ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ತೆಂಗಿನಕಾಯಿ ತುಟ್ಟಿ: ಒಂದು ಕಾಯಿಗೆ 20 ರು!

By Srinath
|
Google Oneindia Kannada News

ಬೆಂಗಳೂರು, ಫೆ.21: ಕಲ್ಪವೃಕ್ಷದ ನಾಡು ಕರ್ನಾಟಕದಲ್ಲಿ ಈಗ ತೆಂಗಿನಕಾಯಿಗೂ ಬರ ಬಂದಿದೆ. ಬೆಳೆ ನೆಲಕಚ್ಚಿದ್ದು, ಬೆಲೆ ಗಗನ ತಲುಪಿದೆ. ಗಾಬರಿಯ ವಿಷಯವೆಂದರೆ ಇನ್ನೂ ಎರಡು ತಿಂಗಳ ಕಾಲ ತೆಂಗಿನಕಾಯಿ ಧಾರಾಳ ಪ್ರಮಾಣದಲ್ಲಿ ಮಾರುಕಟ್ಟೆಗೆ ಬರುವುದಿಲ್ಲ. ಇದರಿಂದಾಗಿ ತೆಂಗಿನಕಾಯಿ ಬೆಲೆ ಮತ್ತೆ ಮತ್ತೆ ಹೆಚ್ಚಳವಾಗಲಿದೆ.

ಕೆಲ ತಿಂಗಳ ಹಿಂದೆ ತೆಂಗಿನಕಾಯಿ ದರ ತುಂಬಾನೇ ಕಡಿಮೆಯಿತ್ತು. ದೊಡ್ಡ ಗಾತ್ರದ ತೆಂಗಿನಕಾಯಿ 10 ರುಪಾಯಿಗೆ ಮಾರಾಟವಾದರೆ ಅದೇ ಉತ್ತಮ ಬೆಲೆಯಾಗುತ್ತಿತ್ತು. ಆದರೆ ಈಗ ತೆಂಗಿನ ಕಾಯಿಯೊಂದರ ಬೆಲೆ ಬರೋಬ್ಬರಿ 20 ರು. ತೆಂಗಿನ ಇತಿಹಾಸದಲ್ಲಿ ಇದು ದಾಖಲೆಯ ಬೆಲೆ. ಹಣ ಕೊಟ್ಟರೂ ಕಾಯಿಯ ಗಾತ್ರ ಅಷ್ಟಕ್ಕಷ್ಟೇ. 8 ರು. ಇದ್ದ ಕಾಯಿ ಈಗ 18 ರು. ಆಗಿದೆ. ಅದಕ್ಕಿಂತ ಸ್ವಲ್ಪ ಸಣ್ಣ ಕಾಯಿ 6 ರು. ಇದ್ದಿದ್ದು ಈಗ ೧೨ ರು. ಆಗಿದೆ. 4-5 ರು. ಇದ್ದ ಸಣ್ಣ ಕಾಯಿ ಈಗ 10-11 ಆಗಿದೆ.

ಹಲವು ತಿಂಗಳಿಂದ ತೆಂಗಿನ ಕಾಯಿ ಬೆಲೆ ತೀವ್ರವಾಗಿ ಕುಸಿದಿದ್ದರಿಂದ ರೈತರ ಪ್ರತಿಭಟನೆಗೆ ಮಣಿದ ಸರಕಾರ ಒಂದು ಟನ್ ತೆಂಗಿನ ಕಾಯಿಗೆ 12 ಸಾವಿರ ರು. ನಂತೆ ಬೆಂಬಲ ಬೆಲೆ ನೀಡಿ ಖರೀದಿಸಿತ್ತು. ಕೇರಳದಿಂದ ವಿಪರೀತ ಬೇಡಿಕೆಯೂ ಬರತೊಡಗಿತು. ಇದರಿಂದ ಸ್ಥಳೀಯ ಮಾರುಕಟ್ಟೆಗಳು ಕಾಯಿಗಳಿಲ್ಲದೆ ಭಣಗುಡತೊಡಗಿದವು.

ಮತ್ತೊಂದು ಕಾರಣ ತೆಂಗಿನ ಮರಗಳೂ ದಿನೇ ದಿನೆ ಮಾಯವಾಗುತ್ತಿವೆ. ಒಂದೆಡೆ ಮಳೆ ಕೊರತೆ, ಮತ್ತೊಂದೆಡೆ ನುಸಿರೋಗ ಹಾವಳಿ. ಇನ್ನೂ ಹಲವುರೋಗಗಳು ತೆಂಗಿಗೆ ಅಮರಿಕೊಂಡಿದ್ದು, ಅನಾರೋಗ್ಯ ಮರಗಳು ಆಯಸ್ಸು ಕಳೆದುಕೊಳ್ಳುತ್ತಿವೆ. ಕೆಲ ಮರಗಳು ಪಳೆಯುಳಿಕೆಯಂತೆ ನಿಂತಿವೆ. ಫಲ ಬಿಡುವ ಶಕ್ತಿಯನ್ನು ಕಳೆದುಕೊಂಡ ತೆಂಗಿನ ಮರಗಳಿಗೆ ರೈತ ನಿರ್ದಾಕ್ಷಿಣ್ಯವಾಗಿ ಕೊಡಲಿಪೆಟ್ಟುನೀಡುತ್ತಿದ್ದಾನೆ. ಚಾಮರಾಜನಗರ, ತಿಪಟೂರುಗಳಲ್ಲಿ ತೆಂಗಿನ ಮರಗಳು ಸಾಲುಸಾಲಾಗಿ ಧರೆಗುರುಳುತ್ತಿವೆ.

ಬೇಸಿಗೆಯ ಧಗೆ ತಣಿಸಲು ಈ ಬಾರಿ ಎಳೆನೀರಿಗೂ ಕೊರತೆಯಾಗಲಿದೆ. ಬೇಸಿಗೆ ಈ ಬಾರಿ ತೀವ್ರವಾಗುವ ಮುನ್ಸೂಚನೆಗಳಿವೆ. ಬಿಡುವ ಅಷ್ಟೋ ಇಷ್ಟೋ ಕಾಯಿಗಳು ಎಳೆನೀರಿಗೆ ಸಮರ್ಪಣೆಯಾಗಲಿದೆ. ಆದ್ದರಿಂದ ಇನ್ನು ಎರಡು ಮೂರು ತಿಂಗಳ ಕಾಲ ತೆಂಗಿನ ಕಾಯಿ ಮಾರುಕಟ್ಟೆಗೆ ಬರುವುದು ವಿರಳ. ಅಲ್ಲಿಗೆ ತೆಂಗಿನ ಕಾಯಿ ಮತ್ತಷ್ಟು ತುಟ್ಟಿಯಾಗುವುದು ಖಚಿತ.

English summary
Karnataka is facing severe shortage of coconuts. Farmers are felling deseased coconut trees as such rates may not come down for another 2-3 months.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X