• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ದೇಹ ಸುಖ ಪಡೆದು 300ಜನಕ್ಕೆ ಏಡ್ಸ್ ಹರಡಿದ ಮಾರಿ

By Mahesh
|

ಮುಂಬೈ, ಫೆ.19: ಪತಿ ತನಗೆ ಮಾಡಿರುವ ಮೋಸದಿಂದ ಏಡ್ಸ್ ರೋಗ(ಎಚ್ ಐವಿ ಪಾಸಿಟಿವ್) ಪೀಡಿತಳಾದ ಮಹಿಳೆಯೊಬ್ಬಳು ಈಗ ಪುರುಷರ ವಿರುದ್ಧ ಹಗೆತನ ಸಾಧಿಸುತ್ತಿದ್ದು, ಆಕೆ ಈಗಾಗಲೇ 300ಕ್ಕೂ ಹೆಚ್ಚು ಮಂದಿಗೆ ಏಡ್ಸ್ ರೋಗ ಹಬ್ಬಿಸಿದ್ದಾಳೆ ಎಂದು ಇಲ್ಲಿನ ವೈದ್ಯಕೀಯ ಇಲಾಖೆಯೊಂದು ವರದಿ ಮಾಡಿದೆ.

ಅಭಿಸಾರಿಕಾ (ಹೆಸರು ಬದಲಿಸಲಾಗಿದೆ) ಎಂಬಾಕೆ 2001ರಲ್ಲಿ ವಿವಾಹವಾಗಿದ್ದು , ಆಕೆಗೆ ಗಂಡನ ಜೊತೆ ದೇಹ ಸಂಪರ್ಕದಿಂದ 2005ರಲ್ಲಿ ಏಡ್ಸ್ ರೋಗ ತಗುಲಿತ್ತು. ಅಲ್ಲಿಂದ ಮುಂದಕ್ಕೆ ಆಕೆ ಮಾನಸಿಕವಾಗಿ ವೇದನೆಗೊಳಗಾಗಿರುವುದಲ್ಲದೆ ಗಂಡನಿಂದ ಬೇರೆಯಾಗಿದ್ದಳು. ಇದೇ ವೇಳೆ ಅಭಿಸಾರಿಕಾ, ತನಗೆ ಗಂಡಸೊಬ್ಬನಿಂದ ಅಂಟಿದಂತಹ ಜೀವ ಹಿಂಡುವ ರೋಗವನ್ನು ತನ್ನಲ್ಲೇ ಉಳಿಸಿಕೊಳ್ಳಲು ಇಷ್ಟಪಡದೆ, ತನಗೆ ಮೋಸ ಮಾಡಿದ ಪುರುಷ ವರ್ಗಕ್ಕೆ 'ಪ್ರಸಾದ" ರೂಪವಾಗಿ ಹಿಂದಿರುಗಿಸಲು ತೀರ್ಮಾನಿಸಿದ್ದಾಳೆ. ಹೀಗೆ ಆಕೆ ಈಗಾಗಲೇ ತನೊಂದಿಗೆ ಮಲಗಿದ ನೂರಾರು ಮಂದಿಗೆ ಏಡ್ಸ್ ದಾನ ಮಾಡಿದ್ದಾಳೆ !

ಅಭಿಸಾರಿಕಾಳೊಂದಿಗೆ ಮಲಗಿರುವವರಲ್ಲಿ ತನ್ನ ಕೆಲಸಗಾರರು, ಸಂಬಂಧಿಗಳು, ಗೆಳೆಯರು, ಲಿಫ್‌ಮೆನ್, ಟ್ಯಾಕ್ಸಿ ಡ್ರೈವರ್‌ಗಳು ಮತ್ತು ವಿದ್ಯಾರ್ಥಿಗಳು ಒಳಗೊಂಡಿದ್ದು, ಇವರಲ್ಲಿ ಹೆಚ್ಚಿನವರು ಈಗ ಏಡ್ಸ್ ರೋಗ ಬಾಧಿತರಾಗಿದ್ದಾರೆ. ತನ್ನೊಂದಿಗೆ ಲೈಂಗಿಕ ಸುಖ ಅನುಭವಿಸುವ ಪುರುಷರು ಕಾಂಡೋಮ್ ಧರಿಸಲು

ಅಭಿಸಾರಿಕಾ ನಿರಾಕರಿಸುತ್ತಿದಳು. ರೋಗದ ಬಗ್ಗೆ ತಿಳಿಯದ ಮಂದಿ, ಆಕೆಯ ಸೌಂದರ್ಯಕ್ಕೆ ಮರುಳಾಗಿ ಆಕೆ ಹೇಳಿದಂತೆ ನಡೆದುಕೊಂಡು, ಸುಖ ಅನುಭವಿಸಿ ಕೊನೆಗಾಗುವಾಗ ಗೊತ್ತಿಲ್ಲದೆಯೇ ಏಡ್ಸ್‌ಗೆ ತುತ್ತಾಗಿದ್ದಾರೆ.

