ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಿಶ್ವಕಪ್ ನ ಅತ್ಯಂತ ವೇಗದ ಶತಕ ವೀರರು

By Mahesh
|
Google Oneindia Kannada News

ಬೆಂಗಳೂರು, ಮಾ.3: ಹಲವು ಅಚ್ಚರಿಗಳನ್ನು ಪ್ರೇಕ್ಷಕರಿಗೆ ಉಣಬಡಿಸುವ ವಿಶ್ವಕಪ್ ಗೆ ಸಾಟಿಯಾದ ಟೂರ್ನಿ ಮತ್ತೊಂದಿಲ್ಲ. ವಿಶ್ವಕಪ್ ಆರಂಭ(1975)ದಲ್ಲಿ ಆಸ್ಟ್ರೇಲಿಯಾ ವಿರುದ್ಧ ಕ್ಲೈವ್ ಲಾಡ್ 82 ಎಸೆತಗಳಲ್ಲೇ 100 ರನ್ ಚಚ್ಚಿದ್ದು ಕಂಡು ವಿಶ್ವವೇ ಬೆರಗಾಗಿತ್ತು. ನಂತರ ಹಲವು ವೇಗದ ಶತಕಗಳು ದಾಖಲಾದರೂ, ನೆನ್ನೆ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಐರ್ಲೆಂಡ್ ನ ಕೆವಿನ್ ಓ" ಬ್ರಿಯಾನ್ ದಾಖಲಿಸಿದ ಶತಕ ಐತಿಹಾಸಿಕ ಎನ್ನಬಹುದು. ಇಂಗ್ಲೆಂಡ್ ವಿರುದ್ಧದ ಲೀಗ್ ಪಂದ್ಯದಲ್ಲಿ ಮಹತ್ವದ ಗೆಲುವು ತಂದು ಕೊಟ್ಟ ಈ ಶತಕವನ್ನು ಕೆವಿನ್ ಪೋಷಕರು ಕಣ್ಣಾರೆ ಕಂಡು ಪುಳಕಿತರಾದರು.


63 ಎಸೆತಗಳಲ್ಲಿ 13 ಬೌಂಡರಿ ಮತ್ತು 6 ಸಿಕ್ಸರ್ ಇರುವ 113 ರನ್ ಗಳಿಸಿ ತಂಡದ ಗೆಲುವಿಗೆ ಕಾರಣರಾದ ಕೆವಿನ್ ಓ ಬ್ರಿಯಾನ್ ನಿರೀಕ್ಷೆಯಂತೆ ಪಂದ್ಯಶ್ರೇಷ್ಠ ಪ್ರಶಸ್ತಿ ಗಳಿಸಿದರು. 2007 ರ ವಿಶ್ವಕಪ್ ನಲ್ಲಿ ಪಾಕಿಸ್ತಾನವನ್ನು ಮನೆಗೆ ಅಟ್ಟುವಲ್ಲಿ ಕೆವಿನ್ ಅವರ ತಮ್ಮ ನಿಯಾಲ್ ಓ ಬ್ರಿಯಾನ್ ಮಹತ್ವದ ಪಾತ್ರವಹಿಸಿ, ಪಂದ್ಯ ಶ್ರೇಷ್ಠರಾಗಿದ್ದರು. ವಿಶ್ವಕಪ್‌ನಲ್ಲಿ ವೇಗದ ಶತಕ ಗಳಿಸಿದ ವಿಶ್ವದ ಮೊದಲ ಬ್ಯಾಟ್ಸ್‌ಮನ್ ಆಗಿ ಕೆವಿನ್ ದಾಖಲೆ ಬರೆದಿದ್ದಾರೆ. ವಿಶ್ವಕಪ್ ನಲ್ಲಿ ಟಾಪ್ ವೇಗದ ಶತಕಗಳ ಪಟ್ಟಿ ಇಲ್ಲಿದೆ.

