ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಗಡಿ ಗಣಿ ಮಾಲೀಕರಿಗೆ ತಪ್ಪದ ಸಿಬಿಐ ಕಾಟ

By Rohini Bellary
|
Google Oneindia Kannada News

CBI serves notices to Mine owners
ಬಳ್ಳಾರಿ, ಫೆ. 19: ಕರ್ನಾಟಕ - ಆಂಧ್ರದ ಗಡಿಯಲ್ಲಿ ಇರುವ ಆಂಧ್ರದ ಓಬಳಾಪುರಂನ ವಿವಾದಿತ ಆರು ಗಣಿಗಳ ವ್ಯವಹಾರಗಳ ಸಂಪೂರ್ಣ ದಾಖಲಾತಿಗಳನ್ನು ಶೀಘ್ರದಲ್ಲೇ ಸಲ್ಲಿಸಬೇಕು ಎಂದು ಸಿಬಿಐ ನೋಟೀಸ್ ಜಾರಿ ಮಾಡಿದೆ. ಸಿಬಿಐನ ಇನ್ಸ್‌ಪೆಕ್ಟರ್ ಆಫ್ ಪೊಲೀಸ್ ಟಿ.ವಿ. ಜಾಯ್ ಅವರು ಈ ನೋಟೀಸ್ ಜಾರಿ ಮಾಡಿದ್ದಾರೆ.

ಓಬಳಾಪುರಂ ವ್ಯಾಪ್ತಿಯಲ್ಲಿ ಇರುವ ಜಿಲ್ಲಾ ಉಸ್ತುವಾರಿ ಜಿ. ಜನಾರ್ದನರೆಡ್ಡಿ ಅವರ ವ್ಯವಸ್ಥಾಪಕ ನಿರ್ದೇಶಕತ್ವ, ಪಾಲುದಾರತ್ವ ಮತ್ತು ಗಣಿ ಗುತ್ತಿಗೆಯ ಓಬಳಾಪುರಂ ಮೈನಿಂಗ್ ಕಾರ್ಪೊರೇಷನ್, ಅನಂತಪುರಂ ಮೈನಿಂಗ್ ಕಾರ್ಪೊರೇಷನ್, ಓಬಳಾಪುರಂ ಮೈನಿಂಗ್ ಕಂಪನಿ, ಅಂತರಗಂಗಮ್ಮ ಮೈನಿಂಗ್ ಕಂಪನಿ, ವೈ. ಮಹಾಬಲೇಶ್ವರಪ್ಪ ಅಂಡ್ ಸನ್ಸ್ ಹಾಗೂ ಬಳ್ಳಾರಿ ಐರನ್ ಓರ‍್ಸ್ ಪ್ರೈವೇಟ್ ಲಿಮಿಟೆಡ್‌ಗೆ ಈ ನೋಟೀಸ್ ಅನ್ನು ಸಿಬಿಐ ಅಧಿಕಾರಿಗಳು ಗುರುವಾರ ಜಾರಿ ಮಾಡಿದ್ದಾರೆ.

ಈ ನೋಟೀಸ್ ಪ್ರಕಾರ ಆಯಾ ಕಂಪನಿಗಳು ವಿದೇಶಗಳಿಗೆ ರಪ್ತು ಮಾಡಿರುವ ಹಾಗೂ ಸ್ಥಳೀಯ ಕೈಗಾರಿಕೆಗಳಿಗೆ ಮಾರಾಟ ಮಾಡಿರುವ ಕಬ್ಬಿಣದ ಅದಿರು, ಪ್ರಮಾಣ, ಗ್ರೇಡ್, ಬೆಲೆ ಇನ್ನಿತರೆಗಳ ಸಂಪೂರ್ಣ ವಿವರಗಳನ್ನು ಸಲ್ಲಿಸಬೇಕು. ಕಬ್ಬಿಣದ ಅದಿರಯನ್ನು ರಪ್ತು ಮಾಡಿದಾಗ ನಡೆದ ವಿದೇಶಿ ವಿನಿಮಯ, ವಿದೇಶೀ ವ್ಯವಹಾರದ ತೆರಿಗೆ (ಕಸ್ಟಮ್ಸ್)ಯ ಸಂಪೂರ್ಣ ಮಾಹಿತಿ. ಆದಾಯ ತೆರಿಗೆ, ವ್ಯವಹಾರ ತೆರಿಗೆ ಸೇರಿ ವಿವಧ ಇಲಾಖೆಗಳಿಗೆ ಸಲ್ಲಿಸಿರುವ ಆಯವ್ಯಯ ಪತ್ರದ ಸಂಪೂರ್ಣ ಮಾಹಿತಿ.

ಆರು ಕಂಪನಿಗಳು ವಿವಿಧ ಬ್ಯಾಂಕ್‌ಗಳ ವಿವಿಧ ಖಾತೆಗಳಲ್ಲಿ ನಡೆಸುತ್ತಿರುವ ಆರ್ಥಿಕ ಚಟುವಟಿಕೆಗಳ ಸಂಪೂರ್ಣ ಮಾಹಿತಿ. ಆಯಾ ಕಂಪನಿಗಳಲ್ಲಿ ಇರುವ ಆಡಳಿತ/ನಿರ್ದೇಶಕರ ಆಯವ್ಯಯ, ಇನ್ನಿತರೆ ಚಟುವಟಿಕೆಗಳ ಮಾಹಿತಿ ಸೇರಿ ಇನ್ನಿತರೆ ಮಾಹಿತಿಗಳನ್ನು ಆದಷ್ಟು ಶೀಘ್ರದಲ್ಲೇ ಸಿಬಿಐಗೆ ಸಲ್ಲಿಸಬೇಕು ಎಂದು ನೋಟೀಸ್‌ನಲ್ಲಿ ಸ್ಪಷ್ಟಪಡಿಸಲಾಗಿದೆ.

English summary
The CBI which is conducting an inquiry into illegal mining, following lifting of stay by Andhra Pradesh High Court, has issued notices to mining companies in Karnataka Andra pradesh border Bellary region.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X