ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಳ್ಳಾರಿ ಕಾಂಗ್ರೆಸ್ ಪಟ್ಟ :ದಿವಾಕರ್ ಗೆ ಕಷ್ಟ ಕಷ್ಟ

By * ರೋಹಿಣಿ, ಬಳ್ಳಾರಿ
|
Google Oneindia Kannada News

M Diwakar Babu, Bellary Congress
ಬಳ್ಳಾರಿ, ಮಾ.6: ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹುದ್ದೆಗೆ ಜಿಲ್ಲೆಯ ಪ್ರಬಲ ವೀರಶೈವ ಜನಾಂಗದ ಎಂ.ಪಿ. ರವೀಂದ್ರ ಅವರನ್ನು ನೇಮಿಸುವ ಮೂಲಕ ಪಕ್ಷದ ಬಲವರ್ಧನೆಗೆ ವರಿಷ್ಠರು ನಿರ್ಧರಿಸಿದ್ದಾರೆ. ನೂತನ ಅಧ್ಯಕ್ಷರ ಆಯ್ಕೆ ಕುರಿತು ಮಾಜಿ ಸಚಿವ, ಹಾಲಿ ಅಧ್ಯಕ್ಷ ಎಂ. ದಿವಾಕರಬಾಬು ಮತ್ತು ಪಕ್ಷದಲ್ಲಿಯ ಇವರ ವಿರೋಧಿ ಗುಂಪುಗಳ ಮಧ್ಯೆ ತೀವ್ರವಾದ ಪೈಪೋಟಿ ನಡೆದಿತ್ತು. ದಿವಾಕರಬಾಬು ತಮ್ಮ ಬಲಗೈ ಬಂಟ ಜೆ.ಎಸ್. ಆಂಜಿನೇಯಲು ಅವರನ್ನು ಅಧ್ಯಕ್ಷಗಾದಿಗೆ ತರಲು ವಿಫಲಯತ್ನ ನಡೆಸಿ ಜಿಲ್ಲೆಯ ವೀರಶೈವರ ಕೆಂಗಣ್ಣಿಗೆ ಗುರಿ ಆಗಿದ್ದರು.

ಕೆ.ಸಿ. ಕೊಂಡಯ್ಯ, ಬಳ್ಳಾರಿ ಜಿಲ್ಲೆಯ ಬಹುತೇಕ ಎಲ್ಲಾ ವಿಧಾನಸಭಾ ಕ್ಷೇತ್ರಗಳ ಕಾಂಗ್ರೆಸ್‌ನ ಸೋತ ಅಭ್ಯರ್ಥಿಗಳು, ಜಿಲ್ಲಾ ಪಂಚಾಯಿತಿಯ ಹಾಲಿ - ಮಾಜಿ ಸದಸ್ಯರು ಸೇರಿ ಅನೇಕರು ಎಂ.ಪಿ. ರವೀಂದ್ರ ಅವರನ್ನು ನೂತನ ಅಧ್ಯಕ್ಷರನ್ನಾಗಿ ನೇಮಿಸಲು ಸಾಮೂಹಿಕವಾಗಿ ಶ್ರಮಿಸಿದ್ದರು. ಎಂ. ದಿವಾಕರಬಾಬು ಅವರ ತೆಲುಗು ಪ್ರೀತಿ, ಸ್ವಜಾತಿ ಪ್ರೇಮ, ಕೆಳಹಂತದವರ ಜೊತೆ ಅಸಂಬದ್ಧವಾಗಿ ವ್ಯವಹರಿಸುವುದು ಸೇರಿ ನಾನಾ ಕಾರಣಗಳಿಂದ ಪಕ್ಷದಿಂದ ದೂರ ಸರಿದಿದ್ದವರು ಎಂ.ಪಿ. ರವೀಂದ್ರ ನೇತೃತ್ವದಲ್ಲಿ ಕಾಂಗ್ರೆಸ್‌ಗೆ ಮರಳಿ ಜಿಲ್ಲೆಯಲ್ಲಿ ಬಿಜೆಪಿಗೆ ಪ್ರಬಲ ಎದುರಾಳಿ ಆಗಲಿದೆ ಎಂದು ಕಾರ್ಯಕರ್ತರು ಲೆಕ್ಕ ಹಾಕುತ್ತಿದ್ದಾರೆ. ಹರ್ಷ ವ್ಯಕ್ತಪಡಿಸಿದ್ದಾರೆ.

