ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಆಸ್ಕರ್ ಟ್ರೋಫಿ ಕಥೆ ಕೇಳಬೇಕೆ? ಇದೋ ಇಲ್ಲಿದೆ...

By Srinath
|
Google Oneindia Kannada News

oscar
ಬೆಂಗಳೂರು, ಫೆ.28: ಸಿನಿ ಜಗತ್ತಿನ ಮಂದಿಗೆ ಆಸ್ಕರ್ ಪದವೇ ರೋಮಾಂಚನ. ಇನ್ನು ಆ ಪದವಿ ಗಿಟ್ಟಿಸಿದರಂತೂ ಅದನ್ನು ಜೀವಮಾನದ ಸಾಧನೆ ಎಂದೇ ಪರಿಗಣಿಸಲಾಗುತ್ತದೆ. ಅಂತಹ ಆಸ್ಕರ್ ಪದವಿ ಅಸಲಿಗೆ ಅಸ್ತಿತ್ವಕ್ಕೆ ಬಂದದ್ದಾದರೂ ಹೇಗೆ? ಆಸ್ಕರ್ ಸ್ಟೋರಿ ಕೆ ಪೀಛೆ... ಆಸ್ಕರ್ ಟ್ರೋಫಿಯ ಕಥೆ ಆಸಕ್ತಿಕರವಾಗಿದೆ. ಮೂಲತಃ ಇದರ ಹೆಸರು ಅಕಾಡೆಮಿ ಅವಾರ್ಡ್ ಆಫ್ ಮೆರಿಟ್. ಆದರೆ ಆಸ್ಕರ್ ಟ್ರೋಫಿ ಎಂದರೆ ಹೆಚ್ಚು ಆಪ್ಯಾಯಮಾನ. 1927ರಲ್ಲಿ ಆ ಅಕಾಡೆಮಿಯನ್ನು ಅಸ್ತಿತ್ವಕ್ಕೆ ಬರುತ್ತಿದ್ದಂತೆ ಆಸ್ಕರ್ ಟ್ರೋಫಿಯೂ ಸ್ಥಾಪನೆಯಾಯಿತು.

ಎಂಜಿಎಂ ನಿರ್ಮಾಣ ಸಂಸ್ಥೆಯ ಕಲಾ ವಿಭಾಗದ ಮುಖ್ಯಸ್ಥ ಸಿಡ್ರಿಕ್ ಗಿಬ್ಸನ್ ಟ್ರೋಫಿ ರಚನೆ ಬಗ್ಗೆ ಸಾಕಷ್ಟು ತಲೆ ಕೆಡಿಸಿಕೊಂಡಿದ್ದರು. ಟ್ರೋಫಿಯಲ್ಲಿ ನಗ್ನ ಮನುಷ್ಯ ಇರಬೇಕು ಎಂಬ ಬಯಕೆ ಅವರದಾಗಿತ್ತು. ಅದಕ್ಕಾಗಿ ಮಾಡೆಲ್ ತಲಾಶೆ ನಡೆಸಿದರು. ತನ್ನ ಪತ್ನಿಯ ಮೂಲಕ ಮೆಕ್ಸಿಕೊದ ಖ್ಯಾತ ಸಿನಿ ನಿರ್ಮಾಪಕ ಎಮಿಲೊ ಎಲ್ ಇಂಡಿಯೊ ಫರ್ನಾಂಡಿಸ್, ಗಿಬ್ಸನ್‌ಗೆ ಪರಿಚಯವಾದ. ಮೊದಮೊದಲು ಟ್ರೋಫಿಗಾಗಿ ಮಾಡೆಲ್ ಆಗಲು ಫರ್ನಾಂಡಿಸ್ ನಿರಾಕರಿಸಿದನಾದರೂ ನಂತರ ಅನಿವಾರ್ಯವಾಗಿ ಒಪ್ಪಿಕೊಂಡ. ಮುಂದೆ ಫರ್ನಾಂಡಿಸ್ ಸುಂದರ ಮೂರ್ತಿಯೇ ಆಸ್ಕರ್‌ನ ನೈಟ್ ಎಂದು ಪ್ರತಿಬಿಂಬಿತನಾದ.

ಟ್ರೋಫಿ 13.5 ಸೆಂ.ಮೀ ಎತ್ತರ, 8.5 ಪೌಂಡ್ ತೂಕ ಹೊಂದಿದೆ. ಚಿನ್ನ ಲೇಪಿತ ಬ್ರಿಟಾನಿಯಂ ಲೋಹದಿಂದ ಅದನ್ನು ತಯಾರಿಸಲಾಗಿದೆ. ಅಂತಿಮವಾಗಿ ಅದು ಐದು ಕಡ್ಡಿಗಳಿರುವ (ಸ್ಪೋಕ್ಸ್) ಫಿಲ್ಮ್ ರೀಲಿನ ಮೇಲೆ ಕತ್ತಿಯನ್ನು ಹಿಡಿದಿರುವ ನೈಟ್‌ನ ಚಿತ್ರವಾಯಿತು. ಒಂದೊಂದು ಕಡ್ಡಿಯೂ ಒಂದೊಂದು ವಿಭಾಗದ ಅಂದರೆ ಕಲಾವಿದರು, ಬರಹಗಾರರು, ನಿರ್ದೇಶಕರು, ನಿರ್ಮಾಪಕರು ಮತ್ತು ತಂತ್ರಜ್ಞರನ್ನು ಪ್ರತಿನಿಧಿಸುತ್ತದೆ.
ಆಸ್ಕರ್‌ನ ಮೊದಲ ಅಚ್ಚನ್ನು 1928ರಲ್ಲಿ ಬಟಾವಿಯಾದ ಫೌಂಡ್ರಿಯಲ್ಲಿ ತಯಾರಿಸಲಾಯಿತು. ಇದನ್ನು 'ಬಂಗಾರದ ಮನುಷ್ಯ' ಎಂದೂ ಕರೆಯುತ್ತಾರೆ. ಇಂತಹ ಆಸ್ಕರ್‌ನ ಮಹಿಮೆ ಏನೆಂಬುದನ್ನು ಅದನ್ನು ಎತ್ತಿಹಿಡಿದವರನ್ನು ಕೇಳಿದರೆ ಗೊತ್ತಾದೀತು! ಏನಂತೀರಿ?

English summary
The Film fraternity across the globe dreams to win the Oscars. And it is a matter of great pride and honour indeed to be the owner of the coveted trophy. What is equally interesting is to learn the history behind the trophy. Its here for you !
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X