ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನನ್ನನ್ನೂ ಜೆಪಿಸಿಗೆ ಒಪ್ಪಿಸಿ: ಕಲ್ಮಾಡಿ ಹೊಸ ವರಾತ

By Srinath
|
Google Oneindia Kannada News

Suresh Kalmadi
ನವದೆಹಲಿ, ಫೆ.21: ಕಾಮನ್‌ವೆಲ್ತ್ ಕ್ರೀಡಾಕೂಟದಲ್ಲಿ ನಡೆದಿದೆರುವ ಭಾರಿ ಪ್ರಮಾಣದ ಭ್ರಷ್ಟಾಚಾರದ ಬಗ್ಗೆಯೂ ಜೆಪಿಸಿ ತನಿಖೆ ನಡೆಸಬೇಕಂತೆ. ಈ ಬೇಡಿಕೆಯನ್ನು ಮುಂದಿಟ್ಟಿರುವವರು ಮತ್ಯಾರೂ ಅಲ್ಲ ಸ್ವತಃ ಕ್ರೀಡಾಕೂಟದ ಹೊಣೆಹೊತ್ತಿದ್ದ, ಕರ್ಮಕಾಂಡದ ಪ್ರಮುಖ ಆರೋಪಿ ಸುರೇಶ್ ಕಲ್ಮಾಡಿ!

2ಜಿ ಸ್ಪೆಕ್ಟ್ರಂ ಹಗರಣ, ಇಸ್ರೊದ ಎಸ್-ಬ್ಯಾಂಡ್ ಹಗರಣ, ಆದರ್ಶ ಹೌಸಿಂಗ್ ಸೊಸೈಟಿ ಹೀಗೆ ಒಂದೊಂದೇ ಹಗರಣವನ್ನು ತಡವಾಗಿಯಾದರೂ ಜೆಪಿಸಿ ತನಿಖೆಗೆ ಒಪ್ಪಿಸುವುದಕ್ಕೆ ಕಾಂಗ್ರೆಸ್ ನೇತೃತ್ವದ ಕೇಂದ್ರ ಸರಕಾರ ಸಜ್ಜಾಗುತ್ತಿರುವಾಗ, ನನ್ನನ್ನೂ ಜೆಪಿಸಿ ತನಿಖೆಗೆ ಒಳಪಡಿಸಿ ಎಂದು ಸಿಡಬ್ಲ್ಯುಜಿ ಕರ್ಮಕಾಂಡದ ಪಿತಾಮಹ ಎಂದೇ ಬಿಂಬಿತವಾಗಿರುವ, ಮೂಲತಃ ಕರ್ನಾಟಕದವರೇ ಆದ ಕಲ್ಮಾಡಿ ಗುಟುರುಹಾಕಿದ್ದಾರೆ.

ಹಗರಣದ ಅಷ್ಟೂ ಮುಖಗಳನ್ನು ಜೆಪಿಸಿ ಸಾರ್ವಜನಿಕಗೊಳಿಸಲಿ ಎಂಬುದು ನನ್ನ ಆಶಯ. ನಾನು ಒಂದೇ ಒಂದು ನಯಾಪೈಸೆಯನ್ನೂ ಮುಟ್ಟಿಲ್ಲ. ಭ್ರಷ್ಟಾಚಾರದಲ್ಲಿ ನಾನೂ ಭಾಗಿಯಾಗಿದ್ದೇನೆ ಎಂಬುದು ಸಾಬೀತಾದರೆ ನನ್ನ ಸಂಸದ್ ಸದಸ್ಯತ್ವಕ್ಕೆ (ಪುಣೆ) ರಾಜೀನಾಮೆ ನೀಡುವುದಾಗಿ ಕಲ್ಮಾಡಿ ಘೋಷಿಸಿದ್ದಾರೆ.

'ಅಕ್ಷರಶಃ ನನ್ನೊಬ್ಬನನ್ನೇ ಬಲಿಪಶು ಮಾಡಲಾಗುತ್ತಿದೆ. ಸಿಡಬ್ಲ್ಯುಜಿಗೆ ನಾನೊಬ್ಬನೇ ಯಜಮಾನನಲ್ಲ. ದಿಲ್ಲಿ ಸರಕಾರ, ಸ್ವತಃ ಕೇಂದ್ರ ಸರಕಾರದ ಅನೇಕ ಇಲಾಖೆಗಳು ಇದರ ಹೊಣೆಹೊತ್ತಿದ್ದವು. ಅಂತಹುದರಲ್ಲಿ ನನ್ನನ್ನೇ ಏಕೆ ಗುರಿಮಾಡಲಾಗಿದೆ?' ಎಂದು ಕಲ್ಮಾಡಿ ಅಮಾಯಕವಾಗಿ ಪ್ರಶ್ನಿಸಿದ್ದಾರೆ.

English summary
CWG organising chief, Suresh Kalmadi too has joined the people demanding JPC inquiry in CWG scam,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X