ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪೋರ್ಟಬಿಲಿಟಿ: ಬಿಎಸ್ಸೆನ್ನೆಲ್‌ಗೆ ಬಿಸಿ ಮುಟ್ಟಸಿದ ಗ್ರಾಹಕ ವರ್ಗ

By Srinath
|
Google Oneindia Kannada News

Mobile
ನವದೆಹಲಿ, ಫೆ.24: ಇನ್ನೂ ಬಾಲ್ಯಾವಸ್ಥೆಯಲ್ಲಿರುವ ಮೊಬೈಲ್ ನಂಬರ್ ಪೋರ್ಟಬಿಲಿಟಿ ಎಂಬ ಗ್ರಾಹಕ-ಸ್ನೇಹಿ ಅಸ್ತ್ರ ಸರಕಾರಿ ಸ್ವಾಮ್ಯದ ಭಾರತ್ ಸಂಚಾರ್ ನಿಗಮ್ ಲಿಮಿಟೆಡ್‌ಗೆ ಪಾಶುಪತಾಸ್ತ್ರವಾಗಿ ಪರಿಣಮಿಸಿದೆ. ದೇಶಾದ್ಯಂತ ಬಿಎಸ್‌ಎನ್‌ಎಲ್ 1,31,580 ಮಂದಿ ಗ್ರಾಹಕರನ್ನು ಕಳೆದುಕೊಂಡಿದ್ದರೆ ಮುಂಬೈನಲ್ಲಿ ಎಂಟಿಎನ್‌ಎಲ್‌ಗೆ 5,869 ಚಂದಾದಾರರು ಕೈಬಿಟ್ಟಿದ್ದಾರೆ.

ನಂಬರ್ ಪೋರ್‍ಟಬಿಲಿಟಿ ಅವಕಾಶ ಗ್ರಾಹಕರಿಗೆ ಆಪದ್ಬಾಂದವವಾಗಿದ್ದರೆ ಬಿಎಸ್ಸೆನ್ನೆಲ್ ಮತ್ತು ಎಂಟಿಎನ್ನೆಲ್‌ಗೆ ಆಪತ್ತು ತಂದಿದೆ. ಇದರಿಂದ ಹೊರಬಂದು ಗ್ರಾಹಕರ ವಿಶ್ವಾಸ ಮರಳಿ ಗಳಿಸಲು ಸಾಹಸ ನಡೆಸಿವೆ. ಗ್ರಾಹಕರು ಗುಳೆ ಹೋಗದಂತೆ ದಿಡ್ಡಿ ಬಾಗಿಲು ಹಾಕಲು ಈ ಎರಡೂ ಸರಕಾರಿ ಸಂಸ್ಥೆಗಳು ಮುಂದಾಗಿವೆ. ಇನ್ನು ಮುಂದೆ 'ಅತ್ಯುತ್ತಮ ಸೇವೆ ನೀಡುತ್ತೇವೆ. ನಮ್ಮನ್ನು ಬಿಟ್ಟು ಹೋಗಬೇಡಿ' ಎಂದು ಕ್ಷೀಣದನಿಯಲ್ಲಿ ಅಂಗಾಲಾಚುತ್ತಿವೆ.

ನೆಟ್‌ವರ್ಕ್ ಸಮರ್ಪಕವಾಗಿ ಕಾರ್ಯನಿರ್ವಹಿಸದಿರುವುದು ಮತ್ತು ದರ ಸಮರದಿಂದಾಗಿ ಬಿಎಸ್ಸೆನ್ನೆಲ್‌ಗೆ ಈ ದುಃಸ್ಥಿತಿ ಬಂದಿದೆ. ಸಮಾಧಾನದ ವಿಷಯವೆಂದರೆ 92,243 ಮಂದಿ ಬಿಎಸ್ಸೆನ್ನೆಲ್ ಸೇವೆಗೆ ವರ್ಗಾವಣೆಗೊಂಡಿದ್ದಾರೆ. ದೂರಸಂಪರ್ಕ ಮತ್ತು ಮಾಹಿತಿ ತಂತ್ರಜ್ಞಾನ ಸಹಾಯಕ ಸಚಿವ ಸಚಿನ್ ಪೈಲಟ್ ಸ್ವತಃ ಈ ಮಾಹಿತಿಯನ್ನು ಲೋಕಸಭೆಯಲ್ಲಿ ಗುರುವಾರ ಬಿತ್ತರಿಸಿದ್ದಾರೆ.

English summary
The mobile number portability seems to have hit hard the state owned Bharat Sanchar Nigam Ltd (BSNL) and Mahanagar Telephone Nigam Ltd's (MTNL). Subscriber base declined by 1,37,450 for both. Minister of State for Communications Sachin Pilot told Lok Sabha on Thursday.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X