ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮನೆ ಬೆಳಗುವ ಯೋಜನೆಗೆ ಸಿಎಂ, ಶೋಭಾ ಚಾಲನೆ

By Mahesh
|
Google Oneindia Kannada News

Belaku Scheme, Yeddyurappa
ಬೆಂಗಳೂರು, ಫೆ. 28: ಮುಂದಿನ ಸೆ.30ರೊಳಗೆ ರಾಜ್ಯದ ಎಲ್ಲ ಮನೆಗಳಲ್ಲಿ ಸಿಎಫ್ ಎಲ್ ವಿದ್ಯುತ್ ಬಲ್ಬ್ ಬಳಕೆಗೆ ಸರ್ಕಾರ ಅಗತ್ಯ ಕ್ರಮಗಳನ್ನು ಕೈಗೊಳ್ಳಲಿದೆ. ಈ ಮೂಲಕ ರಾಜ್ಯದ ಎಲ್ಲ ಮನೆಗಳು ಕತ್ತಲೆಯಿಂದ ಬೆಳಕಿಗೆ ತಿರುಗಲಿದೆ ಎಂದು ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಹೇಳಿದ್ದಾರೆ. ಬೆಸ್ಕಾ(BESCOM) ಪ್ರಧಾನ ಕಚೇರಿಯಲ್ಲಿ ಸಿಎಫ್ ಎಲ್ ಬಲ್ಬ್ ನ್ನು ಸಬ್ಸಿಡಿ ದರದಲ್ಲಿ ನೀಡುವ "ಬೆಳಕು ಯೋಜನೆ"ಗೆ ಇಂದು ಚಾಲನೆ ನೀಡಿ, ಈ ಕ್ರಮದಲ್ಲಿ ರಾಜ್ಯ ಅನುಭವಿಸುತ್ತಿರುವ ವಿದ್ಯುತ್ ಕ್ಷಾಮವನ್ನು ನೀಗಿಸಬಹುದು ಎಂದರು.

ಸಿಎಫ್ ಎಲ್ (compact fluorescent lamps) ತಯಾರಕರು, ಸರ್ಕಾರಿ ನೌಕರರು ಹಾಗೂ ಸ್ತ್ರೀಶಕ್ತಿ ಸಂಘದ ಸದಸ್ಯರನ್ನು ಬಳಸಿಕೊಂಡು ಸಿಎಫ್ ಎಲ್ ಬಲ್ಬ ಬಗ್ಗೆ ಜನ ಜಾಗೃತಿ ಮೂಡಿಸುವ ಯೋಚನೆಯಿದೆ. ಸಿಎಫ್ ಎಲ್ ಬಳಕೆ ಪ್ರಚಾರದಲ್ಲಿ ತೊಡಗಿರುವವರಿಗೆ ಸರ್ಕಾರ ಎಲ್ಲ ರೀತಿಯ ನೆರವು ನೀಡುತ್ತದೆ ಎಂದು ಯಡಿಯೂರಪ್ಪ ಹೇಳಿದರು.

ವಿದ್ಯುತ್ ಉಳಿತಾಯ: ರಾಜ್ಯದ ಎಲ್ಲ ಮನೆಗಳಲ್ಲಿ ಸಿಎಫ್ ಎಲ್ ಬಳಸಲು ಆರಂಭಿಸಿದರೆ ವಾರ್ಷಿಕವಾಗಿ ಸುಅಮರು 940 ಮೆಗಾ ವ್ಯಾಟ್ ವಿದ್ಯುತ್ ಉಳಿತಾಯವಾಗುತ್ತದೆ. ಇದರಿಂದ ವಿದ್ಯುತ್ ಕೊರತೆ ನೀಗುವುದಲ್ಲದೆ, ರಾಜ್ಯದ ಬೊಕ್ಕಸಕ್ಕೂ ಅಪಾರ ಹಣ ಸೇರುತ್ತದೆ. ಪ್ರಸಕ್ತ ಬಜೆಟ್ ನಲ್ಲಿ ಇಂಧನ ಇಲಾಖೆಗೆ ಸುಮಾರು 8 ಸಾವಿರ ಕೋಟಿ ಹಣ ಒದಗಿಸಲಾಗಿದೆ ಎಂದು ಯಡಿಯೂರಪ್ಪ ತಿಳಿಸಿದರು.

ಸಿಎಫ್ ಎಲ್ ಸಬ್ಸಿಡಿ: ಸದ್ಯಕ್ಕೆ ಈ ಯೋಜನೆ ಬೆಸ್ಕಾಂ ವ್ಯಾಪ್ತಿಯಲ್ಲಿ ಜಾರಿಗೊಳಿಸಲಾಗಿದೆ. ಬೆಸ್ಕಾಂ ಅಧಿಕಾರಿಗಳು ಪ್ರತಿ ಮನೆಗಳಿಗೂ ತೆರಳಿ 4 ಸಿಎಫ್ಎಲ್ ಬಲ್ಬ್ ಗಳನ್ನು 60 ರು. ಗಳಿಗೆ ಸಬ್ಸಿಡಿ ದರದಲ್ಲಿ ನೀಡುತ್ತಾರೆ. ಇದರ ಬದಲಿಗೆ ಮನೆಯಲ್ಲಿ ಬಳಸುತ್ತಿರುವ ಇನ್ ಕ್ಯಾಂಡಿಸೆಂಟ್ ಬಲ್ಬ್ ಗಳನ್ನು ಬೆಸ್ಕಾಂ ಅಧಿಕಾರಿಗಳಿಗೆ ನೀಡಬೇಕು ಎಂದು ಇಂಧನ ಖಾತೆ ಸಚಿವೆ ಶೋಭಾ ಕರಂದ್ಲಾಜೆ ಹೇಳಿದರು.

ಬೆಂಗಳೂರು ವಿದ್ಯುತ್ ಪ್ರಸರಣ ನಿಗಮ ನಿಯಮಿತ(ಬೆಸ್ಕಾಂ) ವ್ಯಾಪ್ತಿಯಲ್ಲಿ ಸಬ್ಸಿಡಿ ದರದಲ್ಲಿ ಸಿಎಫ್ಎಲ್ ವಿತರಣೆ ಯೋಜನೆ ಯಶಸ್ವಿಯಾದ ನಂತರ ಹೆಸ್ಕಾಂ, ಮೆಸ್ಕಾಂ, ಚೆಸ್ಕಾಂ ಸೇರಿದಂತೆ ಎಲ್ಲಾ ಎಸ್ಕಾಂ(Electricity Supply Companies) ಗಳಲ್ಲೂ ಟೆಂಡರ್ ಮೂಲಕ ಸಿಎಫ್ ಎಲ್ ಖರೀದಿಸಿ, ಬಳಕೆ ಹೆಚ್ಚಳಕ್ಕೆ ಕ್ರಮ ಕೈಗೊಳ್ಳಲಾಗುವುದು ಎಂದು ಕೆಪಿಟಿಸಿಎಲ್ ವ್ಯವಸ್ಥಾಪಕ ನಿರ್ದೇಶಕ ಕೆ ಮಣಿವಣ್ಣನ್ ಹೇಳಿದ್ದಾರೆ.

English summary
Karnataka is likely to achieve total energy efficiency through Belaku Scheme. Govt has taken aggressive steps to promote use of CFLs to tackle power crunch said Karnataka CM BS Yeddyurappa. BESCOM is issuing the CFLs with subsidy said Energy Minister Shobha Karandlaje. After BESCOM, all the electric Supply Companies will distribute CFLs to every household in the state said KPTCL MD K Manivannan.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X