ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವೇಶ್ಯಾವಾಟಿಕೆ ಸೆರಗಿನಲ್ಲಿ ಉರುಳಾದ ಮೈಸೂರು

By * ಬಿ.ಎಂ.ಲವಕುಮಾರ್, ಮೈಸೂರು
|
Google Oneindia Kannada News

ಮೈಸೂರಿನಲ್ಲಿ ಹೊಟ್ಟೆಪಾಡಿಗಾಗಿ ಹೆಣ್ಣು ಮಕ್ಕಳು ಬೀದಿಗಿಳಿಯ ತೊಡಗಿದ್ದಾರೆ. ಹೀಗಾಗಿ ನಗರದ ಸಿಟಿ ಬಸ್ ಸ್ಟ್ಯಾಂಡ್ ಸುತ್ತಮುತ್ತ ಹಾಗೂ ಸಯ್ಯಾಜಿರಾವ್ ರಸ್ತೆಯಲ್ಲಿ ಹೆಜ್ಜೆಗೊಬ್ಬರಂತೆ ವೇಶ್ಯೆಯರು ಕಂಡು ಬರುತ್ತಿದ್ದು ಇದು ಆತಂಕಕಾರಿ ಬೆಳವಣಿಗೆಯಾಗಿದೆ. ಮೈಸೂರಿನಲ್ಲಿ ದಿನದಿಂದ ದಿನಕ್ಕೆ ವೇಶ್ಯಾವಾಟಿಕೆ ಹೆಚ್ಚುತ್ತಿದ್ದರೂ ಯಾರೂ ಕೂಡ ಇದರ ಬಗ್ಗೆ ತಲೆಕೆಡಿಸಿಕೊಂಡಂತೆ ಕಾಣುತ್ತಿಲ್ಲ. ಹಾಗಾಗಿ ದುಡಿದು ಬದುಕುವ ಬದಲು, ಹೆಣ್ಣು ಮಕ್ಕಳು ವೇಶ್ಯಾವೃತ್ತಿಗೆ ಮುಂದಾಗುತ್ತಿರುವುದು ದುರಂತವೇ ಸರಿ.

ಇವತ್ತು ಮೈಸೂರಿನ ಸಿಟಿ ಬಸ್ ಸ್ಟ್ಯಾಂಡ್ ಒಳಗೆ ಹಾಗೂ ಹೊರಗೆ, ಸಯ್ಯಾಜಿರಾವ್ ರಸ್ತೆ ಮತ್ತು ರಸ್ತೆಗೆ ಲಿಂಕ್ ಕೊಡೋ ಗಲ್ಲಿಯಲ್ಲಿ, ಪ್ರಭಾ ಥಿಯೇಟರ್ ಬಳಿ ಗುಂಪು ಗುಂಪಾಗಿ ನಿಂತು ಗಿರಾಕಿಗಳಿಗಾಗಿ ಕಾಯುವವರು ಒಂದೆಡೆಯಾದರೆ, ಸಾರ್ವಜನಿಕ ರಸ್ತೆಯಲ್ಲಿಯೇ ರಾಜಾರೋಷವಾಗಿ ನಿಂತು ಅಶ್ಲೀಲವಾಗಿ ವರ್ತಿಸುತ್ತಾ ಗಿರಾಕಿಗಳನ್ನು ಸೆಳೆಯುವವರು ಮತ್ತೊಂದೆಡೆ ಕಂಡು ಬರುತ್ತಾರೆ.

ವೇಶ್ಯೆಯರ ಪೈಕಿ ಕೆಲವರು ಹರೆಯದ ಹುಡುಗಿಯರಿದ್ದರೆ, ಮತ್ತೆ ಕೆಲವರು ಸಂಸಾರಸ್ಥ ಮಹಿಳೆಯರು, ಅಷ್ಟೇ ಅಲ್ಲ ಅರುವತ್ತರ ಆಸುಪಾಸಿನವರೂ ಇಲ್ಲಿದ್ದಾರೆ. ಇವರಲ್ಲಿ ಹೆಚ್ಚಿನವರು ಹೊಟ್ಟೆಪಾಡಿಗಾಗಿ ಈ ವೃತ್ತಿಗಿಳಿದಿದ್ದರೆ, ಇನ್ನು ಕೆಲವರು ಸುಲಭ ಹಣ ಸಂಪಾದನೆಗಾಗಿ ಪಾರ್ಟ್ ಟೈಂ ವೃತ್ತಿಯನ್ನಾಗಿ ಮಾಡಿಕೊಂಡಿದ್ದಾರೆ. ಇವರ ನಡುವೆ ಬಡಹುಡುಗಿಯರ ಪರಿಚಯ ಮಾಡಿಕೊಂಡು ಅವರಿಗೆ ಕೆಲಸ ಕೊಡಿಸುವ ಆಮಿಷವೊಡ್ಡಿ ವೈಶ್ಯಾವೃತ್ತಿಗೆ ತಳ್ಳುವವರೂ ಇದ್ದಾರೆ. ಕಷ್ಟಪಟ್ಟು ಹೂವು, ತರಕಾರಿ, ಮನೆಕೆಲಸ ಮಾಡಿಕೊಂಡು ಬದುಕುತ್ತಿದ್ದ ಕೆಲವರು ಅದನ್ನು ಬಿಟ್ಟು ಅನಿವಾರ್ಯವಾಗಿ ವೇಶ್ಯಾವಾಟಿಕೆಯತ್ತ ವಾಲುತ್ತಿದ್ದಾರೆ ಎಂದರೆ ತಪ್ಪಾಗುವುದಿಲ್ಲ.

