ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹೇಮಾಮಾಲಿನಿ ಕರ್ನಾಟಕದಿಂದ ರಾಜ್ಯಸಭೆಗೆ ಆಯ್ಕೆ

By Prasad
|
Google Oneindia Kannada News

Hema Malini elected to Rajya Sabha from Karnataka
ಬೆಂಗಳೂರು, ಮಾ. 3 : ಬಿಜೆಪಿಯಿಂದ ನಾಮಾಂಕಿತಗೊಂಡಿದ್ದ ಹಿಂದಿ ಚಿತ್ರನಟಿ 'ಕನಸಿನ ಕನ್ಯೆ' ಹೇಮಾಮಾಲಿನಿ ಅವರು ಗುರುವಾರ ನಡೆದ ಸ್ಪರ್ಧೆಯಲ್ಲಿ ಜಯಶಾಲಿಯಾಗಿದ್ದು, ರಾಜ್ಯಸಭೆಗೆ ನಿರಾಯಾಸವಾಗಿ ಆಯ್ಕೆಯಾಗಿದರು. ಹೇಮಾಮಾಲಿನಿ ಅವರು ಕಾಂಗ್ರೆಸ್ ಮತ್ತು ಜೆಡಿಎಸ್ ಬೆಂಬಲಿತ ಸ್ವತಂತ್ರ ಅಭ್ಯರ್ಥಿ ಸಾಹಿತಿ ಮರುಳಸಿದ್ದಪ್ಪ ಅವರನ್ನು ಪರಾಭವಗೊಳಿಸಿದರು.

ಅನರ್ಹಗೊಂಡ ಶಾಸಕರು ಇಲ್ಲಿ ಕೂಡ ಮತ ಹಾಕಲು ಸಾಧ್ಯವಾಗದ್ದರಿಂದ ಹೇಮಾಮಾಲಿನಿ ಗೆಲುವು ನಿರೀಕ್ಷಿತವಾಗಿತ್ತು. ಇಂದು ಬೆಳಿಗ್ಗೆ 9 ಗಂಟೆಯಿಂದ ಸಂಜೆ ನಾಲ್ಕು ಗಂಟೆಯವರೆಗೆ ನಡೆದ ಮತದಾನದಲ್ಲಿ ಹೇಮಾಮಾಲಿನಿ ಪರ 106 ಮತಗಳು ಬಂದರೆ, ಮರುಳಸಿದ್ದಪ್ಪ 94 ಮತಗಳನ್ನಷ್ಟೇ ಗಳಿಸಲು ಯಶಸ್ವಿಯಾದರು. 5 ಮತಗಳು ಕುಲಗೆಟ್ಟವು.

ಡಾ. ಎಂ. ರಾಜಶೇಖರ ಮೂರ್ತಿ ಅವರ ನಿಧನದಿಂದ ತೆರವಾಗಿದ್ದ ಸ್ಥಾನಕ್ಕೆ ಹೇಮಾಮಾಲಿನಿ ಸ್ಪರ್ಧಿಸಿದ್ದರು. ಈ ಸ್ಥಾನಕ್ಕೆ ಕನ್ನಡೇತರ ಅಭ್ಯರ್ಥಿಯನ್ನು ಕಣಕ್ಕಿಳಿಸಿದ್ದಕ್ಕೆ ಸಾಂಸ್ಕೃತಿಕ ಮತ್ತು ಸಾರ್ವಜನಿಕ ವಲಯದಿಂದ ಭಾರೀ ಪ್ರತಿರೋಧ ವ್ಯಕ್ತವಾಗಿತ್ತು. ಜ್ಞಾನಪೀಠ ಪ್ರಶಸ್ತಿ ವಿಜೇತ ನಾಟಕಕಾರ ಗಿರೀಶ್ ಕಾರ್ನಾಡ್ ಮತ್ತು ಬರಗೂರು ರಾಮಚಂದ್ರಪ್ಪ ಸೇರಿದಂತೆ ಸಾಹಿತಿಗಳೆಲ್ಲ ಒಕ್ಕೊರಲಿನಿಂದ ಹೇಮಾಮಾಲಿನಿ ಅವರ ಸ್ಪರ್ಧೆಯನ್ನು ವಿರೋಧಿಸಿದ್ದರು.

ಬಿಜೆಪಿಯಲ್ಲಿಯೇ ಹೇಮಾಮಾಲಿನಿ ಅವರ ಸ್ಪರ್ಧೆಗೆ ಅಸಮಾಧಾನವಿತ್ತು. ಮಾಜಿ ಕೇಂದ್ರ ಸಚಿವ ವಿ. ಧನಂಜಯ ಕುಮಾರ್ ಅವರು ಸಮರ್ಥ ಅಭ್ಯರ್ಥಿ ಎಂದು ಒಂದು ವಲಯದಿಂದ ಮಾತು ಕೇಳಿಬಂದಿತ್ತು. ಕೊನೆಗೆ ಧನಂಜಯ ಕುಮಾರ್ ಅವರು ಕಣದಿಂದ ಹಿಂದೆ ಸರಿಯಬೇಕಾಯಿತು.

ಗೆದ್ದ ನಂತರ ಖುಷಿಯನ್ನು ಪತ್ರಕರ್ತರೊಂದಿಗೆ ಹಂಚಿಕೊಂಡ ಹೇಮಾಮಾಲಿನಿ, "ನಾನು ಕನ್ನಡೇತರ ಎಂದು ನನ್ನನ್ನು ವಿರೋಧಿಸಿದ್ದು ಇನ್ನೂ ವಿಚಿತ್ರ ಎನಿಸುತ್ತಿದೆ. ಕಲಾವಿದೆ ಎಲ್ಲರಿಗೂ ಸೇರಿದವಳು. ಕರ್ನಾಟಕದ ಬಡಜನತೆ, ಮಕ್ಕಳು ಮತ್ತು ರೈತರಿಗಾಗಿ ಯಾವುದೇ ರೀತಿ ರಾಜ್ಯಸಭೆಯಲ್ಲಿ ಹೋರಾಡಲು ನಾನು ಸಿದ್ಧ" ಎಂದು ಹೇಳಿದ ಅವರು ತನ್ನನ್ನು ಬೆಂಬಲಿಸಿದ ಬಿಜೆಪಿಗೆ ಧನ್ಯವಾದ ಹೇಳಿದರು.

ಸ್ಪರ್ಧಿಸುವ ಮುನ್ನ ಶೋಲೆ ಚಿತ್ರಕ್ಕಾಗಿ ರಾಮನಗರದಲ್ಲಿ ತಾವು ಕಳೆದ ದಿನಗಳನ್ನು ನೆನೆಸಿಕೊಂಡಿದ್ದ ಹೇಮಾಮಾಲಿನಿ, ರಾಮನಗರದ ಅಭಿವೃದ್ಧಿಗಾಗಿಯೂ ಶ್ರಮಿಸುವುದಾಗಿ ನುಡಿದಿದ್ದರು.

English summary
Hindi film actress 'Dream Girl' Hema Malini elected to Rajya Sabha from Karnataka. Hema Malini defeated Marulasiddappa, to the vacant seat after the death of M. Rajashekhar Murthy. Hema Malini had to face opposition from Kannada laureates as she is a non-kannadiga.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X