ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಏಪ್ರಿಲ್ 27 ಮತ್ತು 28 ರಂದು ಸಿ.ಇ.ಟಿ. ಪರೀಕ್ಷೆ

By Mahesh
|
Google Oneindia Kannada News

Minister VS Acharya
ಬೆಂಗಳೂರು, ಫೆ 19: 2011ನೇ ಸಾಲಿನ ಸಾಮಾನ್ಯ ಪ್ರವೇಶ ಪರೀಕ್ಷೆ ದಿನಾಂಕಗಳನ್ನು ಉನ್ನತ ಶಿಕ್ಷಣ ಸಚಿವ ಡಾ ವಿ.ಎಸ್. ಆಚಾರ್ಯ ಅವರು ಪ್ರಕಟಿಸಿದ್ದಾರೆ. ಏಪ್ರಿಲ್ 27 ಮತ್ತು 28 ರಂದು ಸಿ.ಇ.ಟಿ ಪರೀಕ್ಷೆ ನಡೆಯಲಿದೆ.

ಏ. 27 ರಂದು ಬೆಳಿಗ್ಗೆ 10.30೦ ಕ್ಕೆ ಬಯೋಲಾಜಿ ಮಧ್ಯಾಹ್ನ 2.30 ಕ್ಕೆ ಗಣಿತ. ಏ.28 ರಂದು ಬೆಳಿಗ್ಗೆ 10.30 ಕ್ಕೆ ಫಿಸಿಕ್ಸ್ (ಭೌತಶಾಸ್ತ್ರ) ಮಧ್ಯಾಹ 2.30 ಕ್ಕೆ ಕೆಮಿಸ್ಟ್ರಿ (ರಾಸಾಯನ ಶಾಸ್ತ್ರ). ಕುರಿತ ಪರೀಕ್ಷೆ ನಡೆಯಲಿದೆ.

ಹೊರನಾಡು ಮತ್ತು ಗಡಿನಾಡಿನ ವಿದ್ಯಾರ್ಥಿಗಳಿಗೆ ಕನ್ನಡ ಪರೀಕ್ಷೆ ಏಪ್ರಿಲ್ 26 ರಂದು ನಡೆಯಲಿದ್ದು, ಹೊರನಾಡಿನ ಕನ್ನಡಿಗರಿಗೆ ಅಂದು ಬೆಳಿಗ್ಗೆ 11.00 ರಿಂದ 12.00 ಗಂಟೆಯವರೆಗೆ ಹಾಗೂ ಗಡಿನಾಡಿನ ಕನ್ನಡಿಗರಿಗೆ ಮಧ್ಯಾಹ್ನ 1.00 ರಿಂದ 2 ಗಂಟೆಯವರೆಗೆ ಪರೀಕ್ಷೆ ನಡೆಯಲಿದೆ.

ಬೆಂಗಳೂರು ದೂರದರ್ಶನದ ಮುಖಾಂತರ ಗ್ರಾಮಾಂತರ ಮತ್ತು ನಗರ ಎಲ್ಲಾ ವಿದ್ಯಾರ್ಥಿಗಳಿಗೆ ಆರು ವಾರಗಳ ವಿಶೇಷ ಸಿ.ಇ.ಟಿ. ಪರೀಕ್ಷಾ ತರಬೇತಿಯನ್ನು ನೀಡಲಾಗುವುದು. ಫಲಿತಾಂಶ ಮೇ 25 ರಂದು ಪ್ರಕಟವಾಗಲಿದೆ ಎಂದರು.

ಕೌನ್ಸಿಲಿಂಗ್: ಕೌನ್ಸಿಲಿಂಗ್ ಜೂನ್ 2 ರಿಂದ ಪ್ರಾರಂಭವಾಗಲಿದ್ದು ಬೆಂಗಳೂರು, ಗುಲ್ಬರ್ಗಾ, ಹುಬ್ಬಳ್ಳಿ, ಶಿವಮೊಗ್ಗ, ಮಂಗಳೂರು ಮತ್ತು ಈ ಬಾರಿ ಹೊಸದಾಗಿ ಬೆಳಗಾವಿ ಮತ್ತು ಚಿತ್ರದುರ್ಗ ಜಿಲ್ಲೆಗಳಲ್ಲ್ಲಿ ಕೌನ್ಸಿಲಿಂಗ್ ನಡೆಯಲಿದೆ.

ಸಿ.ಇ.ಟಿ. ಪರೀಕ್ಷೆ ಅರ್ಜಿ ಸಲ್ಲಿಸುವ ಅವಕಾಶ ದಿನಾಂಕ ಮಾರ್ಚ್ 5 ರಿಂದ ಏಪ್ರಿಲ್ 5 ರವೆಗೂ ಇರುತ್ತದೆ. ಸಿ.ಇ.ಟಿ ಪರೀಕ್ಷೆಗೆ ಅರ್ಜಿ ಶುಲ್ಕ ಸಾಮಾನ್ಯ ವರ್ಗಕ್ಕೆ ರೂ 650. ಪರಿಶಿಷ್ಟರಿಗೆ ರೂ 500.

English summary
Higher Education Minister VS Acharya has stated there will be no changes in the Common Entrance Test (CET) schedule. Karnataka CET 2011 is on April 27 and April 28. Councilling starts from June.2 all over the Karnataka.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X