• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಉರ್ವ: ಬಂಜೆ ಎಂದು ಪತಿ ಕಿರುಕುಳ, ಪೊಲೀಸರಿಗೆ ದೂರು

By Mahesh
|

ಮಂಗಳೂರು, ಫೆ.15: ವಿವಾಹವಾಗಿ ಒಂದು ವರ್ಷ ಸುಖವಾಗಿ ಸಂಸಾರ ಸಾಗಿತ್ತು. ಆದರೆ, ಮಕ್ಕಳಾಗಿಲ್ಲ ಎಂಬ ನೆಪವೊಡ್ಡಿ ದೈಹಿಕವಾಗಿ, ಮಾನಸಿಕವಾಗಿ ಪತಿ ಹಾಗೂ ಆತನ ಮನೆಯವರು ಹಿಂಸಿಸತೊಡಗಿದಾಗ ವಿಧಿಯಿಲ್ಲದೆ ಆಕೆ ಪೊಲೀಸರ ಮೊರೆ ಹೋಗಲೇಬೇಕಾಯಿತು. ಈ ರೀತಿ ನರಕಯಾತನೆಯ ಬದುಕು ಅನುಭವಿಸಿದವರು ಬಿಜೈ ನಿವಾಸಿ ಅನಿತಾ ಡಿ"ಸೋಜಾ. ಆಕೆಗೆ ಕಿರುಕುಳ ಕೊಟ್ಟ ಪತಿರಾಯನ ಹೆಸರು ಮರಿಯನ್ ಪಿಯುಷ್.

ಬಿಜೈ ನ್ಯೂರೋಡ್ ನಿವಾಸಿ ಅನಿತಾ ಡಿಸೋಜಾ ಮತ್ತು ಪತಿಮಹಾಶಯ ಬಿಜೈ ನಿವಾಸಿ ಮರಿಯನ್ ಪಿಯುಷ್ ಅವರ ವಿವಾಹ 2009 ರ ನವೆಂಬರ್ ತಿಂಗಳಲ್ಲಿ ನಡೆದಿತ್ತು. ಈ ವೇಳೆ ಮದುವೆಯ ಖರ್ಚನ್ನು ಸಂಪೂರ್ಣವಾಗಿ ಅನಿತಾ ಇವರ ಮನೆ ಮಂದಿಯೇ ಭರಿಸಿದ್ದರು. ಮದುವೆಯಾದ ಒಂದಷ್ಟು ದಿನ ಪತಿ ಹಾಗೂ ಮನೆ ಮಂದಿ ಚೆನ್ನಾಗೇ ನೋಡಿಕೊಂಡರು. ಮದುವೆಯಾಗಿ ಒಂದು ವರುಷ ಕಳೆಯುತ್ತಿದ್ದಂತೆ, ಅನಿತಾ ಗರ್ಭ ಧರಿಸಿರಲಿಲ್ಲ ಎಂದು ನೆಪವೊಡ್ಡಿ ಮರಿಯನ್ ಪಿಯುಷ್ ಹಾಗೂ ಅವರ ಮನೆ ಮಂದಿ ದಿನನಿತ್ಯ ಅನಿತಾರನ್ನು ಹಂಗಿಸಿ, ಹಲ್ಲೆ ನಡೆಸುತ್ತಿದ್ದರು.

ತವರಿಗೆ ಹೋದ ಅನಿತಾಳನ್ನು ಹುಡುಕಿಕೊಂಡು ಬಂದ ಪಾಪಿಗಳ ಬಳಗ ಸಿಕ್ಕ ಕಡೆಯಲೆಲ್ಲಾ ನಿಂದಿಸತೊಡಗಿದ್ದರು. ಅನಿತಾ ಒಮ್ಮೆ ರಸ್ತೆ ಬದಿ ನಿಂತಿದ್ದ ವೇಳೆ ಕಾರಿನಲ್ಲಿ ಅಲ್ಲಿಗೆ ಬಂದ ಪತಿ ಮಹಾಶಯ ಅಶ್ಲೀಲವಾಗಿ ನಿಂದಿಸಿ, ವಿಚ್ಛೇದನ ನೀಡದಿದ್ದರೆ ಕಾರಿನಡಿಗೆ ಹಾಕಿ ಕೊಲ್ಲುವುದಾಗಿ ಬೆದರಿಕೆ ಒಡ್ಡಿದ್ದ ಎಂದು ಅನಿತಾ ದೂರಿದ್ದಾರೆ.

ತನ್ನ ಕಣ್ಣೀರಿನ ಕಥೆಯ ಸಂಪೂರ್ಣ ವಿವರಗಳನ್ನು ದೂರಿನ ರೂಪದಲ್ಲಿ ಬರೆದಿರುವ ಅನಿತಾ, ಪತಿ ಮನೆಯವರಾದ ಲೀನಾ ಡಿಸೋಜಾ, ಎವಲಿನ್ ಡಿಸೋಜಾ, ಅನಿಲ್ ಡಿಸೋಜಾ ವಿರುದ್ದ ದೈಹಿಕ, ಮಾನಸಿಕ ಹಲ್ಲೆ ನೀಡಿರುವ ಆರೋಪ ಹೊರೆಸಿ ಉರ್ವ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Anita D' Souza resident of Bijai, Mangalore has filed a domestic violence, physical harassment case against her husband Marian Piyush and his family. Anita was forced to sign divorce paper for not able to conceive.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more