ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಾಲು ವಿದೇಶಿ ಪಾಲು: ಪ್ರೇಮಿಗಳ ಕೈಗೆಟುಕದ ಕೆಂಗುಲಾಬಿ

By Srinath
|
Google Oneindia Kannada News

rose
ಬೆಂಗಳೂರು, ಫೆ.14- ಇತ್ತೀಚೆಗೆ ದೇಶಾದ್ಯಂತ ಬೆಲೆಯೇರಿಕೆ ಎಂಬ ಪೆಡಂಭೂತ ಕಾಡಿ ಈರುಳ್ಳಿಯು ಬಳಕೆದಾರರ ಕಣ್ಣು ಕೆಂಪಗಾಗಿಸಿತ್ತು. ಆದರೆ ಬೆಲೆ ಹಿಡಿತಕ್ಕೆ ಸಿಗುತ್ತಿದ್ದಂತೆ ಚಿಕ್ಕಬಳ್ಳಾಪುರದ ಕೆಂಪು ಈರುಳ್ಳಿ ಆಕಾಶ ಮಾರ್ಗದಲ್ಲಿ ವಿದೇಶಗಳಿಗೆ ತಲುಪತೊಡಗಿತು.

ಇಲ್ಲಿನ ಕೆಂಪು ಗುಲಾಬಿಯ ಕಥೆಯೂ ಈಗ ಅದೇ ಆಗಿದೆ. ವ್ಯಾಲೆಂಟೇನ್ ಡೇ ನಿಮಿತ್ತ ಕೆಂಪು ಗುಲಾಬಿ ಭಾರಿ ಬೇಡಿಕೆ ಪಡೆದುಕೊಂಡಿದೆ. ಯುರೋಪಿನಲ್ಲಿ ಹಿಮ ಕಾಲವಾದ್ದರಿಂದ ಪುಷ್ಪ ಕೃಷಿ ಅರಳವುದಿಲ್ಲ. ಇದರ ಲಾಭ ಪಡೆಯಲು ಸ್ಥಳೀಯ ಪುಷ್ಪ ಬೆಳೆಗಾರರು ಗುಲಾಬಿ ರಫ್ತಿಗೆ ಆದ್ಯತೆ ನೀಡಿದ್ದಾರೆ. ಇದರಿಂದ ಸ್ಥಳೀಯವಾಗಿ ಗುಲಾಬಿ ಸಾಮಾನ್ಯ ಪ್ರೇಮಿಗಳ ಕೈಗೆಟುಕದಂತಾಗಿದೆ.

ವ್ಯಾಲೆಂಟೇನ್ಸ್ ಡೇ ಪ್ರಯುಕ್ತ ಪ್ರೀತಿಯ ಕಾವು ತೀವ್ರವಾಗುತ್ತಿರುವುರಿಂದ ಗುಲಾಬಿಗೆ ರಾಜ ಮರ್ಯಾದೆ. ಬೆಂಗಳೂರು ಮತ್ತು ಪುಣೆ ರಫ್ತುದಾರರು ತಮ್ಮ ಮಾಲನ್ನು ಬಹುತೇಕ ರಫ್ತು ಮಾಡಿದ್ದಾರೆ. ನೆದರ್‌ಲ್ಯಾಂಡ್, ಜಪಾನ್ ಮತ್ತು ಸಿಂಗಾಪುರ ಮಾರುಕಟ್ಟೆಗೆ ಭಾರಿ ಲಾಭದಲ್ಲಿ ಮಾರಾಟ ಮಾಡಿದ್ದಾರೆ. ವಾರದ ಹಿಂದೆ ಮೂರ್‍ನಾಲ್ಕು ರುಪಾಯಿಗೆ ಸಿಗುತ್ತಿದ್ದ ಗುಲಾಬಿ ಬೆಲೆ ಈಗ ಐದಾರು ಪಟ್ಟು ಹೆಚ್ಚಾಗಿದೆ. ಗಮನಾರ್ಹವೆಂದರೆ ಪ್ರತಿ ವರ್ಷವೂ ಗುಲಾಬಿ ಬೇಡಿಕೆ ವೃದ್ಧಿಸುತ್ತಿದೆ. ಅದಕ್ಕೆ ತಕ್ಕಂತೆ ದರವೂ.

ಕಳೆದ ಬಾರಿ ಬೆಂಗಳೂರು ನಗರವೊಂದರಲ್ಲೇ 15 ಲಕ್ಷಕ್ಕೂ ಹೆಚ್ಚು ಗುಲಾಬಿ ವಿಕ್ರಯವಾಗಿತ್ತು. ಇಂದಿನ ವ್ಯಾಲೆಂಟೇನ್ ಆಚರಣೆ ಸಂದರ್ಭದಲ್ಲಿ 30 ಲಕ್ಷ ಹೂ ಮಾರಾಟವಾಗುವ ಅಂದಾಜಿದೆ. ಹಾಗೆಯೇ ಗುಲಾಬಿಯ ಇಂದಿನ ದರ 25 ರು. ದಾಟಿದರೂ ಅಚ್ಚರಿಯಿಲ್ಲ. ಅಂದರೆ ಒಂದು ಸುಂದರ ಹೂಗುಚ್ಛಕ್ಕೆ 1,000 ರು. ತೆರಬೇಕಾದ ಪರಿಸ್ಥಿತಿ ಪ್ರೇಮಿಗಳದ್ದಾಗಿದೆ. ಕಳೆದ ವರ್ಷ ಇದೇ ದಿನದಂದು ಒಂದು ಕಟ್ ಗುಲಾಬಿಯ ಬೆಲೆ ಗರಿಷ್ಠ ಐದಾರು ರುಪಾಯಿ ಇತ್ತು.

English summary
Rose mainly used in Valentine's Day bouquets is today costing Rs 15-20 compared to Rs 5-8 last year, as such Floriculture blooms
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X