ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬೆಳ್ತಂಗಡಿ: ಗೋಹಂತಕ ಎಸ್ಟೇಟ್ ಮಾಲೀಕ ಸೆರೆ

By Mahesh
|
Google Oneindia Kannada News

Cow death by poisioning, Beltangady
ಬೆಳ್ತಂಗಡಿ, ಫೆ.25: ಇಲ್ಲಿಗೆ ಸಮೀಪದ ಕಣಿಯೂರು ಪರಿಸರದಲ್ಲಿ ಗೋವುಗಳಿಗೆ ವಿಷವುಣಿಸಿ ಸಾಯಿಸಿದ ಆರೋಪದ ಮೇಲೆ ಎಸ್ಟೇಟ್ ಮಾಲೀಕ ಆಗಸ್ತಿನ್ ಜೋಕಿಂ ರಾಡ್ರಿಗಸ್ ಎಂಬುವವನನ್ನು ಬಂಧಿಸಲಾಗಿದೆ. ತನ್ನ ಕೃಷಿಭೂಮಿಗೆ ಮೇಯಲಿಕ್ಕೆ ಬರುವ ಹಸುಗಳಿಗೆ ವಿಷಾಹಾರ ನೀಡಿ ಸಾಯಿಸುತ್ತಿದ್ದ ಎಂದು ಪೊಲೀಸರು ಹೇಳಿದ್ದಾರೆ.

ಜೋಕಿಂ, ಕಣಿಯೂರಿನಲ್ಲಿ 26 ಎಕರೆ ಕೃಷಿಭೂಮಿ ಹೊಂದಿದ್ದು, ಬೇಲಿಯನ್ನು ನಿರ್ಮಿಸಲ್ಲ. ಇಲ್ಲಿಗೆ ಮೇಯಲು ಬರುವ ಗೋವುಗಳಿಗೆ ವಿಷಪ್ರಾಶನ ಮಾಡುತ್ತಿದ್ದ. ಪಿಲಿಕುಡೇಲು ರಾಜೇಂದ್ರ ಹೆಗ್ಡೆ, ಜನಾರ್ದನ ಆಚಾರಿ, ರಾಮಣ್ಣ ಪೂಜಾರಿ, ಆದಂ, ಈಶ್ವರ ನಾಯ್ಕ ಎಂಬವರಿಗೆ ಸೇರಿದ ಗೋವುಗಳಿಗೆ ಪೆರಡಾನ್ ವಿಷವುಣಿಸಿ ಕೊಂದಿರುವ ಆರೋಪ ಹೊತ್ತಿದ್ದಾನೆ.

ಮೇಯಲು ಹೋದ ಗೋವುಗಳು ಸಂಜೆಯಾದರೂ ಮರಳಿ ಬಾರದ ಹಿನ್ನೆಲೆಯಲ್ಲಿ ಸ್ಥಳೀಯರು ಹುಡುಕುತ್ತಾ ಹೋದಾಗ ತೋಟದ ಸುತ್ತಮುತ್ತ ಬೇರೆ ಬೇರೆ ಕಡೆಗಳಲ್ಲಿ ಗೋವುಗಳು ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದೆ. ತೋಟದಲ್ಲಿ ಬೆಳ್ತಿಗೆ ಅಕ್ಕಿಯ ಅನ್ನವನ್ನು ಇಟ್ಟು ಅದಕ್ಕೆ ರಸಗೊಬ್ಬರ ವಿಷ ಬೆರೆಸಿ ಗೋವುಗಳಿಗೆ ನೀಡುತ್ತಿದ್ದ ಎಂದು ಉಪ್ಪಿನಂಗಡಿ ಎಸ್ ಐ ದಾಸರಿ ತಿಳಿಸಿದ್ದಾರೆ.

ಮೃತ ರಾಸುಗಳ ಮರಣೋತ್ತರ ಪರೀಕ್ಷೆ ನಡೆಸಿದ ಪಶುವೈದ್ಯ ಸುಧಾಕರ್ ಶೆಟ್ಟಿ, ಮೂರು ಹಸುಗಳು, ಒಂದು ಹೋರಿ ಮೃತಪಟ್ಟು, ಎರಡು ಹಸುಗಳೂ ಜೀವನ್ಮರಣ ಸ್ಥಿತಿಯಲ್ಲಿ ತೋಟದಲ್ಲಿ ಪತ್ತೆಯಾಗಿವೆ. ಮೃತ ಗೋವುಗಳು ಸುಮಾರು 25, 000ಕ್ಕೂ ಅಧಿಕ ಆಗುತ್ತದೆ ಎಂದಿದ್ದಾರೆ.

English summary
Kaniyur estate owner Joachim has been held for murder of cows. He has been charged of killing cows by poisoning in Belthangady. Dakshina Kannada police division Uppinangady SI Dasari after spot inspection said, rice mixed with pesticide found in several places near the dead cattles.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X