ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಂಬಳದಾರರಿಗೆ ಆದಾಯ ತೆರಿಗೆಯಲ್ಲಿ ರಿಲೀಫ್!

By Prasad
|
Google Oneindia Kannada News

Relief to income-tax payers
ನವದೆಹಲಿ, ಫೆ. 25 : ಬೆಲೆ ಏರಿಕೆಯಿಂದ ಬಸವಳಿದಿರುವ, ನಿಯಮಿತವಾಗಿ ಆದಾಯ ತೆರಿಗೆ ಕಟ್ಟುವ ದೇಶದ ಸಂಬಳದಾರರಿಗೆ ಫೆ.28ರ ಸೋಮವಾರದಂದು ಮಂಡಿಸಲಾಗುತ್ತಿರುವ ಕೇಂದ್ರ ಮುಂಗಡ ಪತ್ರದಲ್ಲಿ ವಿತ್ತ ಸಚಿವ ಪ್ರಣಬ್ ಮುಖರ್ಜಿ ವಿಶೇಷ ಕೊಡುಗೆ ನೀಡಲು ಯೋಚಿಸಿದ್ದಾರೆ.

5 ಲಕ್ಷ ರು.ವರೆಗಿನ ಸಂಬಳ ಗಳಿಸುತ್ತಿರುವ ನೌಕರರ ತೆರಿಗೆ ಹೊರೆಯನ್ನು ಸುಮಾರು 7,660 ರು.ವರೆಗೆ ಇಳಿಸಲಿದ್ದಾರೆ. ಪೆಟ್ರೋಲು, ಕಾಳು ಕಡಿ, ಹಣ್ಣು ಹಂಪಲು ಬೆಲೆ ಏರಿಕೆಯಿಂದ ಕಂಗೆಟ್ಟಿರುವ ನಿಯತ್ತಿನ ತೆರಿಗೆದಾರರಿಗೆ ಅಷ್ಟರಮಟ್ಟಿಗೆ ಜೇಬು ಭರ್ತಿಯಾಗಲಿದೆ. ವಾರ್ಷಿಕ ಸಂಬಳ 5 ಲಕ್ಷ ರು. ಇದ್ದು, ಯಾವುದೇ ಮನೆ ಸಾಲವಿಲ್ಲದಿದ್ದರೆ ವಾರ್ಷಿಕ ತೆರಿಗೆ 22,660 ರು.ನಿಂದ 15,000 ರು.ಗೆ ಇಳಿಯಲಿದೆ.

ತೆರಿಗೆ ಮಿತಿಯಲ್ಲಿ ಮಾರ್ಪಾಡು ಮಾಡುವ ಮುಖಾಂತರ ಶ್ರೀಸಾಮಾನ್ಯನಿಗೆ ತೆರಿಗೆ ಭಾರವನ್ನು ತಗ್ಗಿಸುವ ಇಂಗಿತಕ್ಕೆ ಯುಪಿಎ ಸರಕಾರ ಮುಂದಾಗಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿರುವುದಾಗಿ ಎಕನಾಮಿಕ್ಸ್ ಟೈಮ್ಸ್ ಪತ್ರಿಕೆ ವರದಿ ಮಾಡಿದೆ. ತೆರಿಗೆ ಮಿತಿ ಈ ರೀತಿ ಇರಲಿದೆ. 2 ಲಕ್ಷ ರು.ನಿಂದ 5 ಲಕ್ಷ ರು. ಇರುವ ತೆರಿಗೆದಾರರಿಗೆ ಶೇ.10, 5 ಲಕ್ಷ ರು.ನಿಂದ 10 ಲಕ್ಷ ರು.ವರೆಗೆ ಶೇ.20 ಮತ್ತು 10 ಲಕ್ಷ ರು. ಮೇಲ್ಪಟ್ಟ ಆದಾಯಕ್ಕೆ ಶೇ.30ರಷ್ಟು ತೆರಿಗೆ ಕಟ್ಟಬೇಕಾಗುತ್ತದೆ.

ಜೊತೆಗೆ ಒಂದೂವರೆ ಲಕ್ಷ ರು.ವರೆಗೆ ವಾರ್ಷಿಕ ತೆರಿಗೆಯಲ್ಲಿ ವಿನಾಯಿತಿಗೆ ನೌಕರರು ಅರ್ಹರಾಗಿರುತ್ತಾರೆ. ಎರಡು ಕಂತುಗಳಲ್ಲಿ ಇದರ ಲಾಭ ದೊರೆಯಲಿದೆ. ಪಬ್ಲಿಕ್ ಪ್ರಾವಿಡೆಂಟ್ ಫಂಡ್, ಹೊಸ ಪಿಂಚಣಿ ಯೋಜನೆ ಮುಂತಾದ ದೂರಗಾಮಿ ಉಳಿತಾಯ ಯೋಜನೆಗಳಲ್ಲಿ ಹೂಡಿದ 1 ಲಕ್ಷ ರು.ವರೆಗೆ ಮತ್ತು ಜೀವವಿಮೆ, ಆರೋಗ್ಯ ವಿಮೆ ಮತ್ತು ಮಕ್ಕಳ ಟ್ಯೂಷನ್ ಶುಲ್ಕದಂಥ ಹಣ ಹೂಡಿಕೆಗಳಿಗೆ 50 ಸಾವಿರ ರು.ವರೆಗೆ ಹಣ ಉಳಿತಾಯವಾಗಲಿದೆ.

English summary
Union finance minister Pranab Mukherjee is set to give surprise to the income-tax paying employees in India, by lightening the tax burden. This would be a great relief to the common man, who is paying tax promptly every year, in spite of prices of essential commodities soaring high.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X