ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹಿರಿಯ ನಾಗರೀಕರ ಐಡಿ ಕಾರ್ಡ್ ಪಡೆಯುವುದು ಹೇಗೆ?

By Rajendra
|
Google Oneindia Kannada News

ಬೆಂಗಳೂರು, ಫೆ.15: ಬೆಂಗಳೂರಿನ ಹಿರಿಯ ನಾಗರೀಕರೆ ನಿಮಗೆ ಇನ್ನೂ ಹಿರಿಯ ನಾಗರೀಕರ ಗುರುತಿನ ಚೀಟಿ ಸಿಕ್ಕಿಲ್ಲವೇ? ಅಯ್ಯೋ ಯಾರು ಅಲೀತಾರಪ್ಪ ಈ ವಯಸ್ಸಲ್ಲಿ ಎಂದು ಮೂಗು ಮುರಿಯಬೇಡಿ. ಏಕೆಂದರೆ ಹಿರಿಯ ನಾಗರೀಕರ ಗುರುತಿನ ಚೀಟಿ ಪಡೆಯುವುದು ಈಗ ತುಂಬ ಸುಲಭ. ಅದು ನಿಮ್ಮ ಹಕ್ಕು ಕೂಡ. ನಿರಾಯಾಸವಾಗಿ ನೀವು ಗುರುತಿನ ಚೀಟಿ ಪಡೆಯಲು ಇಲ್ಲಿದೆ ನೋಡಿ ಸುಲಭೋಪಾಯ.

ಬೆಂಗಳೂರಿನ ಸರ್ಕಾರೇತರ ಸಂಸ್ಥೆ ಡಿಗ್ನಿಟಿ ಪ್ರತಿಷ್ಠಾನ ಹಿರಿಯ ನಾಗರೀಕರ ಕ್ಷೇಮಾಭಿವೃದ್ಧಿಗೆ ಅಹರ್ನಿಶಿ ಶ್ರಮಿಸುತ್ತಿದೆ. ಈ ಪ್ರತಿಷ್ಠಾನವು ಹಿರಿಯ ನಾಗರೀಕರ ಮತ್ತು ಅಂಗವಿಕಲರ ಕಲ್ಯಾಣ ನಿರ್ದೇಶನಾಲಯ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ಕರ್ನಾಟಕ ಸರ್ಕಾರದ ಅಧಿಕೃತ ಪರವಾನಗಿ ಪಡೆದಿದ್ದು ಬೆಂಗಳೂರಿನ ಹಿರಿಯ ನಾಗರೀಕರಿಗೆ ಗುರುತಿನ ಚೀಟಿಗಳನ್ನು ವಿತರಿಸುತ್ತಿದೆ.

Senior Citizens ID card
ಅರುವತ್ತು ಪ್ಲಸ್ ದಾಟಿದ ಹಿರಿಯ ನಾಗರೀಕರು ಈ ಪ್ರತಿಷ್ಠಾನದ ಮೂಲಕ ಗುರುತಿನ ಚೀಟಿಗಳನ್ನು ಪಡೆಯಬಹುದು. ಇದಕ್ಕಾಗಿ ವಯಸ್ಸನ್ನು ದೃಢೀಕರಿಸುವ ಪ್ರಮಾಣ ಪತ್ರದನಕಲು ಪ್ರತಿ(ಜೆರಾಕ್ಸ್), ಇತ್ತೀಚಿನ ಎರಡು ಭಾವಚಿತ್ರಗಳು ಹಾಗೂ ವಿಳಾಸ ದೃಢೀಕರಣ ಪತ್ರ, ಸಂಸ್ಕರಣ ಶುಲ್ಕ ರು.25, ರಕ್ತದ ಗುಂಪಿನ ವಿವರ ನೀಡಿದರೆ ಸಾಕು. ಕೇವಲ ಹದಿನೈದು ದಿನಗಳಲ್ಲಿ ನಿಮ್ಮ ಮನೆಬಾಗಿಲಿಗೆ ಹಿರಿಯ ನಾಗರೀಕರ ಗುರುತಿನ ಚೀಟಿಗಳನ್ನು ಡಿಗ್ನಿಟಿ ಪ್ರತಿಷ್ಠಾನ ತಲುಪಿಸಲಿದೆ.

ಹಿರಿಯ ನಾಗರೀಕರಿಗೆಂದೇ ಮೀಸಲಾದ ಸರ್ಕಾರದ ವಿವಿಧ ಯೋಜನೆಗಳ ಪೂರ್ಣ ಲಾಭ ಪಡೆಯಬೇಕಾದರೆ ಹಿರಿಯ ನಾಗರೀಕರ ಗುರುತಿನ ಚೀಟಿ ಅವಶ್ಯಕ. ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ: ಎನ್ ಬಿ ಜಯಪ್ರಕಾಶ್ (ಜೆಪಿ), ನಿರ್ದೇಶಕರು, ಡಿಗ್ನಿಟಿ ಪ್ರತಿಷ್ಠಾನ. ದೂರವಾಣಿ ಸಂಖ್ಯೆ : 9180-4151 1307.

English summary
How to get Senior Citizens ID card? Dignity Foundation, an NGO promoting welfare of the senior citizens, to issue Govt ID Cards to senior citizens of Bangalore. Those 60 + can apply for ID cards producing simple documents like xerox copy of age proof along with their two recent passport photographs, with a processing fee of Rs 25 and also furnishing blood group.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X