ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪಾಲಿಟೆಕ್ನಿಕ್ ಉಪನ್ಯಾಸಕರಿಗೆ ಬಂಪರ್ ಕೊಡುಗೆ

By Rajendra
|
Google Oneindia Kannada News

V S Acharya
ಬೆಂಗಳೂರು, ಫೆ.17: ಸರ್ಕಾರಿ, ಅನುದಾನಿತ ಪಾಲಿಟೆಕ್ನಿಕ್‌ಗಳಲ್ಲಿ ಸೇವೆ ಸಲ್ಲಿಸುತ್ತಿರುವ ಉಪನ್ಯಾಸಕರಿಗೆ ಸಿಹಿ ಸುದ್ದಿ. ಎಐಸಿಟಿಇ ಪರಿಷ್ಕೃತ 6ನೇ ವೇತನ ಆಯೋಗ ಶಿಫಾರಸು ಜಾರಿಗೊಳಿಸಿ ಎಂಬುದು ಅವರ ಬಹುದಿನಗಳ ಬೇಡಿಕೆಯಾಗಿತ್ತು. ಕಡೆಗೂ ಅವರ ಬೇಡಿಕೆಗೆ ಸ್ಪಂದಿಸಿರುವ ರಾಜ್ಯ ಸರಕಾರ ಗುರುವಾರ(ಫೆ.17) ತಥಾಸ್ತು ಎಂದಿದೆ.

ಸರ್ಕಾರಿ, ಅನುದಾನಿತ ಪಾಲಿಟೆಕ್ನಿಕ್‌ಗಳಲ್ಲಿ ಸೇವೆ ಸಲ್ಲಿಸುತ್ತಿರುವ ಬೋಧಕ ಸಿಬ್ಬಂದಿಗೆ ಏಪ್ರಿಲ್ 1, 2011ರಿಂದ ಜಾರಿಗೆ ಬರುವಂತೆ ಆರನೇ ವೇತನ ಆಯೋಗದ ಶಿಫಾರಸನ್ನು ಜಾರಿಗೊಳಿಸಿದೆ. ಆರನೇ ವೇತನ ಆಯೋಗದ ಶಿಫಾರಸನ್ನು ಜಾರಿಗೆ ತರಲು ಸಂಪುಟ ಸಭೆಯಲ್ಲಿ ತೀರ್ಮಾನಿಸಲಾಗಿದೆ ಎಂದು ಉನ್ನತ ಶಿಕ್ಷಣ ಸಚಿವ ವಿ ಎಸ್ ಆಚಾರ್ಯ ಪ್ರಕಟಿಸಿದರು.

ಪಾಲಿಟೆಕ್ನಿಕ್ ಉಪನ್ಯಾಸಕರಿಗೆ ಆರನೇ ವೇತನ ಆಯೋಗದಶಿಫಾರಸ್ಸು ಜಾರಿ ಸೇರಿದಂತೆ ಇನ್ನೂ ಹಲವು ಪ್ಯಾಕೇಜ್‌ಗಳನ್ನು ಆಚಾರ್ಯ ಇಂದು ಪ್ರಕಟಿಸಿದರು. ಅವುಗಳಲ್ಲಿ ಮುಖ್ಯವಾಗಿ ಎಂಡೋ ಸಲ್ಫಾನ್ ಎಂಬ ಕ್ರಿಮಿನಾಶಕ ನಿಷೇಧ. ಈ ಸಂಬಂಧ ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಲಾಗುವುದು ಎಂದರು.

ಅಂತಾರಾಷ್ಟ್ರೀಯ ಆಯುರ್ವೇದ ಸಂಸ್ಥೆಗೆ ಉತ್ತರಹಳ್ಳಿಯಲ್ಲಿ ನಾಲ್ಕು ಎಕರೆ ಜಮೀನು ನಿಗದಿಪಡಿಸಲಾಗಿದೆ ಎಂದ ಸಚಿವರು ನಂದಿಬೆಟ್ಟ ಮತ್ತು ಕೆಮ್ಮಣ್ಣುಗುಂಡಿ ಗಿರಿಧಾಮಗಳನ್ನು ಅಭಿವೃದ್ಧಿ ಪಡಲು ತೀರ್ಮಾನಿಸಲಾಗಿದೆ. ನಂದಿಬೆಟ್ಟ ಅಭಿವೃದ್ಧಿಗೆ ರು.15 ಕೋಟಿ ಹಾಗೂ ಕೆಮ್ಮಣ್ಣುಗುಂಡಿ ಅಭಿವೃದ್ಧಿಗೆ ರು.16 ಕೋಟಿ ಹಣ ಬಿಡುಗಡೆಗೆ ಸಂಪುಟ ಸಭೆಯಲ್ಲಿ ಅನುಮೋದನೆ ನೀಡಲಾಗಿದೆ ಎಂದರು.

English summary
After several months of hectic struggle, the karnataka Govt has finally released the notification of sixth pay scales for the Govt and Aided polytechnics.The revised pay scale come to effect from April 1, 2011 said the higher education minister V S Acharya on Thursday (Feb 17, 2011) in Vidhana Soudha.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X