ಲಾಡ್ಜ್‌ ಗಳಿಗೆ ವೇಶ್ಯೆಯರೇ ಅನ್ನದಾತರು: ಇವತ್ತು ನಗರದ ಕೆಲವೊಂದು ಲಾಡ್ಜ್‌ಗಳಿಗೆ ಈ ವೇಶ್ಯೆಯರೇ ಅನ್ನದಾತರಾಗಿದ್ದು, ಅವರಿಂದಲೇ ಹಲವು ಲಾಡ್ಜ್‌ಗಳು ನಡೆಯುತ್ತಿವೆ ಎಂಬುವುದು ಕೂಡ ಸುಳ್ಳಲ್ಲ. ಇದರ ನಡುವೆ ಕೆಲವು ಲಾಡ್ಜ್‌ಗಳಲ್ಲಿ ತಮ್ಮದೇ ಆದ ಹುಡುಗಿಯರನ್ನಿಟ್ಟುಕೊಂಡು ವೇಶ್ಯಾವಾಟಿಕೆ ನಡೆಸುತ್ತಿರುವುದು ಕೂಡ ಸುಳ್ಳಲ್ಲ.

ಇದುವರೆಗೆ ಪೊಲೀಸರು ಲೆಕ್ಕವಿಲ್ಲದಷ್ಟು ಬಾರಿ ಲಾಡ್ಜ್‌ಗಳ ಮೇಲೆ ದಾಳಿ ನಡೆಸಿದ್ದಾರೆ. ಆದರೆ ದಂಧೆ ಮಾತ್ರ ನಿಂತಿಲ್ಲ.ನಗರದ ಕೆಲವು ಕಡೆಗಳಲ್ಲಿ ಮನೆಗಳಲ್ಲೇ ದಂಧೆ ನಡೆಯುತ್ತಿದೆ. ಮೊಬೈಲ್, ಇಂಟರ್‌ನೆಟ್ ಮೂಲಕವೇ ವ್ಯವಹಾರ ಕುದುರಿಸಿ ಮನೆಗೆ ಗಿರಾಕಿಗಳನ್ನು ಕರೆಯಿಸಿಕೊಂಡು ದಂಧೆ ನಡೆಸಲಾಗುತ್ತಿದೆ. ಇವು ಶ್ರೀಮಂತರೇ ವಾಸಿಸುವ ಬಡಾವಣೆಗಳಲ್ಲಿ ಹೆಚ್ಚಾಗಿ ನಡೆಯುತ್ತಿದೆ. ಗೆಸ್ಟ್‌ಗಳ ಪೋಸ್‌ನಲ್ಲಿ ಕಾರಿನಲ್ಲಿ ಮನೆಗೆ ಬರುವ ಗಿರಾಕಿಗಳು ವ್ಯವಹಾರ ಮುಗಿಸಿಕೊಂಡು ಹೋಗುತ್ತಾರೆ.

ಹತಾಶೆಗೊಂಡ ಪೊಲೀಸರು: ಪೊಲೀಸರು ಇಂತಹ ದಂಧೆಗಳನ್ನು ಪತ್ತೆ ಹಚ್ಚಿ ದಾಳಿ ಮಾಡೋ ಹೊತ್ತಿಗೆ ಮಗ್ಗುಲು ಬದಲಿಸುವ ಕಸುಬುದಾರರು ಮತ್ತೊಂದು ರೀತಿಯ ಐಡಿಯಾ ಹುಡುಕಿರುತ್ತಾರೆ. ಸಯ್ಯಾಜಿರಾವ್ ರಸ್ತೆಯಲ್ಲಿ ಅಡ್ಡಾಡುವ ಬೀದಿ ವೇಶ್ಯೆಯರನ್ನು ಹತ್ತಿಕ್ಕಲು ನಡೆಸಿದ ಎಲ್ಲಾ ಕ್ರಮಗಳು ವಿಫಲವಾಗಿವೆ.

