ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಎಂಎಂಎಸ್ ದುರ್ಬಳಕೆ ಕಡಿವಾಣಕ್ಕೆ ಮಸೂದೆ: ರಾಜೀವ್

By Mahesh
|
Google Oneindia Kannada News

MP Rajeev Chandrashekar
ನವದೆಹಲಿ, ಫೆ, 26: ಮೊಬೈಲ್ ಫೋನ್ ಮೂಲಕ ಮಲ್ಟಿ ಮೀಡಿಯಾ ಸಂದೇಶಗಳನ್ನು ದುಷ್ಕೃತ್ಯಗಳಿಗೆ ಬಳಸುವುದನ್ನು ತಡೆಗಟ್ಟಲು ಖಾಸಗಿ ಹಕ್ಕು ಮಸೂದೆಯನ್ನು ರಾಜ್ಯಸಭೆಯಲ್ಲಿ ರಾಜೀವ್ ಚಂದ್ರಶೇಖರ್ ಅವರು ಮಂಡಿಸಿದ್ದಾರೆ. ಸಂಗಾತಿಗಳ ಪ್ರಣಯ ಚೇಷ್ಟೆಗಳು, ಏಕಾಂತ ಚಿತ್ರಗಳು ಹಾಗೂ ಕ್ಲಿಪ್ಪಿಂಗ್ ಗಳನ್ನು ತೆಗೆದು ನಂತರ ಅವರನ್ನು ಬ್ಲ್ಯಾಕ್ ಮೇಲ್ ಮಾಡುವಂಥವರಿಗೆ ಕಠಿಣ ಶಿಕ್ಷೆ ನೀಡಲು ಕಾನೂನು ಜಾರಿಗೆ ತರಬೇಕು ಎಂದು ರಾಜ್ಯ ಸಭಾ ಸದಸ್ಯ ರಾಜೀವ್ ಚಂದ್ರಶೇಖರ್ ಈ ಖಾಸಗಿ ಹಕ್ಕು ಮಸೂದೆ ಮೂಲಕ ಪ್ರತಿಪಾದಿಸಿದ್ದಾರೆ.

ಖಾಸಗಿ ಹಕ್ಕು ಮಸೂದೆ, 2011 ಅಡಿಯಲ್ಲಿ ಸುಮಾರು 23ಕ್ಕೂ ಹೆಚ್ಚು ಮಸೂದೆಗಳನ್ನು ರಾಜ್ಯಸಭೆಯಲ್ಲಿ ಶುಕ್ರವಾರ ಮಂಡಿಸಲಾಯಿತು. ಎಂಎಂಎಸ್ ದುರ್ಬಳಕೆ ಬಗ್ಗೆ ವಿವರಿಸಿದ ರಾಜೀವ್, ಎಂಎಂಎಸ್ ಅಲ್ಲದೆ ಇಂಟರೆ ನೆಟ್ ಮೂಲಕ ಲೈಂಗಿಕ ಹಿಂಸೆ ನೀಡಲಾಗುತ್ತಿದೆ. ರಹಸ್ಯವಾಗಿ ಖಾಸಗಿ ದೃಶ್ಯಗಳನ್ನು ಚಿತ್ರೀಕರಿಸಿ, ಅಂತರ್ಜಾಲ ಮೂಲಕ ಹರಿಬಿಟ್ಟು ನಂತರ ಬ್ಲ್ಯಾಕ್ ಮೇಲ್ ಮಾಡಲಾಗುತ್ತಿದೆ ಎಂದರು.

ಸಮಾಜವಾದಿ ಪಕ್ಷದ ಸದಸ್ಯ ಮಹೇಂದ್ರ ಮೋಹನ್ ಅವರು ಇದಕ್ಕೆ ಪೂರಕವಾದ ಮಸೂದೆ ಮಂಡಿಸಿ, ಕುಟುಂಬಗಳಲ್ಲಿ ಲೈಂಗಿಕ ಕಿರುಕುಳ ಹೆಚ್ಚುತ್ತಿರುವ ಬಗ್ಗೆ ಆತಂಕ ವ್ಯಕ್ತಪಡಿಸಿದರು. ಲೈಂಗಿಕ ಕಿರುಕುಳ ನೀಡುವವರಿಗೆ ಕಠಿಣ ಶಿಕ್ಷೆ ನೀಡಬೇಕು ಎಂದು ಮಸೂದೆ ಮೂಲಕ ಪ್ರತಿಪಾದಿಸಿದರು. ನಕ್ಸಲ್ ಗಲಭೆಯಿಂದ ಬೆಳೆ, ನೆಲೆ ಕಳೆದುಕೊಂಡು ಅನಾಥವಾಗಿರುವ ಕುಟುಂಬ ವರ್ಗಗಳಿಗೆ ಸೂಕ್ತ ಆರ್ಥಿಕ ನೆರವು ನೀಡುವ ವ್ಯವಸ್ಥೆ ಕಲ್ಪಿಸುವಂತೆ ಇನ್ನೊಂದು ಮಸೂದೆ ಮಂಡಿಸಲಾಯಿತು.

English summary
Rajya Sabha MP Rajeev Chandrashekar has moved MMS misuse control bill under Rights to Privacy Bill 2010. This bill is to prevent misuse of private intimate moments, images and clipping of couples through mobile phone Multi media messaging(MMS) to blackmail them. Around 23 such bills introduced in Rajya Sabha last day.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X