ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಗ್ಲುಕೊಮಾದ ಬಾಧಿತರಿಗೆ ಸೂಕ್ಷ್ಮಾತಿಸೂಕ್ಷ್ಮ ಕಂಪ್ಯೂಟರ್

By Srinath
|
Google Oneindia Kannada News

computer
ಲಂಡನ್, ಫೆ.25: ಕುರುಡತ್ವಕ್ಕೆ ಕಾರಣವಾಗುವ ಗ್ಲುಕೊಮಾದ ಬಾಧಿತರಿಗೆ ನೆರವಾಗಲು ಇಲ್ಲಿನ ವಿಜ್ಞಾನಿಗಳು ವಿಶ್ವದ ಸೂಕ್ಷ್ಮಾತಿಸೂಕ್ಷ್ಮ ಕಂಪ್ಯೂಟರ್ ಅನ್ನು ಅಭಿವೃದ್ಧಿಪಡಿಸಿದ್ದಾರೆ. ಕಣ್ಣುಗುಡ್ಡೆಯೊಳಗೆ ಇಟ್ಟುಕೊಳ್ಳಬಹುದಾದ ಈ ಕಂಪ್ಯೂಟರಿನ ಗಾತ್ರ ಕೇವಲ 1ಚದರ ಮಿಲಿಮೀಟರ್ !

ಚಿಕ್ಕ ಮೈಕ್ರೋಪ್ರೊಸಸರ್, ಪ್ರೆಷರ್ ಸೆನ್ಸರ್, ಮೆಮೊರಿ ಚಿಪ್, ತೆಳು ಬ್ಯಾಟರಿ, ಸೋಲಾರ್ ಸೆಲ್ ಮತ್ತು ವೈರ್‌ಲೆಸ್ ರೇಡಿಯೊ ಜತೆಗೆ ಆಂಟೆನಾ ಇವಿಷ್ಟೂ ಆ ಪುಟ್ಟ ಕಂಪ್ಯೂಟರ್‌ನಲ್ಲಿ ಅಡಗಿ ಕುಳಿತಿರುತ್ತವೆ. 15 ನಿಮಿಷಗಳಿಗೊಮ್ಮೆ ಎಚ್ಚರಗೊಂಡು ಗ್ಲುಕೊಮಾ ಒತ್ತಡದ ಅಳತೆ ತೆಗೆದುಕೊಳ್ಳುವ ಈ ಪುಟ್ಟ ಗಣಕಯಂತ್ರಕ್ಕೆ 5.3 ನ್ಯಾನೊವ್ಯಾಟ್ ವಿದ್ಯುತ್ ಸಾಕು ! ಒಂದು ವಾರದ ಮಾಹಿತಿಯನ್ನುಇದು ತನ್ನಲ್ಲಿ ಅಡಗಿಸಿಟ್ಟುಕೊಳ್ಳುತ್ತದೆ.

ದೇಹದ ಇನ್ನೂ ಯಾವ ಯಾವ ಭಾಗದಲ್ಲಿ ಏನೆಲ್ಲ ಕಂಪ್ಯೂಟರ್‌ಗಳನ್ನು ಇಟ್ಟು ಏನೆಲ್ಲ ಚಿಕಿತ್ಸಕ ಸಂಶೋಧನೆಯಲ್ಲಿ ತೊಡಗುತ್ತಾರೊ ಈ ಸಂಶೋಧಕರು! ಒಬ್ಬ ಮನುಷ್ಯನಲ್ಲಿಯೇ ಇಂತಹ ನೂರಾರು ಕಂಪ್ಯೂಟರ್‌ಗಳನ್ನು ಇಡಬಹುದು. ಇನ್ನು ಹೊರಗೆ ಅಂದರೆ ಸುತ್ತಮುತ್ತಲ ಪರಿಸರದಲ್ಲಿ ಇದನ್ನು ಬಳಸತೊಡಗಿದರೆ ಇದರ ಬೇಡಿಕೆ ತೀವ್ರವಾಗುತ್ತದೆ. ಅಲ್ಲಿಗೆ ವಾಣಿಜ್ಯಕವಾಗಿ ಇವುಗಳ ಸೃಷ್ಟಿಯೂ ಸಲೀಸಾದೀತು. ಮಿಚಿಗನ್ ವಿಶ್ವವಿದ್ಯಾಲಯದ ಸಂಶೋಧಕರು ಅಭಿವೃದ್ಧಿಪಡಿಸಿರುವ ಈ ಕಂಪ್ಯೂಟರ್‌ಗೆ ಇನ್ನೂ ನಾಮಕರಣ ಮಾಡಿಲ್ಲ. ಕೆಲವೇ ವರ್ಷಗಳಲ್ಲಿ ವಾಣಿಜ್ಯಿಕವಾಗಿ ಇದು ಬಳಕೆಗೆ ಲಭಿಸಲಿದೆ. ಇನ್ನು ಕಂಪ್ಯೂಟರ್ ಭವಿಷ್ಯಕ್ಕೆ ಇದು ಹೊಸ ಭಾಷ್ಯ ಬರುವುದು ಖಚಿತ.

English summary
London: Scientists have created what they claim is the world's smallest computer system that is just one square millimetre in size and can fit into one's eyeball. The unnamed tiny device is a pressure monitor that can be implanted in a person's eye to treat glaucoma.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X