ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೀನ್ಯಾ ಮೇಲೆ ಮಾಲಿಂಗ ತ್ರಿಶೂಲ ಪ್ರಯೋಗ!

By Prasad
|
Google Oneindia Kannada News

ಕೊಲಂಬೊ, ಮಾ. 1 : ವಿಶ್ವಕಪ್ ನಲ್ಲಿ ಎರಡನೇ ಬಾರಿಗೆ ಹ್ಯಾಟ್ರಿಕ್ ಸಾಧಿಸಿರುವ ಹೆಗ್ಗಳಿಕೆಗೆ ಶ್ರೀಲಂಕಾದ ಲಸಿತ್ ಮಾಲಿಂಗ ಪಾತ್ರರಾಗಿದ್ದಾರೆ. ದುರ್ಬಲ ಕೀನ್ಯಾದ ವಿರುದ್ಧ ತ್ರಿಶೂಲ ಎಸೆದಿರುವ ಮಾ'ಲಿಂಗ' ಒಂದು ದಿನ ಮೊದಲೇ ಮಹಾಶಿವರಾತ್ರಿಯನ್ನು ಭರ್ಜರಿಯಾಗಿ ಆಚರಿಸಿದ್ದಾರೆ. 2007ರ ವಿಶ್ವಕಪ್ ನಲ್ಲಿ ದಕ್ಷಿಣ ಆಫ್ರಿಕಾದ ವಿರುದ್ಧ ಮೊದಲ ಬಾರಿಗೆ ಮಾಲಿಂಗ ಹ್ಯಾಟ್ರಿಕ್ ಸಾಧಿಸಿದ್ದರು.

2007ರಲ್ಲಿ ದಕ್ಷಿಣ ಆಫ್ರಿಕಾದ ವಿರುದ್ಧವೂ ಹ್ಯಾಟ್ರಿಕ್ ಸಾಧಿಸಿದ್ದ ಲಸಿತ್ ಮಾಲಿಂಗ ಅವರ ಟ್ರೇಡ್ ಮಾರ್ಕ್ ಯಾರ್ಕರ್ ಮತ್ತು ರಿವರ್ಸ್ ಸ್ವಿಂಗ್ ಗಳಿಗೆ ಕೀನ್ಯಾದ ಬಳಿ ಯಾವುದೇ ಉತ್ತರವಿರಲಿಲ್ಲ. ಈ ಪಂದ್ಯದಲ್ಲಿ ಹ್ಯಾಟ್ರಿಕ್ ನೊಂದಿಗೆ 38 ರನ್ ಗಳಿಗೆ ಒಟ್ಟು 6 ವಿಕೆಟ್ ಕಬಳಿಸಿ ಯಶಸ್ವಿ ಬೌಲರ್ ಎನಿಸಿದರು. ಗಾಯಾಳುವಾಗಿ ಮೊದಲೆರಡು ಪಂದ್ಯಗಳಿಂದ ಮಾಲಿಂಗ ಹೊರಗುಳಿದಿದ್ದರು.

42ನೇ ಓವರಿನಲ್ಲಿ ಕೊನೆಯ ಎಸೆತದಲ್ಲಿ ತನ್ಮಯ್ ಮಿಶ್ರಾರನ್ನು ಎಲ್ ಬಿ ಡಬ್ಲ್ಯೂಗೆ ಕೆಡವಿದ ಮಾಲಿಂಗ, 44ನೇ ಓವರಿನ ಮೊದಲ ಎಸೆತದಲ್ಲಿ ಪೀಟರ್ ಒಂಗೊಂಡೊ ಮತ್ತು ಎರಡನೇ ಎಸೆತದಲ್ಲಿ ಗೋಚೆ ಅವರ ವಿಕೆಟ್ಟನ್ನು ಚೆಂಡಾಡಿದರು. ಹ್ಯಾಟ್ರಿಕ್ ಸಾಧಿಸುತ್ತಿದ್ದಂತೆ ಕ್ರೀಡಾಂಗಣದಲ್ಲಿ ಪ್ರೇಕ್ಷಕರ ಕೇಕೆ ಮುಗಿಲು ಮುಟ್ಟಿತು. ಇಷ್ಟೇ ಸಾಲದು ಎಂಬಂತೆ ಕೊನೆಯ ಆಟಗಾರ ಓಟಿಯೆನೊ ಅವರ ವಿಕೆಟ್ಟನ್ನು ಮಾಲಿಂಗ ಎಗರಿಸಿದರು. [

English summary
Lasith Malinga of Srilanka claims second hat trick in world cup. Kenya had no answer for Malinga's reverse swing and his trademark yorker. Malinga had claimed first hat trick against South Africa in 2007.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X