ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಳ್ಳಾರಿಯಲ್ಲಿ ಅದಿರು ಸಾಗಣಿಕೆದಾರರ ಮೇಲೆ ಐಟಿ ದಾಳಿ

By Rohini Bellary
|
Google Oneindia Kannada News

Belekeri scam : IT raid in Hospet
ಬಳ್ಳಾರಿ, ಫೆ. 15 : ಬೇಲೇಕೇರಿ ಬಂದರು ಪ್ರದೇಶದಿಂದ ಕಬ್ಬಿಣದ ಅದಿರನ್ನು ವಿದೇಶಕ್ಕೆ ರಪ್ತು ಮಾಡಿರುವ ವಿವಾದದ ಹಿನ್ನೆಲೆಯಲ್ಲಿ ಹೊಸಪೇಟೆಯ ಕೆಲ ಅದಿರು ಸಾಗಾಣಿಕೆದಾರರ ಮನೆ ಮತ್ತು ಕಚೇರಿಗಳ ಮೇಲೆ ಆದಾಯ ತೆರಿಗೆ ಅಧಿಕಾರಿಗಳ ತಂಡ ಮಂಗಳವಾರ ನಸುಕಿನಿಂದಲೇ ದಾಳಿ ನಡೆಸಿದೆ.

ಹೊಸಪೇಟೆಯ ಡ್ರೀಂ ಲಾಜಸ್ಟಿಕ್‌ನ ವಿವೇಕ್ ಹೆಬ್ಬಾರ್ ಮತ್ತು ಈ ಕಂಪನಿಯ ಪಾಲುದಾರರಾದ ಪ್ರಕಾಶ್ ಮತ್ತು ಪ್ರಭು ಹೆಗಡೆ ಅವರ ಮನೆ ಮತ್ತು ಕಚೇರಿಗಳ ಮೇಲೆ ದಾಳಿ ನಡೆದಿದೆ. ದಾಳಿ ಇನ್ನೂ ಮುಂದುವರೆದಿದೆ. ಮಂಗಳವಾರ ನಸುಕಿನ 6 ಗಂಟೆಗೆ ತಂಡಗಳಾಗಿ ಹೊಸಪೇಟೆಯ ವಿವೇಕ್ ಹೆಬ್ಬಾರ್ ಅವರ ಮನೆಗೆ ಆಗಮಿಸಿದ ಆದಾಯ ತೆರಿಗೆಯ 20ಕ್ಕೂ ಹೆಚ್ಚಿನ ಅಧಿಕಾರಿಗಳ ತಂಡ, ಎಡಬಿಡದೇ ತನಿಖೆ ಮುಂದುವರೆಸಿದೆ.

ವಿವೇಕ್ ಹೆಬ್ಬಾರ್ ಅವರ ತಂದೆ ಶಿವರಾಂ ಹೆಬ್ಬಾರ್ ಅವರು 2008ರ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿ, ಸೋತಿದ್ದರು. ಇವರು ಕಾರವಾರದ ಯಲ್ಲಾಪುರ ಮೂಲದವರು. ಅಲ್ಲದೇ, ಡ್ರೀಂ ಲಾಜಸ್ಟಿಕ್ ಕಂಪನಿಗೆ ಸೇರಿದ ಬೆಂಗಳೂರು, ಕಾರವಾರ ಮತ್ತು ಇನ್ನಿತರೆಡೆಯ ಎಲ್ಲಾ ಕೇಂದ್ರಗಳ ಮೇಲೆ ಕೂಡ ದಾಳಿ ನಡೆದಿದೆ.

ಇವರಲ್ಲದೇ ಸಂಪ್ರದಾಯದಂತೆ ವಿವಿಧ ಲಾಜಸ್ಟಿಕ್ ಕಂಪನಿಗಳನ್ನು ನಡೆಸುತ್ತಿದ್ದ ಖಾರದಪುಡಿ ಮಹೇಶ್ ಮತ್ತು ಸ್ವಸ್ತಿಕ್ ನಾಗರಾಜ್ ಅವರ ಕಚೇರಿ, ಮನೆಗಳ ಮೇಲೂ ದಾಳಿ ನಡೆದಿದೆ.

English summary
Income Tax department has raided several people including industrialist Vivek Hebbar, Prabhu Hegde in Hospet, Bellary district in connection with Belekeri port scam. Bellary district news by Rohini Bellary, citizen journalist.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X