ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕುಮಾರಸ್ವಾಮಿ ಮನೆ ಮುರುಕ : ಎಚ್ ವಿಶ್ವನಾಥ್

By Mahesh
|
Google Oneindia Kannada News

H Vishwanth
ಚಿಕ್ಕಮಗಳೂರು, ಫೆ.17:ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರನ್ನು ನಂಬಿ ಅವರ ಹಿಂದೆ ಹೋದ ಹದಿನಾರು ಮಂದಿ ಅನರ್ಹ ಶಾಸಕರು ಸರಿಯಾದ ಪಾಠವಾಗಿದೆ. ಅನರ್ಹ ಶಾಸಕರ ಮನೆಯನ್ನು ಹಾಳು ಮಾಡಿದ ಕೀರ್ತಿ ಕುಮಾರಸ್ವಾಮಿ ಅವರಿಗೆ ಸಲ್ಲುತ್ತದೆ ಎಂದು ಲೋಕಸಭಾ ಸದಸ್ಯ ಎಚ್.ವಿಶ್ವನಾಥ್ ಹೇಳಿದ್ದಾರೆ.

ಕುಮಾರಸ್ವಾಮಿ ಐವರು ಪಕ್ಷೇತರ ಹಾಗೂ 11 ಮಂದಿ ಬಿಜೆಪಿ ಶಾಸಕರ ರಾಜಕೀಯ ಭವಿಷ್ಯವನ್ನೇ ಹಾಳು ಮಾಡಿದರು. ರಾಜ್ಯದಲ್ಲಿ ಸೃಷ್ಟಿಯಾಗಿರುವ ಆಡಳಿತ ಗೊಂದಲಕ್ಕೆ ಕುಮಾರಸ್ವಾಮಿ ನೇರ ಕಾರಣ. ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರ್ಕಾರವನ್ನು ಪತನಗೊಳಿಸಿ ಬಿಜೆಪಿ ಜೊತೆ ಕೈಜೋಡಿಸುವ ಮೂಲಕ ರಾಜ್ಯವನ್ನು ಗೊಂದಲಕ್ಕೆ ದೂಕಿದರು. ಆಗ ಆರಂಭವಾದ ರಾಜಕೀಯ ಗೊಂದಲ ಇನ್ನು ನಿಂತಿಲ್ಲ ಎಂದು ವಿಶ್ವನಾಥ್ ಅಭಿಪ್ರಾಯಪಟ್ಟಿದ್ದಾರೆ.

ಪಕ್ಷೇತರರ ದುರ್ಗತಿ ದೇವರಿಗೆ ಪ್ರೀತಿ: ರಾಜ್ಯ ಹೈಕೋರ್ಟ್‌ನಿಂದ ಕಾನೂನು ಸಮರದಲ್ಲಿ ಸೋತ ಐವರು ಪಕ್ಷೇತರ ಶಾಸಕರು ಈಗ ದುರ್ಬಲರಾಗಿದ್ದಾರೆ. ಸುಪ್ರೀಂಕೋರ್ಟ್‌ನಲ್ಲಿ ಅವರು ಕಾನೂನು ಸಮರ ಎದುರಿಸಲು ಹಣವಿಲ್ಲದಷ್ಟು ದುರ್ಬಲಗೊಂಡಿದ್ದಾರೆ. ಹೀಗಾಗಿ ಅವರು ದೇವೇಗೌಡರ ಮನೆ ಮೆಟ್ಟಿಲು ತುಳಿದಿದ್ದಾರೆ ಎಂದು ವ್ಯಂಗ್ಯವಾಡಿದರು. ಜಾತ್ಯತೀತ ಎಂದು ಹೇಳಿಕೊಳ್ಳುವ ಜೆಡಿಎಸ್ ಮೈಸೂರು ಜಿಲ್ಲಾ ಪಂಚಾಯತ್‌ನಲ್ಲಿ ಬಿಜೆಪಿ ಜೊತೆ ಕೈಜೋಡಿಸಿದೆ. ಇದು ಅವರು ಜಾತ್ಯಾತೀತ ತೆನೆಯನ್ನು ಎತ್ತಿಹಿಡಿಯುತ್ತದೆ ಎಂದು ಹೇಳಿದರು.

ಕೃಷಿ ಬಜೆಟ್ ಎಂಬ ಪೊಳ್ಳು ಆಶ್ವಾಸನೆ: ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮಂಡಿಸುತ್ತಿರುವ ಕೃಷಿ ಬಜೆಟ್ ಈವರ್ಷದ ರಾಜ್ಯದ ಮಹಾನ್ ಜೋಕ್ ಎಂದು ವ್ಯಂಗ್ಯವಾಡಿದರು. ಯಡಿಯೂರಪ್ಪ ಮಂಡಿಸಿದ ಬಜೆಟ್‌ನ ನೀತಿಗಳೆ ಇನ್ನು ಅನುಷ್ಠಾನಗೊಂಡಿಲ್ಲ. ಹೀಗಾಗಿ ಕೃಷಿ ಬಜೆಟ್ ಜಾರಿಗೆ ಬರುವುದು ಜೋಕ್ ಎನಿಸುತ್ತದೆ. ಕೇಂದ್ರ ಬಜೆಟ್‌ಗಿಂತ ಮುಂಚೆಯೇ ರಾಜ್ಯ ಬಜೆಟ್ ಮಂಡಿಸಿ ಸಂಪ್ರದಾಯವನ್ನು ಅವರು ಮುರಿಯುತ್ತಿದ್ದಾರೆ. ಹಿಂದಿನ ಬಜೆಟ್‌ಗಳು ಶೇ.೨೦ರಷ್ಟು ಜಾರಿಗೆ ಬಂದಿಲ್ಲ. ಕೃಷಿ ಬಜೆಟ್ ಎನ್ನುವುದು ರೈತರಿಗೆ ಮಾಡುತ್ತಿರುವ ಮಹಾ ವಂಚನೆ ಎಂದು ಅಕ್ರೋಶ ವ್ಯಕ್ತಪಡಿಸಿದರು.

English summary
MP H Vishwanth has said HD Kumaraswamy is the sole repsonsible for breaking political life of Independent dis qualified mlas in Karnataka. He and his JDS party is responsible for Crisis in Karnataka. Yeddurappa's agriculture budget is big joke.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X