ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಉಗ್ರ ಕಸಬ್ಗೆ ಗಲ್ಲು ಕಾಯಂ: ಹೈಕೋರ್ಟ್
166 ಮಂದಿಯನ್ನು ಆಹುತಿ ತೆಗೆದುಕೊಂಡ ದಾಳಿ ಸಂಬಂಧ ವಿಶೇಷ ವಿಚಾರಣಾ ನ್ಯಾಯಾಲಯ ಕಸಬ್ಗೆ ಒಂಬತ್ತು ತಿಂಗಳ ಹಿಂದೆ ಗಲ್ಲು ಶಿಕ್ಷೆಯನ್ನು ಪ್ರಕಟಿಸಿತ್ತು. ಇದೀಗ ಬಾಂಬೆ ಹೈಕೋರ್ಟ್ ಆ ತೀರ್ಪನ್ನು ಎತ್ತಿಹಿಡಿದಿದೆ.
ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದ ಫರೀದ್ಕೋಟ್ ನಿವಾಸಿ 24 ವರ್ಷದ ಕಸಬ್ ಸದ್ಯ ಇಲ್ಲಿಯ ಆರ್ಥರ್ ರೋಡ್ ಜೈಲಿನಲ್ಲಿದ್ದಾನೆ. ತೀರ್ಪು ಪ್ರಕಟವಾಗುವುದಕ್ಕೂ ಮುನ್ನ ಕಸಬ್ ಖುರಾನ್ ಪಠಿಸುತ್ತಾ ಪ್ರಾರ್ಥನೆ ಸಲ್ಲಿಸಿದ. ವಿಡಿಯೊಕಾನ್ಫರೆನ್ಸ್ ಮೂಲಕ ಕಸಬ್ಗೆ ಹೈಕೋರ್ಟ್ ಆದೇಶವನ್ನು ತಿಳಿಸಲಾಯಿತು.
2008ರ ನವೆಂಬರ್ 26ರಂದು ನಡೆದ ಹತ್ಯಾಕಾಂಡದಲ್ಲಿ ಸೆರೆಸಿಕ್ಕಿರುವ ಏಕೈಕ ಉಗ್ರ ಕಸಬ್, ಛತ್ರಪತಿ ಶಿವಾಜಿ ರೇಲ್ವೆ ಟರ್ಮಿನಸ್ ಮತ್ತು ಕಾಮಾ ಆಸ್ಪತ್ರೆಯಲ್ಲಿ ನಡೆದ ದಾಳಿಗಳು ಭಯೋತ್ಪಾದಕ ದಾಳಿಗೆ ಸಂಬಂಧಿಸಿದ್ದಲ್ಲವೆಂದು ಹೇಳಿದ್ದು, ಮೇ 6ರಂದು ವಿಶೇಷ ನ್ಯಾಯಾಲಯ ನೀಡಿರುವ ಗಲ್ಲು ಶಿಕ್ಷೆಯನ್ನು ಪ್ರಶ್ನಿಸಿದ್ದಾನೆ.
Comments
ಭಯೋತ್ಪಾದನೆ ಮುಂಬೈ ಉಗ್ರರ ದಾಳಿ ಬಾಂಬೆ ಹೈಕೋರ್ಟ್ ಪಾಕಿಸ್ತಾನ death sentence pakistan ಅಜ್ಮಲ್ ಕಸಬ್ ಗಲ್ಲು ಶಿಕ್ಷೆ high court ajmal kasab
English summary
Bombay high court has upheld the death sentence to Pakistani terrorist Mohammed Ajmal Kasab. The court has upheld the trial court verdict,
Story first published: Saturday, February 26, 2011, 16:49 [IST]