ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭೈರಪ್ಪ ಅಧ್ಯಕ್ಷತೆಯಲ್ಲಿ ಮತಾಂತರ ನಿಷೇಧ ಸೆಮಿನಾರ್

By Prasad
|
Google Oneindia Kannada News

Dr. SL Bhyrappa
ಬೆಂಗಳೂರು, ಮಾ. 5 : "ಮತಾಂತರ ನಿಷೇಧ: ಸವಾಲು - ಪರಿಹಾರದ ದಾರಿ" ಎಂಬ ವಿಷಯದ ಕುರಿತು ಬೆಂಗಳೂರಿನ ವೈಚಾರಿಕ ಸಂಸ್ಥೆ ವರ್ತಮಾನ ವಿಚಾರ ಗೋಷ್ಠಿಯೊಂದನ್ನು ಮಾರ್ಚ್ 11ರಂದು ಆಯೋಜಿಸಿದೆ. ಖ್ಯಾತ ಸಾಹಿತಿ, ಕಾದಂಬರಿಕಾರ ಡಾ ಎಸ್ಎಲ್ ಭೈರಪ್ಪ ಅಧ್ಯಕ್ಷತೆ ವಹಿಸಲಿದ್ದಾರೆ.

ವಿಚಾರಗೋಷ್ಠಿಯಲ್ಲಿ ಸಂಶೋಧಕರಾದ ಡಾ ಚಿದಾನಂದ ಮೂರ್ತಿ, ಡಾ ಎನ್ಎಸ್ ರಾಜಾರಾಮ್, ಪರಿಶಿಷ್ಟ ಜಾತಿಗಳ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಡಾ. ಮಂಗಳಾ ಶ್ರೀಧರ್, ಮಾದಿಗ ದಂಡೋರ ಅಧ್ಯಕ್ಷ ಎಂ ಶಂಕರಪ್ಪ, ಬರ್ಡ್ ಬೆಂಗಳೂರು ಸಂಯೋಜಕರು ಪಿಎನ್ ಬೆಂಜಮಿನ್, ಉಚ್ಚ ನ್ಯಾಯಾಲಯದ ವಕೀಲ ಸತೀಶಚಂದ್ರ, ಲೇಖಕ ಡ್ಯಾನಿ ಪಿರೇರಾ ಮುಂತಾದವರು ತಮ್ಮ ವಿಚಾರ ಮಂಡಿಸಲಿದ್ದಾರೆ.

ವಿಭೂತಿಪುರ ಮಠದ ಶ್ರೀ ಶ್ರೀ ಮಹಾಂತಲಿಂಗ ಶಿವಾಚಾರ್ಯ ಸ್ವಾಮೀಜಿ ಉಪಸ್ಥಿತರಿರುವರು. ನೃಪತುಂಗ ರಸ್ತೆಯಲ್ಲಿರುವ ಯವನಿಕಾ ಸಭಾಂಗಣದಲ್ಲಿ ಕೇವಲ 300 ಜನರು ಮಾತ್ರ ಕುಳಿತುಕೊಳ್ಳಲು ಮಾತ್ರ ಸಾಧ್ಯ. ಸೀಟು ಬೇಕಿದ್ದರೆ ಅರ್ಧ ಗಂಟೆ ಮೊದಲೇ ಯವನಿಕಾ ತಲುಪಿ.

ಸ್ಥಳ : ಯವನಿಕಾ, ನೃಪತುಂಗ ರಸ್ತೆ, ಬೆಂಗಳೂರು.

ದಿನಾಂಕ : ಮಾರ್ಚ್ 11, 2011 ಶುಕ್ರವಾರ, ಬೆಳಿಗ್ಗೆ 10ರಿಂದ ಮಧ್ಯಾಹ್ನ 1ರವರಿಗೆ.

ಸಂಪರ್ಕಿಸಿ : ಶಾಮಸುಂದರ್ - 9448371714

English summary
A seminar on Conversion ban : Chellenges and remedies has been organized by Varthamana Bangalore. Kannada laureate Dr. SL Bhyrappa will preside over the function. Seminar will be at Yavanika, Nrupatunga road, Bangalore on March 11.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X