ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರಾಜ್ಯಸಭೆ: ಹೇಮಮಾಲಿನಿ ಕರ್ನಾಟಕ ಅಭ್ಯರ್ಥಿ

By Mahesh
|
Google Oneindia Kannada News

Hemamalini, Karnataka RS candidate
ಬೆಂಗಳೂರು, ಫೆ.18: ರಾಜ್ಯಸಭಾ ಚುನಾವಣೆ ಅಭ್ಯರ್ಥಿ ಆಯ್ಕೆ ವಿಷಯದಲ್ಲಿ ಸಿಎಂ ಯಡಿಯೂರಪ್ಪ ಹಾಗೂ ಬಳ್ಳಾರಿ ಸಚಿವತ್ರಯ ಮಧ್ಯೆ ಉಂಟಾಗಿದ್ದ ವಿರಸವನ್ನು ಬಿಜೆಪಿ ಹೈ ಕಮಾಂಡ್ ಶಮನ ಮಾಡಿದೆ. ರಾಜ್ಯಸಭಾ ಸದಸ್ಯರಾಗಿದ್ದ ರಾಜಶೇಖರ ಮೂರ್ತಿಯವರ ನಿಧನದಿಂದ ತೆರವಾಗಿದ್ದ ಸ್ಥಾನಕ್ಕೆ ಮಾರ್ಚ್ 3ರಂದು ಚುನಾವಣಾ ನಡೆಯಲಿದೆ. ತಮ್ಮಪರ ಅಭ್ಯರ್ಥಿಗೆ ಸ್ಥಾನ ಕಲ್ಪಿಸಬೇಕೆಂದು ರೆಡ್ಡಿಗಳು ಪಟ್ಟು ಹಿಡಿದಿರುವುದರಿಂದ ಯಡಿಯೂರಪ್ಪ ಹಾಗೂ ಜನಾರ್ದನ ರೆಡ್ಡಿ ಮಧ್ಯೆ ಮುಸುಕಿನ ಗುದ್ದಾಟ, ಬಿಜೆಪಿಯೊಳಗೆಯೇ ಬಿರುಸಿನ ಚಟುವಟಿಕೆ ನಡೆದಿತ್ತು.

ಮಾಜಿ ಸಚಿವ ಹಾಗೂ ದೆಹಲಿ ಪ್ರತಿನಿಧಿಯಾಗಿರುವ ಧನಂಜಯ ಕುಮಾರ್‌ರನ್ನು ಕಣಕ್ಕಿಳಿಸಲು ಯಡಿಯೂರಪ್ಪ ಒಲವು ತೋರಿದ್ದರೆ, ಮಾಜಿ ಸಂಸದರಾಗಿರುವ ಕೋಳೂರು ಬಸವನಗೌಡರಿಗೆ ಟಿಕೆಟ್ ನೀಡುವಂತೆ ಜನಾರ್ದನ ರೆಡ್ಡಿ ಪ್ರತಿಪಟ್ಟು ಹಿಡಿದಿದ್ದರು. ಧನಂಜಯ ಕುಮಾರ್‌ಗೆ ಸಂಪುಟ ದರ್ಜೆಯ ಸ್ಥಾನಮಾನವನ್ನು ನೀಡಲಾಗಿದೆ. ಅವರಿಗಿಂತಲೂ ಕೋಳೂರು ಬಸವನ ಗೌಡರಿಗೆ ಟಿಕೆಟ್ ನೀಡುವುದು ಸೂಕ್ತ ಎನ್ನುವುದು ರೆಡ್ಡಿ ಸೋದರರ ವಾದವಾಗಿದೆ.

ಜನಾರ್ದನ ರೆಡ್ಡಿ ಕಡೆಯಿಂದ ಮತ್ತೆ ಕಿರಿಕಿರಿ ಆರಂಭವಾಗುತ್ತಿದ್ದಂತೆ ದಿಲ್ಲಿಗೆ ಹೋಗಿದ್ದ ಯಡಿಯೂರಪ್ಪ ಪಕ್ಷದ ವರಿಷ್ಠರೊಂದಿಗೆ ಚರ್ಚೆ ನಡೆಸಿ ಬಂದಿದ್ದರು. ಎರಡೂ ಬಣದ ಅಭಿಪ್ರಾಯ ಸಂಗ್ರಹ ಮಾಡಿದ ನಂತರ ಕನಸಿನ ಕನ್ಯೆ ಹೇಮಮಾಲಿನಿ ಅವರಿಗೆ ಅವಕಾಶ ನೀಡಲು ಬಿಜೆಪಿ ಹೈ ಕಮಾಂಡ್ ನಿರ್ಧರಿಸಿದೆ. ಈ ನಿರ್ಧಾರದಿಂದ ಕರ್ನಾಟಕ ಬಿಜೆಪಿಯಲ್ಲಿ ಅಸಮಾಧಾನದ ಹೊಗೆ ಏಳುವ ಸಾಧ್ಯತೆ ದಟ್ಟವಾಗಿದೆ. ರಾಜ್ಯಸಭೆ ಮರು ಚುನಾವಣೆಗೆ ಫೆ. 21 ನಾಮಪತ್ರ ಸಲ್ಲಿಕೆಗೆ ಕೊನೆ ದಿನಾಂಕವಾಗಿದೆ. ನಾಮ ಪತ್ರ ಹಿಂಪಡೆಯಲು ಫೆ.24 ಅಂತಿಮ ದಿನ, ಮಾರ್ಚ್ 3 ರಂದು ಫಲಿತಾಂಶ ಪ್ರಕಟಗೊಳ್ಳುವ ಸಾಧ್ಯತೆಯಿದೆ.

English summary
BJP High command has snubbed both cm BS yeddyurappa and Reddy Brothers in selecting candidate for Rajyasabha seat. Cine artist Hemamalini is been selected as official karnataka candidate for Raya Sabha. By-election to a Rajya Sabha seat from Karnataka will be held on March 3,2011. Last date for filing nominations will be February 21. Counting of votes will also take place on March 3.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X