ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಿಎಂಟಿಸಿ ದಿನದ ಪಾಸ್ ಐಡಿ ಕಡ್ಡಾಯ ಸರಿ: ಖೇಹರ್

By Mahesh
|
Google Oneindia Kannada News

bmtc
ಬೆಂಗಳೂರು, ಫೆ.15: ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (ಬಿಎಂಟಿಸಿ) ಬಸ್‌ಗಳಲ್ಲಿ ದಿನದ ಪಾಸ್ ಜೊತೆಗೆ ಗುರುತಿನ ಚೀಟಿ ಖರೀದಿಸಬೇಕು. ಆಲ್ಲದೆ, ದಿನದ ಪಾಸ್ ಜೊತೆ ಗುರುತಿನ ಚೀಟಿಯನ್ನು ನಿರ್ವಾಹಕರಿಗೆ ತೋರಿಸಬೇಕು ಎಂಬ ನಿಯಮವಿದೆ. ಗುರುತಿನ ಚೀಟಿಗೆ 25 ರೂಪಾಯಿಗಳ ಕಡ್ಡಾಯ ಮಾಡಿರುವ ಆದೇಶ ಪ್ರಶ್ನಿಸಿ ಪ್ರಶ್ನಿಸಿ ವಸುಮತಿ ಹಾಗೂ ಇತರರು ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದರು. ಆದರೆ, ಗುರುತಿನ ಚೀಟಿ ಕಡ್ಡಾಯ ಮಾಡಿರುವುದು ಸರಿ ಎಂದು ಹೈಕೋರ್ಟ್ ಆದೇಶವನ್ನು ಊರ್ಜಿತಗೊಳಿಸಿದೆ.

ಪಾಸುಗಳ ದುರುಪಯೋಗ ತಡೆಗಟ್ಟುವ ನಿಟ್ಟಿನಲ್ಲಿ ಈ ಕ್ರಮ ತೆಗೆದುಕೊಳ್ಳಲಾಗಿದೆ ಎಂಬ ಬಿಎಂಟಿಸಿ ಪರ ವಕೀಲರ ವಾದವನ್ನು ಮುಖ್ಯ ನ್ಯಾಯಮೂರ್ತಿ ಜೆ.ಎಸ್.ಖೆಹರ್ ಹಾಗೂ ನ್ಯಾಯಮೂರ್ತಿ ಎ.ಎಸ್.ಬೋಪಣ್ಣ ಅವರನ್ನು ಒಳಗೊಂಡ ವಿಭಾಗೀಯ ಪೀಠ ಮಾನ್ಯ ಮಾಡಿದೆ.

35 ರೂಪಾಯಿಗಳ ಪಾಸ್ ಪಡೆದುಕೊಳ್ಳಬೇಕೆಂದರೆ ವಾರ್ಷಿಕವಾಗಿ 25 ರೂಪಾಯಿ ಪಾವತಿಸಿ ಗುರುತಿನ ಚೀಟಿಯನ್ನು ಸಂಸ್ಥೆಯಿಂದ ಪಡೆದುಕೊಳ್ಳುವುದು ಕಡ್ಡಾಯ. ಇಲ್ಲದಿದ್ದರೆ ದಿನದ ಪಾಸ್‌ಗೆ 40 ರೂಪಾಯಿ ಪಾವತಿಸಬೇಕು ಎನ್ನುವುದು ನಿಯಮ. ಇದು ಸರಿಯಲ್ಲ ಎನ್ನುವುದು ಅರ್ಜಿದಾರರ ಆರೋಪವಾಗಿತ್ತು.

ಸ್ಥಳೀಯ ನಾಗರಿಕರು ಎಂದು ಗುರುತಿಸಿಕೊಳ್ಳಲು ರಾಜ್ಯ ಸರ್ಕಾರ 21 ಬಗೆಯ ಗುರುತಿನ ಚೀಟಿಗಳನ್ನು ಗುರುತಿಸಿದೆ. ರೇಷನ್ ಕಾರ್ಡ್, ಪಾಸ್‌ಪೋರ್ಟ್ ಇತ್ಯಾದಿ ಗುರುತಿನ ಚೀಟಿಗಳನ್ನು ತೋರಿಸಿ ದಿನದ ಪಾಸ್ ಪಡೆದುಕೊಳ್ಳುವಂತೆ ಸಂಸ್ಥೆಗೆ ಆದೇಶಿಸಬೇಕು ಎನ್ನುವುದು ವಸುಮತಿ ಹಾಗೂ ಇತರರ ಮನವಿಯಾಗಿತ್ತು.

ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದಲ್ಲಿ ಮಾತ್ರ 25 ರೂಪಾಯಿಗಳ ಪಾಸ್ ವಿತರಣೆ ಮಾಡಲಾಗುತ್ತದೆ ಎಂದು ಅವರು ದೂರಿದ್ದರು. ಆದರೆ ಈ ಚೀಟಿ ನೀಡಲು 30 ಕೇಂದ್ರಗಳನ್ನು ತೆರೆಯಲಾಗಿದೆ. 57 ಸಾವಿರ ಚೀಟಿಗಳನ್ನು ಈಗಾಗಲೇ ವಿತರಿಸಲಾಗಿದೆ ಎಂದು ಬಿಎಂಟಿಸಿ ಪರ ವಕೀಲರು ವಿವರಿಸಿದರು. ಇದನ್ನು ಖೆಹರ್ ಅವರಿದ್ದ ಪೀಠ ಮಾನ್ಯ ಮಾಡಿ ಆದೇಶ ಹೊರಡಿಸಿದೆ.

English summary
Karnataka Hogh Court Chief Justice JS Khehar and AS Bopanna have rejected the public interest litigation (PIL) by Vasumati and other on BMTC Daily bus pass. Vasumati and objected the rule commuters have to show BMTC ID card along daily bus pass. instead other ID proof(passport, DL copy) can be presented without paying extra for getting BMTC ID card she asked in her plea.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X