ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹಾರೋಹಳ್ಳಿ ಕಸಾಯಿಖಾನೆಗೆ ಸಿಂಧ್ಯಾ ವಿರೋಧ

By Mahesh
|
Google Oneindia Kannada News

PGR Sindhia opposes to Slaughterhouse in Harohalli
ಹಾರೋಹಳ್ಳಿ, ಫೆ.15: ಕನಕಪುರ ತಾಲೂಕು ಹಾರೋಹಳ್ಳಿ ಕೈಗಾರಿಕಾ ಪ್ರದೇಶದಲ್ಲಿ ಬಿಬಿಎಂಪಿ ನಿರ್ಮಿಸಲು ಉದ್ದೇಶಿಸಿರುವ ಆಧುನಿಕ ಕಸಾಯಿಖಾನೆಗೆ ಜೆಡಿಎಸ್ ಕಾರ್ಯಾಧ್ಯಕ್ಷ ಪಿ.ಜಿ.ಆರ್ ಸಿಂಧ್ಯಾ ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ. ಬೆಂಗಳೂರು ಹಾಗೂ ಕನಕಪುರ ರಾಷ್ಟ್ರೀಯ ಹೆದ್ದಾರಿಯ ಬಳಿಯ ಕೈಗಾರಿಕಾ ಪ್ರದೇಶದ ಸುಮಾರು 40 ಎಕರೆ ಜಾಗದಲ್ಲಿ ಆಧುನಿಕ ಕಸಾಯಿಖಾನೆ ನಿರ್ಮಿಸಲು ಬಿಬಿಎಂಪಿ ಜಮೀನು ವಶಕ್ಕೆ ತೆಗೆದುಕೊಂಡಿದೆ.

ಬೆಂಗಳೂರಿನಿಂದ ಸುಮಾರು 39 ಕಿ.ಮೀ ದೂರದಲ್ಲಿರುವ ಈ ಪ್ರದೇಶದಲ್ಲಿ ಕಸಾಯಿಖಾನೆ ಸ್ಥಾಪನೆ ಕಾರ್ಯಕ್ಕೆ ಮುಂದಾಗಿರುವುದಕ್ಕೆ ಗ್ರಾಮಸ್ಥರು ಹಾಗೂ ಕೈಗಾರಿಕೋದ್ಯಮಿಗಳು ಆತಂಕಗೊಂಡಿದ್ದಾರೆ. ಹಾರೋಹಳ್ಳಿಯ ಮೊದಲ ಹಂತದ ಕೈಗಾರಿಕಾ ಪ್ರದೇಶ ಸುಮಾರು 4,000 ಎಕರೆಯಿದ್ದು, ಅನೇಕ ಕೈಗಾರಿಕೆಗಳು ಆರಂಭವಾಗಿದೆ. ಸ್ಥಳೀಯರಿಗೆ ಉದ್ಯೋಗವಕಾಶಗಳು ಲಭಿಸಿದ್ದು, ರೈತರ ಆರ್ಥಿಕ ಪರಿಸ್ಥಿತಿ ಸುಧಾರಿಸಲು ಸಹಾಯಕವಾಗಿದೆ.

ಸುಮಾರು 20,000 ಜನ ಸಂಖ್ಯೆಯುಳ್ಳ ಹಾರೋಹಳ್ಳಿ ಗ್ರಾಮಸ್ಥರಲ್ಲದೆ, ಬೆಂಗಳೂರಿನಿಂದ ಕೆಲಸದ ನಿಮಿತ್ತ ಇಲ್ಲಿಗೆ ಪ್ರತಿನಿತ್ಯ ಬರುವ ಸುಮಾರು 3 ರಿಂದ 4 ಸಾವಿರ ನೌಕಕರು ಕೂಡಾ ಈ ಕಸಾಯಿಖಾನೆ ಆರಂಭಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ ಎಂದು ಸಿಂಧ್ಯ ಹೇಳಿದ್ದಾರೆ.

ಕೋರ್ಟ್ ಆದೇಶ ಪಾಲನೆ: ಬಿ. ಕೃಷ್ಣಭಟ್ ಎಂಬುವರು ಹೈಕೋರ್ಟ್ ನಲ್ಲಿ ರಿಟ್ ಪಿಟಿಷನ್ ದಾಖಲಿಸಿ ಬೆಂಗಳೂರಿನಲ್ಲಿರುವ ಎಲ್ಲಾ ಕಸಾಯಿಖಾನೆಗಳನ್ನು ಬೆಂಗಳೂರಿನ ಹೊರವಲಯಕ್ಕೆ ಸ್ಥಳಾಂತರಿಸಲು ಕೋರಿದ್ದರು. ಇದಕ್ಕೆ ಸ್ಪಂದಿಸಿದ್ದ ಕೋರ್ಟ್, ನಗರ ಹೊರವಲಯದಲ್ಲಿ ಸ್ಥಾಪನೆ ಮಾಡುವಂತೆ ಆದೇಶ ನೀಡಿತ್ತು. ಆದರೆ, ಹಾರೋಹಳ್ಳಿಯಲ್ಲಿ ಕೈಗಾರಿಕಾ ವಲಯದಲ್ಲಿ ಕಸಾಯಿಖಾನೆ ಸ್ಥಾಪನೆ ಮಾಡಲು ಹೊರಟಿರುವುದು ಸುತ್ತಮುತ್ತಲಿನ ರೈತರು, ಪರಿಸರ ಹಿತದೃಷ್ಟಿಯಿಂದ ಒಳ್ಳೆಯದಲ್ಲ. ಹಾಗಾಗಿ ಕೈಗಾರಿಕೆಗಳ ಒಳಿವಿಗಾಗಿ ಈ ಉದ್ದೇಶಿತ ಯೋಜನೆಯನ್ನು ಕೈಬಿಡಬೇಕೆಂದು ಸಿಂಧ್ಯ ಅವರು ಮುಖ್ಯಮಂತ್ರಿಗಳನ್ನು ಒತ್ತಾಯಿಸಿದ್ದಾರೆ.

English summary
Bruhat Bengaluru Maha Nagara Palike(BBMP) proposal to build Slaughterhouse in Kanakapura taluk Industrial area is opposed by JDS leader PGR Sindhia. Kanakapura industrial area covers over 4000 acres of land and more than 20,000 work in this area. Slaughter house in this area will pollute the human environment
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X