ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವರದಕ್ಷಿಣೆ ಕಿರುಕುಳ ಅಪರಾಧಕ್ಕೆ ಜಾಮೀನು ಲಭ್ಯ?

By Srinath
|
Google Oneindia Kannada News

law
ನವದೆಹಲಿ, ಫೆ.25: ವರದಕ್ಷಿಣೆ ಕಿರುಕುಳ ಅಪರಾಧಕ್ಕೆ ಇನ್ನು ಮುಂದೆ ಜಾಮೀನು ಲಭ್ಯವಾಗುವ ಸಾಧ್ಯತೆಯಿದೆ. ವೈವಾಹಿಕ ಕ್ರೌರ್ಯ ಕುರಿತಾದ ಕಾನೂನು ದುರುಪಯೋಗವಾಗುತ್ತಿದ್ದು, ಅದನ್ನು ಹಿಡಿತಕ್ಕೆ ತರುವ ಸಲುವಾಗಿ ಕೇಂದ್ರ ಕಾನೂನು ಆಯೋಗ ಈ ಪ್ರಕ್ರಿಯೆಗೆ ಚಾಲನೆ ನೀಡಿದೆ.

ಕುಟುಂಬ ಜೀವನದ ಸಾಮಾಜಿಕ ಚೌಕಟ್ಟನ್ನು ಸಂರಕ್ಷಿಸುವ ಸಲುವಾಗಿ ಹಾಗೂ ವರದಕ್ಷಿಣೆ ಕಿರುಕುಳ ಅಪರಾಧ ಕಾನೂನಿನ ದುರ್ಬಳಕೆಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಭಾರತೀಯ ದಂಡಸಂಹಿತೆಯ ಸೆಕ್ಷನ್ 498-ಎಗೆ ಮಾರ್ಪಾಡು ತರಲು ಇಲಾಖೆ ತೀವ್ರವಾಗಿ ಆಲೋಚಿಸುತ್ತಿದೆ. ಸದ್ಯಕ್ಕೆ ಈ ಸೆಕ್ಷನ್‌ನಡಿ ವೈವಾಹಿಕ ಕ್ರೌರ್ಯವನ್ನು ದೊಡ್ಡ ಅಪರಾಧ ಎಂದು ಪರಿಗಣಿಸಲಾಗಿದೆ.

೧೯೮೩ರಲ್ಲಿ ತಿದ್ದುಪಡಿ ಮೂಲಕ ಭಾರತೀಯ ದಂಡಸಂಹಿತೆಗೆ ಸೆಕ್ಷನ್ 498-ಎ ಅನ್ನು ಸೇರಿಸಲಾಗಿತ್ತು. ಇದರ ಪ್ರಕಾರ ಪತ್ನಿ ಅಥವಾ ಅವಳ ಪರ ಯಾರಾದರೂ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದರೆ ಪತಿ ಮತ್ತು ಆತನ ಕುಟುಂಬದ ಸದಸ್ಯರಿಗೆ ಜೈಲುಶಿಕ್ಷೆ, ದಂಡ ಎಲ್ಲವೂ ಕಟ್ಟಿಟ್ಟಬುತ್ತಿಯಾಗಿತ್ತು. ರಾಜಿ ಕಬೂಲಿಗೆ ಇಲ್ಲಿ ಅವಕಾಶವರಲಿಲ್ಲ. ಅದಕ್ಕಿಂತಲೂ ಹೆಚ್ಚಾಗಿ ಈ ಕಾನೂನಿನಡಿ ಜಾಮೀನು ಸಹ ಲಭ್ಯವಿರಲಿಲ್ಲ.

ಆದರೆ ಈ ನ್ಯೂನತೆಗಳನ್ನೆಲ್ಲ ಸರಿಪಡಿಸಲು ಇಲಾಖೆ ಸದ್ಧತೆ ನಡೆಸಿದ್ದು, ಈ ಅಪರಾಧಕ್ಕೆ ಕಾನೂನಿನಡಿ ರಾಜಿ ಪಂಚಾಯಿತಿ, ಸಹ ವಾಸ, ಜಾಮೀನು ಕೊಡಮಾಡುವುದಕ್ಕೆ ಆಲೋಚನೆ ನಡೆಸಿದೆ. ಆಯಾ ರಾಜ್ಯಗಳ ಅಭಿಪ್ರಾಯ ಸಂಗ್ರಹಣೆ ಕಾರ್ಯ ನಡೆದಿದೆ ಎಂದು ರಾಷ್ಟ್ರೀಯ ಕಾನೂನು ಆಯೋಗದ ಸದಸ್ಯ ನಿವೃತ್ತ ನ್ಯಾಯಮೂರ್ತಿ ಶಿವಕುಮಾರ್ ಶರ್ಮಾ ತಿಳಿಸಿದ್ದಾರೆ.

English summary
The Union law department has launched an exercise to tone down the law on matrimonial cruelty, so dowry harassment may soon become a bailable offence says Justice (rtd) Shiv Kumar Sharma, member of the National Law Commission,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X