ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕರ್ನಾಟಕದ ಶ್ರೀಕುಮಾರ್ ಗೆ ಸಿವಿಸಿ ಪಟ್ಟ?

By Srinath
|
Google Oneindia Kannada News

ನವದೆಹಲಿ, ಮಾರ್ಚ್4: ನಿಷ್ಕಳಂಕ ಚಾರಿತ್ರ್ಯಹೊಂದಿರುವ ಇತರೆ ಕ್ಷೇತ್ರಗಳಲ್ಲಿನ ಸಾಧಕರನ್ನೂ ಕೇಂದ್ರ ಜಾಗೃತ ದಳದ (CVC)ಉನ್ನತ ಹುದ್ದೆಗಳಿಗೆ ಪರಿಗಣಿಸಬಹುದು ಎಂದು ಕೇಂದ್ರ ಸರಕಾರಕ್ಕೆ ಸುಪ್ರೀಂ ಕೋರ್ಟ್ ಕಿವಿಮಾತು ಹೇಳಿರುವುದು ನಿಮ್ಮ ಕಿವಿಗೂ ಬಿದ್ದಿರಬಹುದು. ಜಾಗೃತ ದಳದ ಆಯುಕ್ತರನ್ನಾಗಿ ಕಳಂಕಿತ ಪಿಜೆ ಥಾಮಸ್ ಅವರನ್ನು ನೇಮಿಸಿ ಸುಪ್ರೀಂ ಕೋರ್ಟಿನಿಂದ ಛೀಮಾರಿ ಹಾಕಿಸಿಕೊಂಡಿರುವ ಕೇಂದ್ರ ಸರಕಾರಕ್ಕೆ ಇದು ದಾರಿದೀಪವಾಗಬಹುದು. ಆದರೆ ಸಚ್ಚಾರಿತ್ರ್ಯ ವ್ಯಕ್ತಿಗಳಿಗಾಗಿ ದುರ್ಬೀನು ಹಾಕಿಕೊಂಡು ಹುಡುಕುವ ಕಾಲವಿದು. ಹುಡುಕಾಟದ ತಾಪತ್ರಯವೇಕೆ? ನಮ್ಮವರೇ ಆದ ರಾಜ್ಯ ನಿವೃತ್ತ ಪೊಲೀಸ್ ಮಹಾ ನಿರ್ದೇಶಕ ಆರ್. ಶ್ರೀಕುಮಾರ್ ಗೆ ಸಿವಿಸಿ ಪಟ್ಟ ಕೊಡಬಹುದಲ್ಲವೇ? ಚರ್ಚೆ ಆರಂಭವಾಗಿದೆ.

ಏಕೆಂದರೆ ಕೇಂದ್ರ ಸರಕಾರ ತನ್ನ ದುಸ್ಸಾಹಸವನ್ನು ಪುನರಾವರ್ತಿಸದೆ ಉತ್ತಮ ವ್ಯಕ್ತಿಗಳಿಗಾಗಿ ಹುಡುಕಾಟ ನಡೆಸಿದರೆ, ಜತೆಗೆ ಐಎಎಸ್ ಲಾಬಿಗೆ ಮಣಿಯದಿದ್ದರೆ ನಿವೃತ್ತ ಐಪಿಎಸ್ ಶ್ರೀಕುಮಾರ್ ಅವರಿಗೆ ಆ ಹುದ್ದೆ ಒಲಿಯಬಹುದು. ಅಂದಹಾಗೆ ಶ್ರೀಕುಮಾರ್ ಸಿವಿಸಿಯ ಹಾಲಿ ಸದಸ್ಯ. ಈಗಿರುವ ಸದಸ್ಯರ ಪೈಕಿ ಸೇವಾ ಅನುಭವದಲ್ಲಿ ಹಿರಿಯರು ಕೂಡ. ಶುದ್ಧ ಹಸ್ತರೂ ಹೌದೆಂಬ ಮಾತಿದೆ. ಇನ್ನೊಂದು ಸಾಧ್ಯತೆ ಎಂದರೆ ಶ್ರೀಕುಮಾರ್ ಅವರನ್ನು ತಕ್ಷಣಕ್ಕೆ ಹಂಗಾಮಿ ಮುಖ್ಯಸ್ಥರನ್ನಾಗಿ ನೇಮಿಸಿ, ಬಳಿಕ ಉಳಿದ ವಿಷಯಗಳತ್ತ ಸರಕಾರ ಗಮನಹರಿಸಬಹುದು. ಸಿವಿಲ್ ಸೇವೆಯ ಅಧಿಕಾರಿಗಳನ್ನು ಮಾತ್ರ ನೇಮಕ ಮಾಡಬೇಕೆಂಬ ನಿಯಮವಿಲ್ಲ ಎಂದು ಸುಪ್ರೀಂ ಕೋರ್ಟ್ ಅಭಿಪ್ರಾಯಪಟ್ಟಿರುವುದರಿಂದ ನಿಧಾನವಾಗಿಯಾದರೂ ದಕ್ಷರು ಮತ್ತು ಶುದ್ಧಹಸ್ತರನ್ನು ಸಿವಿಸಿ ಸ್ಥಾನದಲ್ಲಿ ಕುಳ್ಳಿರಿಸುವ ಮೂಲಕ ಹೋದ ಮಾನವನ್ನು ಮರಳಿಗಳಿಸಲು ಟೀಮ್ ಮನ್ಮೋಹನ್ ಸಿಂಗ್ ಯತ್ನಿಸಬಹುದು.

ಶ್ರೀಕುಮಾರ್ ಆಯ್ಕೆಯಾದರೆ ಸಿವಿಸಿಗೆ ನೇಮಕಗೊಂಡ ಮೊದಲ ಕನ್ನಡಿಗ ಎಂಬ ಹೆಮ್ಮೆಗೆ ಪಾತ್ರರಾಗಲಿದ್ದಾರೆ. ತಮಿಳುನಾಡಿಗೆ ಸೇರಿದ ಅವರು ಕರ್ನಾಟಕದಲ್ಲಿಯೇ ನೆಲೆಸಿದ್ದು, 30 ವರ್ಷ ಕಾಲ ಇಲ್ಲಿಯೇ ಸೇವೆ ಸಲ್ಲಿಸಿದ್ದಾರೆ. ಮಾಜಿ ಪ್ರಧಾನಿ ರಾಜೀವ್ ಗಾಂಧಿ ಹತ್ಯೆ ಪ್ರಕರಣದ ತನಿಖೆ ಮುಖ್ಯಸ್ಥರಾಗಿ, ಸಿಬಿಐನ ಭ್ರಷ್ಟಾಚಾರ ನಿಗ್ರಹ ದಳದ ಐಜಿಪಿಯಾಗಿ ಅವರ ಸೇವಾತತ್ಪರತೆ ಶ್ಲಾಘನೀಯ.

English summary
If Central Government really wants to take the advice of Supreme Court and to rectify its mistake while appointing corrupt PJ Thomas as CVC, it would be wise to name Retired DGP of Karnataka R. Srikumar as next CVC, at least for the time being.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X