದ ಮುಕ್ತಿ ಕಲ್ಪಿಸಲು ತಜ್ಞ ವೈದ್ಯರ ಅಗತ್ಯವೂ ಇರುತ್ತದೆ. ಆದ್ದರಿಂದ ವೈದ್ಯಲೋಕ ಈ ಸೇವೆಯತ್ತ ಗಮನಹರಿಸುವ ಜರೂರತ್ತಿದೆ.

English summary
The proposal for the clinic, which will be built in either Hobart or Adelaide, has been developed in anticipation of voluntary euthanasia legislation expected to pass through the state parliaments later this year.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X