* ಐರ್ಲೆಂಡ್ ನ ಕೆವಿಬ್ ಓ"ಬ್ರಿಯಾನ್ : 50 ಎಸೆತ, ಇಂಗ್ಲೆಂಡ್ ವಿರುದ್ಧ, 2011 ವಿಶ್ವಕಪ್, ಐರ್ಲೆಂಡ್ ಗೆ 3 ವಿಕೆಟ್ ಜಯ.
* ಆಸ್ಟ್ರೇಲಿಯಾದ ಮ್ಯಾಥ್ಯು ಹೇಡನ್: 66 ಎಸೆತ, ದಕ್ಷಿಣ ಆಫ್ರಿಕಾ ವಿರುದ್ಧ 2007ರ ವಿಶ್ವಕಪ್, ಆಸ್ಟ್ರೇಲಿಯಾಕ್ಕೆ 83 ರನ್ ಗಳ ಗೆಲುವು.
* ಕೆನೆಡಾದ ಜಾನ್ ಡೆವಿಸನ್ : 67ಎಸೆತ, ವೆಸ್ಟ್ ಇಂಡೀಸ್ ವಿರುದ್ಧ 2003ರ ವಿಶ್ವಕಪ್, ವೆಸ್ಟ್ ಇಂಡೀಸ್ ಗೆ 7 ವಿಕೆಟ್ ಗೆಲುವು.
* ಭಾರತದ ಕಪಿಲ್ ದೇವ್ : 72 ಎಸೆತ, ಜಿಂಬಾಬ್ವೆ ವಿರುದ್ಧ 1983ರ ವಿಶ್ವಕಪ್, ಭಾರತಕ್ಕೆ ಗೆಲುವು.
* ಆಸ್ಟ್ರೇಲಿಯಾದ ಗಿಲ್ ಕ್ರಿಸ್ಟ್ : 72 ಎಸೆತ, ಶ್ರೀಲಂಕಾ ವಿರುದ್ಧ 2007ರ ವಿಶ್ವಕಪ್ ಫೈನಲ್ , ಆಸ್ಟ್ರೇಲಿಯಾಕ್ಕೆ ಗೆಲುವು.
* ಭಾರತದ ವಿರೇಂದರ್ ಸೆಹ್ವಾಗ್: 81 ಎಸೆತ, ಬರ್ಮುಡಾ ವಿರುದ್ಧ 2007ರವಿಶ್ವಕಪ್, ಭಾರತಕ್ಕೆ 257ರನ್ ಗೆಲುವು( ಹೆಚ್ಚು ಅಂತರದ ಗೆಲುವು) ಭಾರತ ಸ್ಕೋರ್ 414ರನ್ ಕೂಡಾ ಅತ್ಯಧಿಕ ಮೊತ್ತವಾಗಿ ದಾಖಲೆ.
* ಶ್ರೀಲಂಕಾದ ಮಹೇಲಾ ಜಯವರ್ದನೆ: 81 ಎಸೆತ, ಕೆನಡಾ ವಿರುದ್ಧ 2011 ವಿಶ್ವಕಪ್, 210ರನ್ ಅಂತರದಲ್ಲಿ ಶ್ರೀಲಂಕಾಕ್ಕೆ ಜಯ.

ವಿಶ್ವಕಪ್ : ಅಭ್ಯಾಸ ಪಂದ್ಯಗಳ ಫಲಿತಾಂಶ | ಮುಖಪುಟ | ಚಿತ್ರಪಟ | ಅಂಕಗಳ ಕೋಷ್ಟಕ | ಟಾಪ್ ಬ್ಯಾಟ್ಸ್ ಮನ್| ಟಾಪ್ ಬೌಲರ್

ಅತ್ಯಂತ ವೇಗದ ಪಟ್ಟಿಯನ್ನು ಗಮನಿಸಿದರೆ, ಬಹುತೇಕ ಆಟಗಾರರು ಹೇಡನ್, ಗಿಲ್ ಕ್ರಿಸ್ಟ್, ಸೆಹ್ವಾಗ್ ಆರಂಭಿಕ ಆಟಗಾರರಾಗಿದ್ದಾರೆ. ಲಾಯ್ಡ್, ಜಯವರ್ದನೆ, ಓ ಬ್ರಿಯಾನ್, ಕಪಿಲ್ ದೇವ್ ಮಧ್ಯಮ ಕ್ರಮಾಂಕದಲ್ಲಿ ಬಂದು ಮಿಂಚಿದ್ದಾರೆ. ವೇಗದ ಶತಕ ಬಾರಿಸಿ ಕೂಡಾ ತಂಡಕ್ಕೆ ಗೆಲುವು ತಂದುಕೊಡಲಾಗದ ದುರಂತ ನಾಯಕನಾಗಿ ಕೆನಡಾದ ಡೆವಿಸನ್ ಕಾಣಿಸುತ್ತಾರೆ.

English summary
It all started from the first edition of World Cup. Clive Lloyd showed the way by scoring 100 runs in just 83 balls. Then followed by Kapil Dev 100(73balls) in 1983 WC. Now Ireland all rounder Kevin O'Brien hit the fastest century World Cup100(50 balls). It is also sixth fastest in ODIs.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X