ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಳ್ಳಾರಿ: ವಂಚಕ ನೌಕರನ ನಕಲಿ ಕಿಡ್ನಾಪ್ ಪ್ರಸಂಗ

By * ರೋಹಿಣಿ, ಬಳ್ಳಾರಿ
|
Google Oneindia Kannada News

Fraud, Kidnap case, Hospet
ಬಳ್ಳಾರಿ, ಫೆ. 14: ಮೇಲಧಿಕಾರಿಗಳಿಗೆ ವಂಚಿಸುವ ಸಲುವಾಗಿ ತನ್ನನ್ನು ಅಪಹರಿಸಿದ್ದಾರೆ ಎಂದು ಸುಳ್ಳು ನಾಟಕ ಆಡಿದ್ದ ತುಂಗಭದ್ರಾ ಜಲಮಂಡಲಿಯ ದಿನಗೂಲಿ ನೌಕರನನ್ನು ಪೊಲೀಸರು ಕೇವಲ 8 ತಾಸುಗಳಲ್ಲಿ ಬಂಧಿಸಿ, ನ್ಯಾಯಾಂಗಕ್ಕೆ ಒಪ್ಪಿಸಿದ್ದಾರೆ. ತುಂಗಭದ್ರಾ ಜಲಮಂಡಲಿಯ (ಟಿಬಿ ಬೋರ್ಡ್) ದಿನಗೂಲಿ ಕಂಪ್ಯೂಟರ್ ಆಪರೇಟರ್ ನಜೀರ್ (28) ಬಂಧಿತ ಆರೋಪಿ .

ತುಂಗಭದ್ರಾ ಜಲಮಂಡಲಿಯ ಅಧಿಕಾರಿಗಳ ಆದೇಶದ ಮೇರೆಗೆ ಹೊಸಪೇಟೆಯ ಸ್ಟೇಟ್ ಬ್ಯಾಂಕ್ ಆಫ್ ಮೈಸೂರು ಮತ್ತು ಪ್ರಗತಿ ಗ್ರಾಮೀಣ ಬ್ಯಾಂಕ್ ಶಾಖೆಗಳಿಂದ 12,73,000 ರುಪಾಯಿ ನಗದನ್ನು ಪಡೆದು ಕಚೇರಿಗೆ ಹಿಂದಿರುಗುವ ಮಾರ್ಗದಲ್ಲಿ ಐವರಿಂದ ಅಪಹರಣಕ್ಕೆ ಒಳಗಾಗಿದ್ದಾಗಿ ಮನೆಗೆ ಮಾಹಿತಿ ನೀಡಿದ್ದನು.

ನಜೀರ್ ಕರೆ ಮಾಡಿದ ಮೊಬೈಲ್ ಸಂಖ್ಯೆಯನ್ನು ಆಧರಿಸಿ ಟವರ್ ಪತ್ತೆ ಮಾಡಿ ಆತನನ್ನು ಬಳ್ಳಾರಿಯ ರಾಜಾ ಡಿಲಕ್ಸ್ ಲಾಡ್ಜ್‌ನಲ್ಲಿ ಪೊಲೀಸರು ಬಂಧಿಸಿದ್ದಾರೆ. ಅಲ್ಲದೇ, ಆರೋಪಿಯಿಂದ 12,12,300 ರುಪಾಯಿ ನಗದು, ಹೊಸಪೇಟೆಯ ಸಾಯಿ ಆಟೋಮೊಬೈಲ್ಸ್‌ನಿಂದ ಖರೀದಿಸಿದ್ದ ದ್ವಿಚಕ್ರ ವಾಹನವನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ.

ಬಂಧಿತ ಆರೋಪಿ ನಜೀರ್ ಐಷಾರಾಮಿ ಜೀವನ ನಡೆಸಲು ಲಕ್ಷಾಂತರ ರುಪಾಯಿ ಕೈಗೆ ಸಿಕ್ಕ ಕೂಡಲೇ ಅಪಹರಣದ ನಾಟಕ ಆಡಿದ್ದು, ಟಿಬಿ ಬೋರ್ಡ್ ಹಾಗೂ ಅಧಿಕಾರಿಗಳಿಗೆ ವಂಚಿಸುವ ಸಂಚು ತನ್ನಲ್ಲಿತ್ತು ಎಂದು ತಪ್ಪೊಪ್ಪಿಕೊಂಡಿದ್ದಾನೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಂ.ಎನ್. ನಾಗರಾಜ್ ಅವರು ವಿವರಿಸಿದರು.

English summary
Tungabhadra board daily wage employee computer operator Nazir who created a drama of kidnap has been held by Bellary police. Who draw over 12 lakhs rupees from SBM and Pragati rural bank informed that he has been kidnapped need help. But, police traced his activities by mobile tracking and found his information was wrong and held him.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X