ಇಲ್ಲಿರುವ ಅಂಗಡಿ ಮಾಲೀಕರು ಅಂಗಡಿ ಮುಂದೆ, ಸುತ್ತಮುತ್ತ ವೇಶ್ಯೆಯರು ಅಡ್ಡಾಡುವುದರಿಂದ ಮರ್ಯಾದಸ್ಥರು ಅಂಗಡಿಯತ್ತ ಸುಳಿಯದೆ ತೊಂದರೆಯಾಗುತ್ತಿದೆ ಎಂದು ಅಂಗಡಿ ಬಂದ್ ಮಾಡಿ ಬೀದಿಗಿಳಿದು ವೇಶ್ಯೆಯರ ಹಾವಳಿ ಮಟ್ಟಹಾಕುವಂತೆ ಪ್ರತಿಭಟನೆ ನಡೆಸಿದ್ದರು. ಆದರೆ ಯಾವುದೇ ಪ್ರಯೋಜನವಾಗಿಲ್ಲ. ಬದಲಿಗೆ ಮೊದಲಿಗಿಂತ ವೇಶ್ಯೆಯರ ಸಂಖ್ಯೆ ಹೆಚ್ಚಾಗಿದೆ. ಇವರನ್ನು ಈ ದಂಧೆಯಿಂದ ಬಿಡಿಸಿ ಯಾವುದಾದರು ಕೆಲಸ ಕೊಡಿಸಿ ಪುನರ್ವಸತಿ ಕಲ್ಪಿಸುವ ವ್ಯವಸ್ಥೆ ಮಾಡಬೇಕಾಗಿದೆ.

ಮಾನವ ಕಳ್ಳಸಾಗಣೆ: ಇದೆಲ್ಲದರ ನಡುವೆ ಮತ್ತೊಂದು ಆಘಾತಕಾರಿ ಸುದ್ದಿಯೆಂದರೆ ಕೆಲವು ಲಾಡ್ಜ್‌ಗಳಿಗೆ ಇಪ್ಪತ್ತೋ, ಮೂವತ್ತೋ ಸಾವಿರಕ್ಕೆ ಬಾಂಗ್ಲಾದ ಹುಡುಗಿಯರು ಮಾರಾಟವಾಗುತ್ತಿದ್ದಾರೆ. ಕಳೆದ ಕೆಲವು ವರ್ಷಗಳಲ್ಲಿ ಲಾಡ್ಜ್‌ನ ಮೇಲೆ ಪೊಲೀಸರು ದಾಳಿ ಮಾಡಿದಾಗ ಬಾಂಗ್ಲಾ ಹುಡುಗಿಯರು ಸಿಕ್ಕಿಬಿದ್ದಿರುವುದನ್ನು ಗಮನಿಸಿದರೆ ಸುಲಭವಾಗಿ ಅರ್ಥವಾಗಿ ಬಿಡುತ್ತದೆ. ಬಾಂಗ್ಲಾ ದೇಶದ ಬಡತನ ಅಲ್ಲಿನ ಹುಡುಗಿಯರನ್ನು ಕೆಲಸ ಅರಸಿಕೊಂಡು ಹೊರಗೆ ಹೋಗುವಂತೆ ಮಾಡಿದೆ. ಇದರ ಲಾಭ ಪಡೆದ ಕೆಲವರು ತಮ್ಮ ಚಾಣಾಕ್ಷತನದಿಂದ ಬಾಂಗ್ಲಾ ಗಡಿಯಿಂದ ಅವರನ್ನು ಭಾರತಕ್ಕೆ ದಾಟಿಸುತ್ತಾರೆ

ಹೀಗೆ ಬಂದ ಹುಡುಗಿಯರನ್ನು ಇಪ್ಪತ್ತೋ ಮೂವತ್ತೋ ಸಾವಿರಕ್ಕೆ ಖರೀದಿ ಮಾಡಿ ದಕ್ಷಿಣ ಭಾರತದ ಲಾಡ್ಜ್‌ಗಳಿಗೆ ರವಾನೆ ಮಾಡಲಾಗುತ್ತದೆ. ಹೀಗೆ ಸಿಗುವ ಹುಡುಗಿಯರನ್ನು ಲಾಡ್ಜ್ ಮಾಲೀಕರು ಖರೀದಿಸಿ ದಂಧೆಗೆ ತಳ್ಳುತ್ತಾರೆ. ಇವರಿಂದ ಬರುವ ಆದಾಯವೆಲ್ಲಾ ಲಾಡ್ಜ್ ಮಾಲೀಕರ ತಿಜೋರಿ ಸೇರುತ್ತದೆ. ಇಂತಹವೊಂದು ಪಿಡುಗನ್ನು ತಡೆಗಟ್ಟುವ ಮೂಲಕ ಅಮಾಯಕ ಹೆಣ್ಣುಮಕ್ಕಳು ಪಾಪದ ಕೂಪಕ್ಕೆ ಸಿಲುಕುವುದನ್ನು ತಡೆಯಬೇಕಾಗಿದೆ.

English summary
Prostitution business is growing day by day in cultural capital of Karnataka. Sayyaji Rao road, city bus stand area in Mysore are now become prominent place for making prostitution deals. Lodges and Restaurants are making big business through Prostitution. Police have trying hard to curb the menace.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X