ಬಿ.ಎಸ್. ಯಡಿಯೂರಪ್ಪ ಅವರನ್ನು ಮುಖ್ಯಮಂತ್ರಿಯಾಗಿಸುವ ನಿಟ್ಟಿನಲ್ಲಿ ವಿವಿಧ ಪಕ್ಷ, ಸಂಘಟನೆಗಳವರು ಎಲ್ಲರೂ ಒಂದಾಗಿ ಬಿಜೆಪಿಗೆ ಬೆಂಬಲ ನೀಡಿದ್ದರು. ವೀರಶೈವರು ಜಿಲ್ಲೆಯಲ್ಲಿ ಕ್ರಮೇಣ ಬಿಜೆಪಿಯಿಂದ ದೂರಕ್ಕೆ ಸರಿಯುತ್ತಿದ್ದಾರೆ. ಈ ಸಂದರ್ಭದಲ್ಲಿ ಕಾಂಗ್ರೆಸ್ ಎಂ.ಪಿ. ರವೀಂದ್ರ ಅವರಿಗೆ ಮಣೆ ಹಾಕಿ ಪಕ್ಷದ ಅಧ್ಯಕ್ಷಗಾದಿಯನ್ನು ನೀಡಿರುವುದು ಸಮಾಜಕ್ಕೆ ಆಶಾದಾಯಕ ಬೆಳವಣಿಗೆ ಎಂದು ವೀರಶೈವ ಮುಖಂಡರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಅಧಿಕಾರ ವಂಚಿತ ವರ್ಗ:
ಅಲ್ಲದೇ, ಜಿಲ್ಲೆಯ ಹೊಸಪೇಟೆ ಮತ್ತು ಬಳ್ಳಾರಿ ನಗರ ವಿಧಾನಸಭಾ ಕ್ಷೇತ್ರ ಮಾತ್ರವೇ ಸಾಮಾನ್ಯ ವರ್ಗಕ್ಕೆ ಇದ್ದು ಉಳಿದ ಐದು ವಿಧಾನಸಭಾ, ಲೋಕಸಭಾ ಕ್ಷೇತ್ರ ಮೀಸಲು ಕ್ಷೇತ್ರಗಳು. ಈ ನಿಟ್ಟಿನಲ್ಲಿ ವೀರಶೈವರು, ಕುರುಬರು ಸೇರಿ ಇತರೆ ಜನಾಂಗದವರು ರಾಜಕೀಯ ಅಧಿಕಾರ ವಂಚಿತರೇ.

ಎಂ.ಪಿ. ರವೀಂದ್ರ ಅವರು ಜಾತ್ಯತೀತವಾಗಿ ಪಕ್ಷವನ್ನು ಸಂಘಟಿಸಿದಲ್ಲಿ ಪಕ್ಷ ಅಧಿಕಾರಕ್ಕೆ ಬರುವ ಸ್ಪಷ್ಟ ಸಾಧ್ಯತೆಗಳಿವೆ. ಜಿಲ್ಲಾ - ತಾಲೂಕು ಪಂಚಾಯಿತಿ ಚುನಾವಣೆಯ ಪೂರ್ವಭಾವಿ ಸಭೆಯಲ್ಲಿ ಎಂ.ಪಿ. ರವೀಂದ್ರ ಅವರು 'ಪಶ್ಚಿಮ ತಾಲೂಕುಗಳ ಮತದಾರರು ಬಿಜೆಪಿಗೆ ತಕ್ಕ ಪಾಠ ಕಲಿಸಲಿದ್ದಾರೆ" ಎಂದು ಹೇಳಿ ಕಾಂಗ್ರೆಸ್ ಗೆಲುವಿಗೆ ಯಶಸ್ವೀ ತಂತ್ರಗಳನ್ನು ರೂಪಿಸಿದ್ದಾರೆ.

ಎಂ.ಪಿ. ರವೀಂದ್ರರ ನೇಮಕಾತಿ ಹಿನ್ನಲೆಯಲ್ಲಿ ಬಿಜೆಪಿ - ಜೆಡಿಎಸ್‌ನಲ್ಲಿಯ 'ಆಶಾಜೀವಿ"ಗಳು ಕಾಂಗ್ರೆಸ್‌ನತ್ತ ಲಗ್ಗೆ ಹಾಕಲಿದ್ದಾರೆ. ಈ ಪಕ್ಷಾಂತರ ಪರ್ವ ಕಾಂಗ್ರೆಸ್‌ಗೆ ಅದೆಷ್ಟು ಲಾಭ ತರಲಿದೆ, ಪಕ್ಷಾಂತರ ಯಾವ ಸಂದರ್ಭ ನಡೆಯಲಿದೆ ಎನ್ನುವುದು ಅನೇಕರ ಯಕ್ಷ ಪ್ರಶ್ನೆ. ಈ ನಿಟ್ಟಿನಲ್ಲಿ ಜೆಡಿಎಸ್ - ಬಿಜೆಪಿಯಲ್ಲಿ ವಿವಿಧ ರೀತಿಯ ಲೆಕ್ಕಾಚಾರ ಪ್ರಾರಂಭ ಆಗಿದೆ.

English summary
Bellary District Congress president M Diwakar Babu plan to bring his aid JS Anjaneyulu to President post has been opposed by Veerashaiva leaders. Party high command has indicated that MP Ravindra is likely to hold the post.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X