ಅಭಿಸಾರಿಕಾ ರೋಗ ಹರಡಿಸುವ ಕಾರಣದಿಂದಲೇ ತನ್ನ ಗಿರಾಕಿಗಳನ್ನು ಕಾಂಡೋಮ್ ಮುಕ್ತರನ್ನಾಗಿಸುವಂತಹ ಉಪಾಯ ಹೂಡಿದ್ದಾಳೆ. 28 ರ ಹರೆಯದ ಅಭಿಸಾರಿಕಾಳ ಬಗ್ಗೆ ಇನ್ನಷ್ಟು ಮಾಹಿತಿ ನೀಡಿದ ಯುಎನ್‌ಐಎಸ್‌ಒಎನ್ ಮೆಡಿಕೇರ್ ಆಂಡ್ ರೀಸರ್ಚ್ ಸೆಂಟರಿನ ಎಂಡಿ ಡಾ ಈಶ್ವರ್ ಗಿಲಾಡ, "ಅಭಿಸಾರಿಕಾ ನನ್ನ ಪೇಶೆಂಟ್. ಆಕೆ ಏಡ್ಸ್ ರೋಗಿಯಾಗಿರುವುದರಿಂದ ಕಾನೂನು ಪ್ರಕಾರ ಮತ್ತು ನಾನೊಬ್ಬ ವೈದ್ಯನಾಗಿರುವ ಕಾರಣದಿಂದ ಆಕೆಯ ಪರಿಚಯ ಗೌಪ್ಯವಾಗಿಟ್ಟಿದ್ದೇನೆ. ಅಭಿಸಾರಿಕಾ ಈಗ ಸ್ವಲ್ಪ ಮಟ್ಟಿಗೆ ಮಾನಸಿಕ ವೇದನೆಯಿಂದ ಬಳಲುತ್ತಿದ್ದಾಳೆ. ಆಕೆ ಪುರುಷರ ವಿರುದ್ಧ ಹಗೆತನ ಸಾಧಿಸಬೇಕೆಂಬ ಉದ್ದೇಶವಿಟ್ಟುಕೊಂಡು ತನ್ನನ್ನು ಅರಸಿ ಬಂದವರಿಗೆ ಏಕಕಾಲದಲ್ಲಿ 'ಮೈ-ದಾನ" ಮತ್ತು 'ಏಡ್ಸ್-ದಾನ" ಮಾಡುತ್ತಿದ್ದಳು" ಎಂದಿದ್ದಾರೆ.

ಅಭಿಸಾರಿಕಾಳನ್ನು ಆಕೆಯ ಸಂಬಂಧಿಗಳು ನನ್ನ ಕ್ಲಿನಿಕಿಗೆ ಕರೆ ತಂದಿದ್ದರು. ಈಗಲೂ ಆಕೆ ದ್ವೇಷವೆಂಬ ಹಠದಿಂದ ತಿರುಗಿ ನೋಡುವ ಸ್ಥಿತಿಯಲಿಲ್ಲ. ಆಕೆಗೆ ತನ್ನ 10 ವರ್ಷದ ಕಿವುಡ ಮಗನನ್ನು ಆಶ್ರಮದಲ್ಲಿರಿಸಿದ್ದಾಳೆ. ಯಾರ ಮಾತನ್ನು ಕೇಳುವ ಸ್ಥಿತಿಯಲ್ಲಿಲ್ಲ. ಆಕೆಯನ್ನು ಈ ಹಗೆತನದಿಂದ ತಡೆಯುವವರು ಇಲ್ಲವಾಗಿದ್ದಾರೆ

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
A 28 year old HIV positive woman has put more than 300 men at risk of contracting the virus in the last two years by having unprotected sex with them. She has become obsessive HIV Positive Transmitter with prostitution profession in Mumbai.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more