ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪೆಟ್ರೋಲ್ ದರ ಮತ್ತೆ ಮತ್ತೆ ಮತ್ತೆ ಏರಿಕೆ

By Mahesh
|
Google Oneindia Kannada News

Petrol Price likely to hike
ನವದೆಹಲಿ, ಮಾ.1: ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರ ಮತ್ತೊಮ್ಮೆ ಪೆಟ್ರೋಲ್ ದರವನ್ನು ಏರಿಸುವ ಸಿದ್ಧತೆ ನಡೆಸಿದೆ. ಸರ್ಕಾರ ಸ್ವಾಮ್ಯದ ತೈಲ ಕಂಪೆನಿಗಳು, ಇಂಧನಗಳ ಮೇಲೆ ವಿಧಿಸಿರುವ ತೆರಿಗೆಗಳನ್ನು ಕಡಿತಗೊಳಿಸುವಂತೆ ಮಾಡಿರುವ ಮನವಿಯನ್ನು ಸರ್ಕಾರ ತಳ್ಳಿ ಹಾಕಿದೆ. ಸದ್ಯಕ್ಕೆ ತೈಲ ಸಚಿವ ಜೈಪಾಲ್ ರೆಡ್ಡಿ ಜೊತೆ ಮಾತುಕತೆ ಜಾರಿಯಲ್ಲಿದೆ. ತೈಲ ಕಂಪೆನಿಗಳ ಮನವಿಗೆ ಸರ್ಕಾರ ಒಪ್ಪದಿದ್ದರೆ ಪೆಟ್ರೋಲ್ ಬೆಲೆ ರು. 1 ರಿಂದ 4ರವರೆಗೆ ಹೆಚ್ಚಾಗುವ ಸಾಧ್ಯತೆಯಿದೆ.

ತೈಲ ಸಚಿವ ಜೈಪಾಲ್ ರೆಡ್ಡಿ ಜತೆ ಸರ್ಕಾರಿ ಸ್ವಾಮ್ಯದ ಕಂಪೆನಿಗಳಾದ ಇಂಡಿಯನ್ ಆಯಿಲ್ ಕಾರ್ಪೊರೇಷನ್(IOC), ಭಾರತ್ ಪೆಟ್ರೋಲಿಯಂ(BPCL), ಹಿಂದೂಸ್ತಾನ್ ಪೆಟ್ರೋಲಿಯಂ(HP) ಕಂಪೆನಿಗಳ ಅಧಿಕಾರಿಗಳು ಅನೌಪಚಾರಿಕ ಮಾತುಕತೆ ಮುಂದುವರೆಸಿದ್ದಾರೆ. ಸರ್ಕಾರ ತೆರಿಗೆ ಕಡಿತ ಮಾಡಿದರೆ, ಗ್ರಾಹಕರಿಗೂ ಅನುಕೂಲ, ಇಲ್ಲದಿದ್ದರೆ ಬೆಲೆ ಏರಿಸುವುದನ್ನು ತಡೆಯಲು ಸಾಧ್ಯವಿಲ್ಲ ಎಂದು ತೈಲ ಸಂಸ್ಥೆ ಅಧ್ಯಕ್ಷರೊಬ್ಬರು ಹೇಳಿದ್ದಾರೆ.

ಕಳೆದ ಜೂನ್ ತಿಂಗಳಿನಲ್ಲಿ ಪೆಟ್ರೋಲ್ ಬೆಲೆ ಏರಿಸುವ ಸ್ವಾತಂತ್ರ್ಯವನ್ನು ತೈಲ ಕಂಪೆನಿಗಳಿಗೆ ಸರ್ಕಾರ ನೀಡಿತ್ತು. ಆಂತರಿಕ ಇಂಧನ ಮಾರುಕಟ್ಟೆಯಲ್ಲಿ ಶೇ. 90 ರಷ್ಟು ಹಿಡಿತವನ್ನು ಮೂರು ಸರ್ಕಾರಿ ಸ್ವಾಮ್ಯದ ಕಂಪೆನಿಗಳು ಹೊಂದಿವೆ. ಬೆಲೆ ಏರಿಸುವ ಮುನ್ನ ತೈಲ ಸಚಿವರನ್ನು ಸಂಪರ್ಕಿಸಿ ಅನೌಪಚಾರಿಕ ಒಪ್ಪಿಗೆ ಪಡೆಯುವುದು ವಿಧಾನ.

ಇಂಧನ ಅವಶ್ಯಕತೆ; ಆಮದು ಹೆಚ್ಚಳ: 2010-11ರ ಸಾಲಿನಲ್ಲಿ ಒಂದು ಬ್ಯಾರಲ್ ಕಚ್ಚಾತೈಲಕ್ಕೆ ಸರಾಸರಿ 100 ಡಾಲರಿನಂತೆ ಆಮದು ಮಾಡಿಕೊಳ್ಳಲಾಗಿದೆ. ಭಾರತ ತನ್ನ ಇಂಧನ ಅವಶ್ಯಕತೆಯ ಶೇ.80 ರಷ್ಟನ್ನು ಆಮದು ಮಾಡಿಕೊಳ್ಳಲಾಗುತ್ತದೆ. ಆದರೆ, ಗ್ರಾಹಕರಿಂದ ಪೂರ್ಣ ಪ್ರಮಾಣದಲ್ಲಿ ಈ ಹಣವನ್ನು ಪಡೆಯಲಾಗುತ್ತಿಲ್ಲ. ಪ್ರತಿ ಲೀಟರ್ ಪೆಟ್ರೋಲ್ ಮೇಲೆ 14 ರು. ಗೂ ಹೆಚ್ಚು ತೆರಿಗೆ ಕಟ್ಟಬೇಕಿದೆ ಎಂದು ಸರ್ಕಾರಿ ಸ್ವಾಮ್ಯದ ಕಂಪೆನಿಗಳು ಹೇಳುತ್ತಿವೆ. ಒಟ್ಟಿನಲ್ಲಿ, ಯುಪಿಎ ಸರ್ಕಾರ ಗ್ರಾಹಕರಿಗೆ ಮತ್ತೊಮ್ಮೆ ಬೆಲೆ ಏರಿಕೆ ಬಿಸಿಯನ್ನು ಮುಟ್ಟಿಸಲಿದೆ.

English summary
State owned Indina Oil Corporation HPCL and BPCL are likely to hike petrol price this week due to increase of tax on fuel. Petrol price likely to hike from Rs.1 to 4. But, Final word has to come from Oil Minister Jaipal Reddy, who has to discuss with Empowered Group of Ministers before announcing the petrol new fare list.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X