ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸ್ವಿಸ್: ಸಾರಿ ಎಂದ ಅಡ್ವಾಣಿ, ಸೋನಿಯಾಗೆ ಕ್ಲೀನ್ ಚಿಟ್ ?

By Srinath
|
Google Oneindia Kannada News

Sonia Gandhi
ನವದೆಹಲಿ, ಫೆ.18: ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಮತ್ತು ಅವರ ದಿವಂಗತ ಪತಿ ರಾಜೀವ್ ಗಾಂಧಿ ಅವರು ಸ್ವಿಸ್ ಬ್ಯಾಂಕ್‌ಗಳಲ್ಲಿ ಖಾತೆಗಳನ್ನು ಹೊಂದಿದ್ದಾರೆ ಎಂದು ಬಿಜೆಪಿ ಸಮಿತಿ ವರದಿ ನೀಡಿರುವ ಬಗ್ಗೆ ಬಿಜೆಪಿ ಹಿರಿಯ ನಾಯಕ ಎಲ್.ಕೆ.ಅಡ್ವಾಣಿ ಅವರು ಸೋನಿಯಾ ಅವರಲ್ಲಿ ಕ್ಷಮೆಯಾಚಿಸಿದ್ದಾರೆ.

ವಿದೇಶ ಬ್ಯಾಂಕ್‌ಗಳಲ್ಲಿ ಭಾರತೀಯರು ಸಂಗ್ರಹಿಸಿಟ್ಟಿರುವ ಕಪ್ಪು ಹಣ ಮತ್ತು ಅದನ್ನು ವಾಪಸ್ ತರುವ ಕುರಿತು ಬಿಜೆಪಿ ಪಕ್ಷದ ವತಿಯಿಂದ ನೇಮಕಗೊಂಡಿದ್ದ ಸಮಿತಿಯು ವರದಿ ಸಲ್ಲಿಸಿತ್ತು. ವರದಿಯಲ್ಲಿ ಸೋನಿಯಾ ಗಾಂಧಿ ಮತ್ತು ರಾಜೀ ಗಾಂಧಿ ಅವರು ಸ್ವಿಸ್ ಬ್ಯಾಂಕ್‌ಗಳಲ್ಲಿ ಖಾತೆ ಹೊಂದಿದ್ದಾರೆ ಎಂದು ಉಲ್ಲೇಖಿಸಲಾಗಿಸಿತ್ತು.

ಇದಕ್ಕೆ ಪ್ರತಿಕ್ರಿಯಿಸಿದ ಸೋನಿಯಾ ಅವರು ತಾವಾಗಲಿ ಅಥವಾ ತಮ್ಮ ಪತಿ ರಾಜೀವ್ ಆಗಲಿ ಅಂತಹ ಯಾವುದೇ ಖಾತೆಗಳನ್ನು ಹೊಂದಿಲ್ಲ ಎಂದು ಅಡ್ವಾಣಿಗೆ ಪತ್ರ ಬರೆದು ಸ್ಪಷ್ಟಪಡಿಸಿದ್ದರು. ನಾಲ್ವರು ಸದಸ್ಯರ ಬಿಜೆಪಿ ತಂಡವು ವಿದೇಶಿ ಬ್ಯಾಂಕ್‌ಗಳಲ್ಲಿ ಭಾರತೀಯರು ಹೊಂದಿರುವ ಖಾತೆಗಳಲ್ಲಿ 25 ಲಕ್ಷ ಕೋಟಿ ರುಪಾಯಿ ಶೇಖರಣೆಯಾಗಿದೆ ಎಂದು ತಿಳಿಸಿತ್ತು.

ಸೋನಿಯಾ ಅವರಲ್ಲಿ ಬಹಿರಂಗವಾಗಿ ಕ್ಷಮೆಯಾಚಿಸುವ ಮೂಲಕ ಗಾಂಧಿ ಕುಟುಂಬ ಸ್ವಿಸ್ ಬ್ಯಾಂಕ್ ಖಾತೆಗಳನ್ನು ಹೊಂದಿಲ್ಲ ಎಂದು ಅಡ್ವಾಣಿ ಷರಾ ಬರೆದಿದ್ದಾರೆಯೇ? ಈ ಗೊಂದಲವನ್ನು ದೂರಮಾಡಲು ಸೋನಿಯಾ ಬರೆದ ಪತ್ರವನ್ನು ಅಡ್ವಾಣಿ ಬಹಿರಂಗಪಡಿಸುವುದು ಉತ್ತಮ ಅಲ್ಲವೇ!?

English summary
BJP Leader LK Advani apologised to Congress President Sonia for a BJP report, which had alleged that she and her late husband Rajiv had accounts in Swiss banks.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X