ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪುರಿ ಮಠದಲ್ಲಿ 18 ಟನ್ ಬೆಳ್ಳಿ ಗಟ್ಟಿ ಪತ್ತೆ

By Srinath
|
Google Oneindia Kannada News

orissa-silver
ಪುರಿ(ಒರಿಸ್ಸಾ), ಫೆ.27: ಇತಿಹಾಸ ಪ್ರಸಿದ್ಧ ಪುರಿ ಜಗನ್ನಾಥ ದೇವಾಲಯದ ಎದುರು ಇರುವ ಪುರಾತನ ಎಮಾರು ಮಠದಲ್ಲಿ ಮೂರು ಮರದ ಪೆಟ್ಟಿಗೆಗಳಲ್ಲಿ ಸಂಗ್ರಹಿಸಿಡಲಾಗಿದ್ದ 18 ಟನ್ ತೂಕದ 522 ಬೆಳ್ಳಿ ಗಟ್ಟಿಗಳು ಇತ್ತೀಚೆಗೆ ಪತ್ತೆಯಾಗಿವೆ. ಇದರ ಮೌಲ್ಯ 90 ಕೋಟಿ ರು. ಎಂದು ಅಂದಾಜಿಸಲಾಗಿದೆ.

ಬೆಳ್ಳಿ ಗಟ್ಟಿ ಗುಟ್ಟು:
ಎಮಾರು ಮಠದಲ್ಲಿ ಇಷ್ಟೊಂದು ಪ್ರಮಾಣದಲ್ಲಿ ಬೆಳ್ಳಿ ಗಟ್ಟಿ ಇರುವ ವಿಷಯ ಮಠದ ಸಿಬ್ಬಂದಿಗಾಗಲೀ, ಧಾರ್ಮಿಕ ದತ್ತಿ ಇಲಾಖೆಗಾಗಲಿ ಗೊತ್ತೇ ಇರಲಿಲ್ಲ. 200 ವರ್ಷದಷ್ಟು ಹಳೆಯದಾದ ಮಠದ ಮೇಲೆ ಖಚಿತ ಸುಳಿವಿನ ಆಧಾರದಲ್ಲಿ ದಾಳಿ ನಡೆಸಿದಾಗ ಬೆಳ್ಳಿ ಗಟ್ಟಿಗಳು ಬಹಿರಂಗವಾಗಿವೆ. ಬೆಳ್ಳಿ ಗಟ್ಟಿಗಳನ್ನು ಮಾರಾಟ ಮಾಡುತ್ತಿದ್ದ ಆರೋಪಿಗಳನ್ನು ವಿಚಾರಣೆಗೊಳಪಡಿಸಿದಾಗ ಗಟ್ಟಿ ಗುಟ್ಟು ಬಿಚ್ಚಿಕೊಂಡಿದೆ. ಈ ಬೆಳ್ಳಿ ಗಟ್ಟಿಗಳಲ್ಲಿ ಯುಎಇ, ಜಪಾನ್, ಚೀನಾ, ದುಬೈ ಮುದ್ರೆ ಇದೆ ಎಂದು ಪೊಲೀಸರು ತಿಳಿಸಿದ್ದಾರೆ.

ಒರಿಸ್ಸಾ ಸರಕಾರದ ಪ್ರಾಚ್ಯ ವಸ್ತು ಇಲಾಖೆ ಕೆಲವು ತಿಂಗಳ ಹಿಂದೆ ಮಠದ ದುರಸ್ತಿ ಮತ್ತು ನವೀಕರಣ ಕಾರ್ಯ ಕೈಗೊಂಡಿತ್ತು. ಆಗ ವರುಣ್ ಮತ್ತು ಅಕ್ಷಯ್ ಎಂಬಿಬ್ಬರನ್ನು ದುರಸ್ಥಿ ಕಾರ್ಯಕ್ಕಾಗಿ ಬಳಸಿಕೊಳ್ಳಲಾಗಿತ್ತು. ಕಾಮಗಾರಿ ವೇಳೆ ಈ ಕಾರ್ಮಿಕರಿಬ್ಬರು ಮಠದೊಳಗೆ ಮರದ ಪೆಟ್ಟಿಗೆಯಲ್ಲಿರಿಸಿದ್ದ ಬೆಳ್ಳಿ ಗಟ್ಟಿಗಳನ್ನು ನೋಡಿದ್ದರು. ಗಮನಾರ್ಹವೆಂದರೆ ಈ ಪೆಟ್ಟಿಗೆಗಳಿದ್ದ ಕೊಠಡಿಯನ್ನು ದಶಕಗಳಿಂದ ಮುಚ್ಚಲಾಗಿತ್ತು. ಜಗನ್ನಾಥ ಮಂದಿರ ಆಸುಪಾಸಿನಲ್ಲಿರುವ ಮಠಗಳೆಲ್ಲ ಮಂದಿರದ ಆಸ್ತಿಯಾಗಿವೆ.

ಮಠದಲ್ಲಿ ಈ ಬೆಳ್ಳಿ ಗಟ್ಟಿಗಳು ಇರುವುದು ತಿಳಿದಿರಲಿಲ್ಲ. ಆದರೆ ಮಠದಲ್ಲಿ ಗುಪ್ತಧನ ಇರುವುದಾಗಿ ಪೂರ್ವಾಧಿಕಾರಿ ಮಹಾಂತ ರಾಜಗೋಪಾಲ್ ರಾಮಾನುಜ ದಾಸ್ ಹೇಳುತ್ತಿದ್ದರು ಎಂದು ಮಠದ ಹಾಲಿ ಮೇಲ್ವಿಚಾರಕ ಗದಾಧರ್ ರಾಮಾನುಜ ದಾಸ್ ಪೊಲೀಸರಿಗೆ ತಿಳಿಸಿದ್ದಾರೆ.

English summary
Puri: Orissa Police on Saturday (feb. 26) seized huge quantity of silver slabs from Puri's famous Emaar Mutt. Police raided 200 year old mutt and found huge quantity of silver slabs. The mutt is situated right in front of world famous Jagannath temple Puri Orissa
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X