ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭ್ರಷ್ಟ ಥಾಮಸ್ ಹೊರನಡೆಯಲಿ: ಸುಪ್ರೀಂಕೋರ್ಟ್

By Srinath
|
Google Oneindia Kannada News

cvc-thomas
ನವದೆಹಲಿ, ಮಾರ್ಚ್3: ಕೇಂದ್ರ ಜಾಗ್ರತ ಆಯುಕ್ತರಾಗಿ ಪಿ.ಜೆ. ಥಾಮಸ್ ಅವರನ್ನು ನೇಮಿಸಿರುವುದು ನ್ಯಾಯಸಮ್ಮತವಲ್ಲ ಎಂದು ಸುಪ್ರೀಂ ಕೋರ್ಟ್ ಕೇಂದ್ರ ಸರಕಾರಕ್ಕೆ ಜಾಡಿಸಿದೆ. ಥಾಮಸ್ ರನ್ನು ನೇಮಕ ಮಾಡಿದ್ದ ತ್ರಿಸದಸ್ಯರ ಸಮಿತಿಯಲ್ಲಿ ಪ್ರಧಾನಿ ಮನಮೋಹನ್ ಸಿಂಗ್ ಮತ್ತು ಗೃಹ ಸಚಿವ ಪಿ. ಚಿದಂಬರಂ ಅವರಿದ್ದರು ಎಂಬುದು ಗಮನಾರ್ಹ. ಸಮಿತಿಯನ್ನು ಸರ್ವೋಚ್ಚ ನ್ಯಾಯಾಲಯ ತೀವ್ರ ತರಾಟೆಗೆ ತೆಗೆದುಕೊಂಡಿದೆ. ಇದರಿಂದ ಕಾಂಗ್ರೆಸ್ ನೇತೃತ್ವದ ಯುಪಿಎ ಸರಕಾರ ಮುಖಭಂಗ ಅನುಭವಿಸಿದೆ.

ಸಮಿತಿಯ ಮತ್ತೊಬ್ಬ ಸದಸ್ಯರಾಗಿದ್ದ ಪ್ರತಿಪಕ್ಷದ ನಾಯಕಿ ಸುಷ್ಮಾ ಸ್ವರಾಜ್ ಅವರು ಥಾಮಸ್ ನೇಮಕಕ್ಕೆ (ಸಿವಿಸಿ) ಸುತರಾಂ ಒಪ್ಪಿಗೆ ಸೂಚಿಸಿರಲಿಲ್ಲ. ಸ್ವತಃ ಥಾಮಸ್ ಭ್ರಷ್ಟಾಚಾರ ಆರೋಪದಲ್ಲಿ ಸಿಲುಕಿರುವಾಗ ಭ್ರಷ್ಟಾಚಾರ ವಿರುದ್ಧ ಕೆಲಸ ಮಾಡಬೇಕಾದ ಸಂಸ್ಥೆಗೆ ಅವರನ್ನು ಮುಖ್ಯಸ್ಥರನ್ನಾಗಿ ನೇಮಕ ಮಾಡುವುದು ಬೇಡವೇ ಬೇಡ ಎಂದು ಸುಷ್ಮಾ ಸ್ಪಷ್ಟವಾಗಿ ಹೇಳಿದ್ದರು. ಸುಷ್ಮಾ ಧಾಟಿಯಲ್ಲೇ ವಾದಿಸಿರುವ ಸುಪ್ರೀಂ ಕೋರ್ಟ್, ಭಕ್ಷರಾಗಿರುವವರೇ ರಕ್ಷಕರಾದರೆ ಹೇಗೆ ಎಂದು ಪ್ರಶ್ನಿಸಿದೆ. ಸಿವಿಸಿ ಸ್ಥಾನದ ಘನತೆ, ಪಾವಿತ್ರ್ಯವನ್ನು ಎತ್ತಿಹಿಡಿಯಲಾಗಿದೆ ಎಂದು ತೀರ್ಪು ಹೊರಬೀಳುತ್ತಿದ್ದಂತೆ ಸುಷ್ಮಾ ಟ್ವೀಟ್ ಮಾಡಿದ್ದಾರೆ.

1980ರಲ್ಲಿ ಕೇರಳದಲ್ಲಿ ಆಹಾರ ಕಾರ್ಯದರ್ಶಿಯಾಗಿದ್ದ ಥಾಮಸ್ ಮಲೇಷಿಯಾದಿಂದ ಭಾರಿ ಪ್ರಮಾಣದಲ್ಲಿ ಪಾಮ್ ಎಣ್ಣೆ ಆಮದಿಗೆ ತಾಕೀತು ಮಾಡಿದ್ದರು. ನಂತರ ಅನಗತ್ಯವಾಗಿ ಭಾರಿ ಮೊತ್ತ ತೆತ್ತು ಆಮದು ಮಾಡಿಕೊಂಡಿರುವುದು ಬೆಳಕಿಗೆ ಬಂದಿತ್ತು. ಥಾಮಸ್ ಈ ಅವ್ಯವಹಾರದ ಫಲಾನುಭವಿಯಾಗಿದ್ದರು ಎಂದು ಆರೋಪಿಸಲಾಗಿತ್ತು.

English summary
The Supreme Court has ruled that PJ Thomas' appointment as Central Vigilance Commissioner (CVC) is invalid. The Prime Minister and Home Minister, who were two of the three members of the committee that chose him, have been criticized severely by the court. The third member of that committee Sushma Swaraj, had objected strongly to Thomas being made CVC.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X